Advertisement
ಹುಡುಗ,ಹಗಲಿರುಳುಗಳ ನಡುವಿನಲ್ಲಿ ಯಂತ್ರದಂತೆ ಸಾಗುತ್ತಿದೆ ಬದುಕು, ಯಾವುದರಲ್ಲಿಯೂ ತಲ್ಲೀನಗೊಳ್ಳದೆ ಛಿಧ್ರಗೊಳ್ಳುತ್ತಿರುವ ಹೃದಯದ ಒಡಕು, ಏನೋ ಕಳೆದುಕೊಳ್ಳುತ್ತಿದ್ದೇನೆಂಬ ಅವ್ಯಕ್ತ ಭಯ, ಯಾವ ದಾರಿಯೆಡೆಗೂ ಹೆಜ್ಜೆಯಿಡಲು ಮುಗಿಯದ ಗೊಂದಲದ ಸಮಯ, ನಿರೀಕ್ಷೆ ಎಂಬುದು ಮುಳುಗತೊಡಗಿರುವ ತಳ ಒಡೆದ ದೋಣಿ. ಆದರೂ ಒಂದೇ ಒಂದು ಬಾರಿ ನಿನ್ನ ನೋಡಬೇಕೆಂಬ ಅಪೇಕ್ಷೆಗೆ ಮನಸು ಹಿಡಿಯುತ್ತಿದೆ ಸಾಣಿ. ಅದೆಷ್ಟು ಸಾವಿರ ಸಲ ನಿನ್ನ ಮೊಬೈಲ್‌ಗೆ ಕಾಲ್ ಮಾಡಿದ್ದೇನೋ? ಅದೇ ಸಾವಿನಂಥ ಸ್ವರದಲ್ಲಿ, ನನ್ನೆಡೆಗಿನ ನಿನ್ನ ಕೊನೆಯ ಮಾತೇನೋ ಅನ್ನುವ ಹಾಗಿನ ದನಿ.. ಸ್ವಿಚ್‌ಆಫ್.
Related Articles
ನಿನ್ನಲ್ಲಿ ಕಾಣುತಾ ಹೀಗಾಯಿತೆ
ಕೈಯಿಂದ ಜಾರಿತೇನೋ ನನ್ನಯ ಕತೆ
ನೀನು ನನ್ನ ಬದುಕಿನ ಕತೆಗಾರ. ಬರೆಯ ಬಾರೋ ಒಂದು ಸಾಲನ್ನಾದರೂ, ನಿನಗಾಗೇ ಸದಾ ಕಾಯುತ್ತಲೇ ಉಳಿಯುವ ಹೊರತು, ಮತ್ತೂಂದು ಆಸೆಯಿಲ್ಲ ಮನಸಿಗೆ. ಜಗತ್ತು ನನ್ನನ್ನು ಹುಚ್ಚಿ ಅನ್ನುತ್ತದೆ. ಅದು ಮನಸು ಮಾರಿಕೊಂಡ ಜಗತ್ತಿನ ಲೆಕ್ಕಾಚಾರ. ಅದು ಹೃದಯಹೀನರ ಮುಖವಾಡ ಧರಿಸಿದ ಬದುಕಿನ ವ್ಯಾಪಾರ. ಅದೆಲ್ಲಾ ಯಾವತ್ತೂ ನನ್ನನ್ನು ಸೋಕಲಾರದು ಗೆಳೆಯ.
Advertisement
ಕಳೆದುಹೋದ ನಿನ್ನನ್ನು ಮತ್ತೆ ಪಡೆಯುವಷ್ಟು ಪರಿಶುದ್ಧಳಾಗಿದ್ದೇನೆ. ಒಮ್ಮೆ ನಿನ್ನ ಹೃದಯದ ಮಾತು ಕೇಳು; ಅದು ನನ್ನ ವಿಳಾಸ ಹೇಳುತ್ತದೆ. ಅಲ್ಲೇ ಇದ್ದೇನೆ, ಅಲ್ಲೇ, ನೀ ಬಿಟ್ಟು ಹೋದಲ್ಲೇ!
ನಿನ್ನವಳುಅಮ್ಮು ಮಲ್ಲಿಗೆಹಳ್ಳಿ ಜೀವ ಮುಳ್ಳೂರು