ಬೆಂಗಳೂರು: ವಿಶ್ವ ಪರಿಸರ ದಿನದ ಅಂಗವಾಗಿ ಪರಸರ ಸಂರಕ್ಷಣೆ ಜಾಗೃತಿ ಮೂಡಿಸುವ ಸಂಬಂಧ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಭಾನುವಾರ ಕಬ್ಬನ್ ಪಾರ್ಕ್‌ನಲ್ಲಿ ಹಮ್ಮಿಕೊಂಡಿದ್ದ “ಮಿನಿ ಮ್ಯಾರಾಥಾನ್’ಗೆ ಮೇಯರ್ ಸಂಪತ್ ರಾಜ್ ಚಾಲನೆ ನೀಡಿದರು. ವೇಳೆ “ಪ್ಲಾಸ್ಟಿಕ್ ಮಾಲಿನ್ಯ ಹಿಮ್ಮೆಟ್ಟಿಸಿ’ ಘೋಷ ವಾಖ್ಯದಡಿ ಸೈಕಲ್ ಜಾಥಾ, ಕಾಂಪೋಸ್ಟ್ ಸಂತೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದವು.
ನಗರದ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಪರಿಸರ ಭಾಗವಹಿಸಿ, ಸಾರ್ವಜನಿಕರಿಗೆ ಪರಿಸರ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಿದರು. ಕಬ್ಬನ್‌ಪಾರ್ಕ್‌ನಿಂದ ವಿಧಾನಸೌಧವರೆಗೆ ನಡೆದ ಸೈಕಲ್ ಜಾಥಾದಲ್ಲಿ ಐಎಎಸ್ ಅಧಿಕಾರಿಗಳಾದ ಶಾಲಿನಿ ರಜನೀಶ್ ಹಾಗೂ ರಜನೀಶ್ ಗೋಯಲ್ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಂಡಿದ್ದರು.
ವಿದೇಶಿ ರಾಯಭಾರಿ: ಕಬ್ಬನ್ ಪಾರ್ಕ್‌ನಲ್ಲಿ ತೋಟಗಾರಿಕೆ ಇಲಾಖೆ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆಯಲ್ಲಿ ಸಂಸದ ಪಿ.ಸಿ.ಮೋಹನ್, ಕ್ರೀಡಾಪಟು ಪಂಕಜ್ ಅಡ್ವಾಣಿ, ಇಸ್ರೇಲ್, ಜರ್ಮನಿ, ನೆದರ್ ಲ್ಯಾಂಡ್ ಮತ್ತು ಸ್ವೀಡ್ಜರ್ ಲ್ಯಾಂಡ್ ದೇಶದ ರಾಯಬಾರಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಗಣ್ಯರು ವಿವಿಧ ತಳಿಯ ಸುಮಾರು 100 ಗಿಡಗಳನ್ನು ನೆಟ್ಟರು. ಪರಿಸರ ತಜ್ಞರಾದ ಡಾ.ಯಲಪ್ಪ ರೆಡ್ಡಿ ಸೇರಿದಂತೆ ತೋಟಗಾರಿಕೆ ಇಲಾಖೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಲಾಲ್‌ಬಾಗ್‌ನಲ್ಲೂ ಆಚರಣೆ: ಲಾಲ್‌ಬಾಗ್‌ನಲ್ಲಿ ರಾಜ್ಯ ನಡುಗೆ ದಾರರ ಒಕ್ಕೂಟ, ಪರಿಸರ ದಿನಾಚರಣೆಯನ್ನು ಆಚರಿಸಿತು. ಲಾಲ್‌ಬಾಗ್‌ನ ಪಶ್ಚಿಮ ದ್ವಾರದ ಬಳಿ ನಡೆದ ಕಾರ್ಯಕ್ರಮದಲಿ ನೇರಳೆ, ಮಾವು, ಬೇವು, ಗುಲಾಬಿ, ಸಂಪಿಗೆ ಗಿಡ ಸೇರಿದಂತೆ ವಿವಿಧ ಜಾತಿಯ ಸುಮಾರು 150ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು.
ಇದೇ ವೇಳೆ ಮಾತನಾಡಿದ ರಾಜ್ಯ ನಡುಗೆ ದಾರರ ಒಕ್ಕೂಟದ ಅಧ್ಯಕ್ಷ ಸಿ.ಕೆ.ರವೀಂದ್ರ, ಲಾಲ್‌ಬಾಗ್ ಸಂರಕ್ಷಣೆ ಮತ್ತು ಸ್ಪತ್ಛತೆಯ ಬಗ್ಗೆ ಸಾರ್ವಜನಿಕರಿಗೆ ತಿಳಿ ಹೇಳಿದರು. ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರ್, ಸಮಾಜ ಸೇವಕ ತಿಮ್ಮೇಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.