Advertisement
ಪ್ರತಿಭಟನೆ ವೇಳೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿರುವ ಪ್ರತಿಭಟನಾಕಾರರು, ಇಂತಹ ಕ್ರಮಗಳಿಂದ ಸಾರ್ವಜನಿಕರಿಗೆ ಅದರಲ್ಲೂ ವೃದ್ಧರಿಗೆ, ಮಹಿಳೆಯರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ದೂರಿದ್ದಾರೆ. ಹಿಂಬದಿ ಮಾರ್ಗ ಇಲ್ಲದಿದ್ದರೆ ಸಾರ್ವಜನಿಕರು ಒಂದು ಕಿಮೀ ಸುತ್ತು ಹಾಕಿ ಮಿನಿ ವಿಧಾನ ಸೌಧದ ಮುಂಭಾಗದ ಗೇಟಿನ ಮೂಲಕ ಬರಬೇಕಾಗುತ್ತದೆ. ವಿಧಾನಸೌಧದ ಹಿಂದಿನ ಮಹಡಿಯಲ್ಲಿ ನೋಂದಣಿ ಅಧಿಕಾರಿಗಳ ಕಚೇರಿ ಹಾಗೂ ಇತರ ಕಚೇರಿಗಳು ಇರುವುದರಿಂದ ದಿನಾಲೂ ಸಾರ್ವಜನಿಕರು ಬಂದುಹೋಗುತ್ತಾರೆ. ಹಿಂದಿನ ಮಾರ್ಗಗಗಳಿಂದ ನ್ಯಾಯವಾದಿಗಳು, ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸುತ್ತಾರೆ.
ಆವರಣಕ್ಕೆ ಹೊಂದಿಕೊಂಡಂತೆ ಅನೇಕ ಅಂಗಡಿಗಳಿದ್ದು, ಅವರೂ ಸಹ ಹಿಂಬದಿ ಮಾರ್ಗದ ಮೂಲಕವೇ ಬರುತ್ತಾರೆ. ಈಗ ಆ ಎರಡೂ ಮಾರ್ಗಗಳನ್ನು ಬಂದ್ ಮಾಡಿದ್ದರಿಂದ ತೊಂದರೆಯಾಗಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ. ಮಾರ್ಗವನ್ನು ಪುನಃ ಆರಂಭಿಸುವುದು ಹಾಗೂ ಸಿಸಿ ಕ್ಯಾಮರಾ ಅಳವಡಿಕೆ ಮಾಡುವುದು ಸೇರಿದಂತೆ ಒಬ್ಬ ಕಾವಲುಗಾರರನ್ನು ನೇಮಿಸಬೇಕು ಎಂದು
ಆಗ್ರಹಿಸಿದ್ದಾರೆ.
ಸುರೇಶ ಹುನಗುಂಡಿ, ಲಕ್ಷ್ಮೀಕಾಂತ ಎಚ್. ಉದನೂರ್, ಎಸ್.ಎಸ್. ಅಹ್ಮದ್, ಶಿವು ಮಾಡಬೂಳ್, ಅಂಬು ಮಸ್ಕಿ, ಸತೀಶ ಫರತಾಬಾದ್, ರಾಜು ಹರಸೂರ್, ರಾಹುಲ್ ಫರತಾಬಾದ್, ಲಕ್ಷ್ಮೀಕಾಂತ ಹೋಲ್ಡ್ ಮುಂತಾದವರು ಪಾಲ್ಗೊಂಡಿದ್ದರು.