Advertisement
ಊರಿನ ಬೊಂಡಕ್ಕೆ 35 ರೂ. ಧಾರಣೆ ಇದ್ದರೆ, ತಮಿಳು ನಾಡಿನಿಂದ ಬರುವ ಗೆಂದಾಲೇ ಬೊಂಡಕ್ಕೆ 40 ರೂ. ಧಾರಣೆ ಇದೆ. ಸೀಯಾಳವು ನಿರೀಕ್ಷಿತ ಪ್ರಮಾಣದಲ್ಲಿ ಲಭ್ಯ ಆಗದಿರುವ ಕಾರಣ, ದರದಲ್ಲಿ ಇನ್ನಷ್ಟು ಏರಿಕೆ ಕಾಣಲಿದೆ ಎನ್ನುತ್ತಾರೆ ಕೆಲ ವ್ಯಾಪಾರಿಗಳು.
Related Articles
ತಮಿಳುನಾಡಿನಲ್ಲಿ ತೆಂಗು ಉತ್ಪಾದನೆ ಕುಸಿತ ಕಂಡ ಕಾರಣ, ದೇಶದ ಅತಿ ದೊಡ್ಡ ತೆಂಗು ಮಾರುಕಟ್ಟೆ ಕೊಯಮುತ್ತೂರು ಹಾಗೂ ಕಾಂಗಯಂಗಳಲ್ಲಿ ಬೇಡಿಕೆಗೆ ತಕ್ಕಂತೆ ತೆಂಗಿನಕಾಯಿ ಸಿಗುತ್ತಿಲ್ಲ. ಹೀಗಾಗಿ ಕರ್ನಾಟಕ, ಕೇರಳದಿಂದ ಬೇಡಿಕೆ ಹೆಚ್ಚಾಗಿದೆ. ದೇಶದ ಪ್ರಮುಖ ತೆಂಗು ಉತ್ಪಾದನ ರಾಜ್ಯಗಳಾದ ಕೇರಳ, ಕರ್ನಾಟಕ ಹಾಗೂ ಆಂಧ್ರಪ್ರದೇಶಗಳಲ್ಲಿ ಉತ್ಪಾದನೆ ಪ್ರಮಾಣ ಗಣನೀಯ ಇಳಿಕೆ ಕಂಡಿದೆ ಅನ್ನುತ್ತದೆ ಈಗಿನ ಅಂಕಿ-ಅಂಶ.
Advertisement
ಕರ್ನಾಟಕ, ಕೇರಳ ಹಾಗೂ ಆಂದ್ರಪ್ರದೇಶದಲ್ಲಿ ತೆಂಗಿನಕಾಯಿ ಕಟಾವು ಹೊತ್ತಲ್ಲಿ, ತಮಿಳುನಾಡಿನಲ್ಲಿ ತೆಂಗು ಹೂ ಬಿಡುವ ಕಾಲ. ಇತ್ತೀಚೆಗೆ ತಮಿಳುನಾಡಿನಲ್ಲಿ ನೆರೆ ಉಂಟಾದ ಕಾರಣ, ಅಲ್ಲಿ ಇಳುವರಿ ಕಡಿಮೆ ಆಗಿದೆ. ಹೀಗಾಗಿ ತೆಂಗು ಮಾರುಕಟ್ಟೆ ಕೊಯಮುತ್ತೂರು ಹಾಗೂ ಕೋಕನೆಟ್ ಸಿಟಿ ಖ್ಯಾತಿಯ ಕಾಂಗಯಂ ಮಾರುಕಟ್ಟೆಗೆ ಕೇರಳ, ಕರ್ನಾಟಕ ಹಾಗೂ ಆಂಧ್ರಪ್ರದೇಶದ ತೆಂಗು ಅನಿವಾರ್ಯವಾಗಿರುವುದು ಕೂಡ ಸೀಯಾಳ ಕೊರತೆಗೆ ಕಾರಣ ಆಗಿರಬಹುದು ಎಂದು ಅಂದಾಜಿಸಲಾಗಿದೆ.
ಸೀಯಾಳ ಪೂರೈಕೆನಗರಕ್ಕೆ ಎರಡು-ಮೂರು ದಿವಸಕೊಮ್ಮೆ ಸೀಯಾಳ ಪೂರೈಕೆ ಆಗುತ್ತದೆ. ಮಂಗಳೂರು, ಕೆಲವೊಮ್ಮೆ ಮೈಸೂರು, ಗ್ರಾಮಾಂತರ ಪ್ರದೇಶದಿಂದ ಪೂರೈಕೆ ಆಗುತ್ತದೆ. ಕೆಂದಾಳೆ ತಮಿಳುನಾಡಿನಿಂದ ಬರುತ್ತಿದ್ದು, ವಾರಕ್ಕೊಮ್ಮೆ ವಿಲೇವಾರಿ ಮಾಡಲಾಗುತ್ತದೆ. ಸೀಜನ್ ಗೆ ತಕ್ಕಂತೆ ಖರೀದಿಸಲಾಗುತ್ತದೆ ಎನ್ನುತ್ತಾರೆ ಸ್ಥಳೀಯ ವ್ಯಾಪಾರಿಗಳು. ಮಂಗನ ಹಾವಳಿ
ಮಂಗನ ವಿಪರೀತ ಹಾವಳಿಯಿಂದ ತೆಂಗಿನ ಮರ ಬರಿದಾಗಿರುವುದು ಊರಿನ ಸಿಯಾಳ ಕೊರತೆ ಮುಖ್ಯ ಕಾರಣ. ಮಂಗ ಓಡಿಸಲು ಏನೇ ಪ್ರಯೋಗ ಮಾಡಿದರೂ, ಅದರಿಂದ ಪ್ರಯೋಜನ ಸಿಗುತ್ತಿಲ್ಲ. ಹಾಗಾಗಿ ತೋಟದಲ್ಲಿನ ತೆಂಗಿನ ಮರದಲ್ಲಿ ಸೀಯಾಳ ಇಲ್ಲ. ಮುಂದಕ್ಕೆ ತೆಂಗಿನ ಕಾಯಿಯು ಸಿಗದು. ಕಳೆದ ಬಾರಿ 200 ಕ್ಕೂ ಅಧಿಕ ಸೀಯಾಳ ಮಾರಿದ್ದೆ. ಈ ಬಾರಿ ಮಂಗನ ಕಾಟದಿಂದ ಮಾರಿಲ್ಲ ಅನ್ನುತ್ತಾರೆ ಪ್ರಗತಿಪರ ಕೃಷಿಕ ಶ್ರೀಧರ ನೀರ್ಕಜೆ.