Advertisement

ಮಿನಿ ಟ್ರಾನ್ಸ್‌ಫ‌ರ್‌ ಸ್ಟೇಷನ್‌ ಯೋಜನೆ ಅನುಷ್ಠಾನಕ್ಕೆ ಗ್ರಹಣ

12:44 PM Sep 30, 2020 | Suhan S |

ಬೆಂಗಳೂರು: ಕಸ ಸಂಗ್ರಹ ಮಾಡುವ ಆಟೋಗಳು ಎಲ್ಲೆಂದರಲ್ಲಿ ಕಾಂಪ್ಯಾಕ್ಟರ್‌ಗಳಿಗೆ ವರ್ಗಾಯಿಸುವುದು ತಪ್ಪಿಸಿ ನಿರ್ದಿಷ್ಟ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಪಾಲಿಕೆ ಪರಿಚಯಿಸಿದ್ದ ಮಿನಿ ಟ್ರಾನ್ಸ್‌ಫ‌ರ್‌ ಸ್ಟೇಷನ್‌ ಕಳೆದ ಮೂರು ವರ್ಷಗಳಿಂದ ನನೆಗುದಿಗೆ ಬಿದ್ದಿದೆ.

Advertisement

2017-18ರಲ್ಲಿ ನಗರದ 50 ಪ್ರದೇಶದಲ್ಲಿ ಮಿನಿ ಟ್ರಾನ್ಸ್‌ಫ‌ರ್‌ ಸ್ಟೇಷನ್‌ ಯೋಜನೆಗೆ76ಕೋಟಿ ರೂ. ಮೊತ್ತದಲ್ಲಿ ಟೆಂಡರ್‌ ಕರೆದು ಏಳು ವರ್ಷಗಳ ಕಾಲ ನಿರ್ವಹಣೆಗೆಂದು170ಕೋಟಿ ರೂ. ನಿಗದಿ ಮಾಡಲಾ ಗಿತ್ತು. ಇದಾದ ಬಳಿಕ 2019-20ನೇ ಸಾಲಿನಲ್ಲಿ ಮತ್ತೆ 25 ಕೇಂದ್ರಗಳ ಸ್ಥಾಪನೆಗೆ 40 ಕೋಟಿ ರೂ. ಮೀಸಲಿಡಲಾಗಿತ್ತು.ಆದರೆ,75ಕೇಂದ್ರಗಳಲ್ಲಿಈ ವರೆಗೆಯೋಜನೆಯ ಶೇ.25ರಷ್ಟೂ ಕಾರ್ಯರೂಪಕ್ಕೆಬಂದಿಲ್ಲ. ಉದ್ದೇಶಿತ ಯೋಜನೆಯು 2016-17ರಲ್ಲಿ ರೂಪಗೊಂಡಿದೆ. ಇದಕ್ಕೆ 2018ರಲ್ಲಿ ಕಾರ್ಯಾದೇಶ ನೀಡಲಾಗಿತ್ತು. ಪ್ರತಿ ಎರಡು ವಾರ್ಡ್‌ಗಳಿಗೆ ಒಂದು ಮಿನಿಟ್ರಾನ್ಸ್‌ಫ‌ರ್‌ ಸ್ಟೇಷನ್‌ ಪ್ರಾರಂಭಿಸುವ ಪ್ರಸ್ತಾವನೆಯಿತ್ತು. ಇದಕ್ಕೆ ಬೇಕಾದ ರೀತಿಯಲ್ಲಿ ಮಿನಿ ಟ್ರಾನ್ಸ್‌ಫ‌ರ್‌ ಸ್ಟೇಷನ್‌ಗಳನ್ನು ಬದಲಾವಣೆ ಮಾಡಿ ಕೊಂಡಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಆರು ಘಟಕಗಳು ಸೇವೆಗೆ ಮುಕ್ತವಾದರೂ ಬಳಕೆಯಾಗುತ್ತಿಲ್ಲ. ಮೊದಲ ಹಂತದಲ್ಲಿ 50 ಕೇಂದ್ರಗಳನ್ನು ಅಭಿವೃದ್ಧಿ ಮಾಡದ ಪಾಲಿಕೆ ಮತ್ತೆ 25ಕ್ಕೆ ಅನುದಾನ ಮೀಸಲಿಡುವ ಮೂಲಕ ಅವೈಜ್ಞಾನಿಕವಾಗಿ ಯೋಜನೆ ರೂಪಿಸಿದೆ ಎಂಬ ಪ್ರಶ್ನೆ ಮೂಡಿದೆ.

ಏನಿದು ಮಿನಿಟ್ರಾನ್ಸ್‌ಫ‌ರ್‌ ಸ್ಟೇಷನ್‌?: ಕಸ ಸಂಗ್ರಹ ಮಾಡುವ ಆಟೋ ಟಿಪ್ಪರ್‌ಗಳ ಕಸವನ್ನುಎಲ್ಲೆಂದರಲ್ಲಿಕಾಂಪ್ಯಾಕ್ಟರ್‌ ಗಳಿಗೆ ಕಸವನ್ನು ತುಂಬಿಸುವುದರಿಂದ ವಿವಿಧ ಪ್ರದೇಶಗಳಲ್ಲಿ ಸಮಸ್ಯೆ ಆಗುತ್ತಿತ್ತು. ಈ ಸಮಸ್ಯೆಯನ್ನು ತಪ್ಪಿಸುವ ಉದ್ದೇಶದಿಂದ ಇಂದೋರ್‌ ಮಾದರಿಯಲ್ಲಿ ಮಿನಿಟ್ರಾನ್ಸ್‌ಫ‌ರ್‌ ಸ್ಟೇಷನ್‌ಗಳ ಪರಿಚಯ ಮಾಡಲಾಗಿತ್ತು. ಈ ಕೇಂದ್ರದಲ್ಲಿ ಎರಡು 16 ಕ್ಯೂಬಿಕ್‌ ಮೀಟರ್ನ ಪೋರ್ಟ್ಬಲ್‌ ಕಾಂಪ್ಯಾಕ್ಟರ್‌ ಹಾಗೂ ಜಿವಿಕೆ ಹುಕ್‌ ಹೋಲ್ಡರ್‌ಗಳು ಇರುತ್ತವೆ. (ದೊಡ್ಡ ಕಾಂಪ್ಯಾಕ್ಟರ್‌ ಹಾಗೂ ಕಸ ವಿಲೇವಾರಿ ಮಾಡುವ ಯಂತ್ರ) ಆಟೋಗಳ ಮೂಲಕ ಸಂಗ್ರಹವಾಗುವ ಕಸವನ್ನು ಈ ಕೇಂದ್ರದಲ್ಲಿ ಕಾಂಪ್ಯಾಕ್ಟರ್‌ಗೆ ವರ್ಗಾಯಿಸಲಾಗುತ್ತದೆ.

ನಂತರದಲ್ಲಿ ಕಸವನ್ನು ಕಾಂಪ್ಯಾಕ್ಟರ್‌ನಲ್ಲೇ ಒತ್ತಿ ಮತ್ತಷ್ಟು ಕಸ ಕಾಂಪ್ಯಾಕ್ಟರ್‌ನಲ್ಲಿ ಸಂಗ್ರಹ ಮಾಡಲಾಗುತ್ತದೆ. ಇದರಿಂದ ಸಾರ್ವಜನಿಕರಿಗೆ ಕಸದ ದುರ್ನಾತ ಸಮಸ್ಯೆ ತಪ್ಪುತ್ತದೆ. ರಸ್ತೆಗಳಲ್ಲಿ ಲಿಚೆಟ್‌ (ಕೊಳಚೆ ನೀರು) ಸುರಿಯುವುದೂ ತಪ್ಪುತ್ತದೆ. ಅಲ್ಲದೆ, ಆಟೋಗಳ ಚಾಲಕರು ಕಸ ಸಂಗ್ರಹ ಮಾಡಿಕೊಂಡು ಬರುವವರೆಗೆ ಕಾಂಪ್ಯಾಕ್ಟರ್‌ಗಳ ಚಾಲಕರು ಕಾಯುವುದು ತಪ್ಪಲಿದ್ದು, ಈ ಅವಧಿಯಲ್ಲಿ ಕಾಂಪ್ಯಾಕ್ಟರ್‌ಗಳ ಚಾಲಕರು ಒಂದು ಟ್ರಿಪ್‌ ಮುಗಿಸಬಹುದು. ಇಷ್ಟೇಲ್ಲ ಅನುಕೂಲ ವಿದ್ದರೂ, ಈ ಕೇಂದ್ರಗಳ ಬಳಕೆಗೆ ಮೂಹೂರ್ತ ಕೂಡಿ ಬಂದಿಲ್ಲ.

ಯೋಜನೆ ಅನುಷ್ಠಾನಕ್ಕೆ ಜಾಗದ ಸಮಸ್ಯೆ ಉಂಟಾಗಿದ್ದೂಯೋಜನೆ ಅನುಷ್ಠಾನಕ್ಕೆ ಹಿನ್ನಡೆ ಉಂಟಾಗಿದೆ.ಕೆಲವು ಸದಸ್ಯರೂ ಸಹ ಯೋಜನೆ ಅನುಷ್ಠಾನಕ್ಕೆ ಸಹಕಾರ ನೀಡಲಿಲ್ಲ. ಈಗಾಗಲೇ ಸೇವೆಗೆ ಮುಕ್ತವಾಗಿರುವಕೇಂದ್ರಗಳನ್ನು ಶೀಘ್ರ ಬಳಸಲಾಗುವುದು. ಅನುದಾನ ಬಳಕೆ ಸಂಬಂಧ ಹೊಸಕ್ರಿಯಾಯೋಜನೆ ರೂಪಿಸುತ್ತೇವೆ. ಡಿ. ರಂದೀಪ್‌, ಬಿಬಿಎಂಪಿ ವಿಶೇಷ ಆಯುಕ್ತ(ಘನತ್ಯಾಜ್ಯ)

Advertisement

 

-ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next