Advertisement
ಶಿಕ್ಷಣ ನಿರ್ದೇಶನಾಲಯದ ಸುತ್ತೋಲೆಯ ಪ್ರಕಾರ ಎಲ್ಲ ಶಾಲೆ ಗಳ ವೇಳಾಪಟ್ಟಿಯಲ್ಲಿ ಮಧ್ಯಾಹ್ನ ಊಟದ ಎರಡೂವರೆ ಗಂಟೆಗೂ ಮುನ್ನ, 10 ನಿಮಿಷದ ಸ್ನ್ಯಾಕ್ ಬ್ರೇಕ್ ಇರಬೇಕು.
ಪ್ರತೀ ದಿನ ಮೂರು ಆಹಾರ ಪದಾರ್ಥಗಳ ಆಯ್ಕೆಯನ್ನು ಮಿನಿ ಬಾಕ್ಸ್‌ಗೆ ನೀಡಲಾಗಿದೆ. ಹಣ್ಣು, ಸಲಾಡ್, ಹುರಿದ ಕಾಳು, ಮೊಳಕೆ ಕಾಳು ಇತ್ಯಾದಿ ಪದಾರ್ಥಗಳನ್ನು ಮಿನಿ ಬಾಕ್ಸ್ ಕಡ್ಡಾಯವಾಗಿ ಹೊಂದಿರಬೇಕು. ಪ್ರತೀ ವಾರದ ಆಹಾರದ ಪಟ್ಟಿಯನ್ನು ತಯಾರಿಸಿ, ಶಾಲೆಯ ಎಲ್ಲ ತರಗತಿಗಳಲ್ಲೂ ಅದನ್ನು ಅಳವಡಿಸಬೇಕು. ವಾರದ ಆಹಾರ ಪಟ್ಟಿಯಲ್ಲಿರುವ ಪದಾರ್ಥಗಳು ದುಬಾರಿ ಯಾಗದ ರೀತಿಯಲ್ಲಿ ಯೋಜನೆಯನ್ನು ತಯಾರಿಸಬೇಕು. ಜತೆಗೆ ಮಕ್ಕಳು, ಪಟ್ಟಿಯಲ್ಲಿರುವ ಒಂದು ಪದಾರ್ಥವನ್ನಾದರೂ ತರು ವಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶನಾಲಯ ತಿಳಿಸಿದೆ.
Related Articles
Advertisement
ಪೋಷಕರಿಗೆ ಸಮಾಲೋಚನೆ: ಉತ್ತಮ, ಪೌಷ್ಟಿಕಯುಕ್ತ ಆಹಾರ ಸೇವನೆ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ನಡು ವಿನ ಪ್ರಾಮುಖ್ಯದ ಅರಿವು ಮೂಡಿಸಲು, ಶಾಲೆಗಳಲ್ಲಿ ಗೃಹ ವಿಜ್ಞಾನ ಶಿಕ್ಷಕರ ನೇತೃತ್ವದಲ್ಲಿ ತರಗತಿವಾರು ವಿದ್ಯಾರ್ಥಿಗಳ ಪೋಷಕರಿಗೆ ಸಮಾಲೋಚನೆ ನಡೆಸಬೇಕು. ಈ ಅವಧಿಯಲ್ಲಿ ಕಡಿಮೆ ವೆಚ್ಚದಲ್ಲಿ ತಯಾರಿಸಬಹುದಾದ ಅತೀ ಹೆಚ್ಚು ಪೌಷ್ಟಿಕಾಂಶ ವಿರುವ ಆಹಾರ ಪದಾರ್ಥಗಳ ಬಗ್ಗೆ ಪೋಷಕರಲ್ಲಿ ಅರಿವು ಮೂಡಿ ಸಬೇಕು. ಅನಾರೋಗ್ಯದ ಹಿನ್ನೆಲೆಯಲ್ಲಿ ಶಾಲೆಗೆ ಗೈರಾಗುವ ವಿದ್ಯಾರ್ಥಿಗಳ ಹಾಜರಾತಿಯನ್ನು ಹೆಚ್ಚಿಸುವಲ್ಲಿ, ವಿದ್ಯಾರ್ಥಿಗಳ ಪರಿಪೂರ್ಣ ಬೆಳವಣಿಗೆಗೆ ಈ ಯೋಜನೆ ಉತ್ತೇಜನ ನೀಡಲಿದೆ ಎಂದು ತಿಳಿಸಿದೆ.