Advertisement

ಮನಸ್ಸಿನ ಮೈಲಿಗೆ ಕಳೆದ ಮಾಚಿದೇವ

11:07 AM Feb 02, 2018 | Team Udayavani |

ಜೇವರ್ಗಿ: ಮಡಿವಾಳ ಮಾಚಿದೇವರು ಕೇವಲ ಶರಣರ ಬಟ್ಟೆಗಳನ್ನು ಮಡಿ ಮಾಡದೇ ಸಮಾಜದ ಜನರ ಮನಸ್ಸಿಗೆ ಅಂಟಿದ ಮೈಲಿಗೆ ಕಳೆದ ಮಹಾನ್‌ ಶರಣ ಎಂದು ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ದೇವಕ್ಕೆಮ್ಮ ಚನ್ನಮಲ್ಲಯ್ಯ ಹಿರೇಮಠ ಹೇಳಿದರು. 

Advertisement

ಪಟ್ಟಣದ ಮಿನಿ ವಿಧಾನಸೌಧ ಕಚೇರಿ ಆವರಣದಲ್ಲಿ ತಾಲೂಕಾಡಳಿತ ವತಿಯಿಂದ ಆಯೋಜಿಸಲಾಗಿದ್ದ ಶರಣ ಮಡಿವಾಳ ಮಾಚಿದೇವ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಮಹಾ ಶರಣ ಮಡಿವಾಳ ಮಾಚಿದೇವ ಮರ್ತ್ಯದ ಮನದ ಮೈಲಿಗೆ ಕಳೆಯಲೆಂದು ಜನಿಸಿದ ಕಲ್ಯಾಣದ ಶರಣರಲ್ಲಿ ಒಬ್ಬರು. ವಿಶ್ವಗುರು ಅಣ್ಣ ಬಸವಣ್ಣನವರ ಕ್ರಾಂತಿಯ ಸೆಳೆತದಿಂದ ಕಲ್ಯಾಣಕ್ಕೆ ಬಂದು, ಸತ್ಯ, ನ್ಯಾಯ, ನಿಷ್ಠೆ, ನಿರಹಂಕಾರ ಸುಜ್ಞಾನ ವೀರನಿಷ್ಠೆಗೆ ಸಾಕಾರ ಮೂರ್ತಿಯಾದವರು ಮಡಿವಾಳರು ಎಂದು ವಿವರಿಸಿದರು.

ಬಸವಣ್ಣನವರ ಬಲಗೈಯಂತಿದ್ದವರು ಮಡಿವಾಳರು. ಬಸವಣ್ಣ ಕಲ್ಯಾಣ ತೊರೆದ ನಂತರ ಶರಣರಿಗೆ ನಾಯಕರಂತಿದ್ದವರು. ಬಿಜ್ಜಳನ ಕೊಲೆಯ ತರುವಾಯ ಶರಣರನ್ನು ಮತ್ತು ವಚನಗಳನ್ನು ರಕ್ಷಿಸಿದ ಮಹಾನ್‌ ವೀರ. ಮಡಿವಾಳರ ದಿಟ್ಟತನ, ಮಾನವೀಯತೆ, ನೇರ ನುಡಿ ಎಲ್ಲರಿಗೂ ಅನುಕರಣೀಯ. ಮಾಚಿದೇವರ ಬದುಕು, ಕಾಯಕ, ವಚನಗಳು ಭಾರತೀಯ ಸಂಸ್ಕೃತಿಗೆ ಆದರ್ಶಪ್ರಾಯ ಆಗಿವೆ ಎಂದು ಹೇಳಿದರು.

ಜಿಪಂ ಸದಸ್ಯ ಶಿವರಾಜ ಪಾಟೀಲ ರದ್ಧೇವಾಡಗಿ, ಮಡಿವಾಳ ಸಮಾಜದ ಅಧ್ಯಕ್ಷ ದೇವಿಂದ್ರಪ್ಪ ಮಡಿವಾಳ ಹಿಪ್ಪರಗಾ ಎಸ್‌.ಎನ್‌, ಲೋಕೋಪಯೋಗಿ ಇಲಾಖೆ ಎಇಇ ಪಲ್ಲಾಸತ್ಯಾಶೀಲ ರೆಡ್ಡಿ, ಪುರಸಭೆ ಮುಖ್ಯಾಧಿ ಕಾರಿ ಬಾಬುರಾವ್‌ ವಿಭೂತೆ ಆಗಮಿಸಿದ್ದರು. ಕಿರಿಯ ಇಂಜಿನಿಯರ್‌ ನಾನಾಸಾಹೇಬ ಮಡಿವಾಳ ಉಪನ್ಯಾಸ ನೀಡಿದರು.

Advertisement

ಕಸಾಪ ಅಧ್ಯಕ್ಷ ಶಿವಣಗೌಡ ಹಂಗರಗಿ, ಬಸವಕೇಂದ್ರ ಅಧ್ಯಕ್ಷ ಶರಣಬಸವ ಕಲ್ಲಾ, ಚನ್ನಮಲ್ಲಯ್ಯ ಹಿರೇಮಠ, ಶಿವಪ್ಪ ಮಡಿವಾಳಕರ್‌, ಬಸವರಾಜ ಮಡಿವಾಳಕರ್‌, ಭೀಮರಾವ್‌ ಮಡಿವಾಳಕರ್‌, ಭಗವಂತ್ರಾಯ ಬೆಣ್ಣೂರ, ಮರೆಪ್ಪ ಸರಡಗಿ ಭಾಗಿಯಾಗಿದ್ದರು. ತಹಶೀಲ್ದಾರ್‌ ಬಸವಲಿಂಗಪ್ಪ ನಾಯ್ಕೋಡಿ ಸ್ವಾಗತಿಸಿದರು, ಬಿಸಿಎಂ ಅಧಿಕಾರಿ ವಿ.ಬಿ. ಹಿರೇಗೌಡ ನಿರೂಪಿಸಿ, ವಂದಿಸಿದರು. ಇದಕ್ಕು ಮುನ್ನ ಹಳೆ ತಹಶೀಲ್ದಾರ್‌ ಕಚೇರಿಯಿಂದ ಮಿನಿ ವಿಧಾನಸೌಧ ಕಚೇರಿಯವರೆಗೆ ಮಡಿವಾಳ ಮಾಚಿದೇವರ ಭಾವಚಿತ್ರದ ಅದ್ಧೂರಿ ಮೆರವಣಿಗೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next