Advertisement

ಪ್ರಶಸ್ತಿಯಿಂದ ಹೊಣೆಗಾರಿಕೆ ಹೆಚ್ಚಳ

11:22 AM Dec 02, 2018 | Team Udayavani |

ಆಳಂದ: ಮಠದ ಧರ್ಮ ಸೇವೆಯೊಂದಿಗೆ ಸಾಮೂಹಿಕ ವಿವಾಹ, ಕೃಷಿಯಲ್ಲಿ ಸಾಧನೆ ಸೇರಿದಂತೆ ಸಮಾಜಮುಖೀ ಕಾರ್ಯ ಮಾಡಿದವರಿಗೆ ನೀಡುವ ಗೌರವ ಡಾಕ್ಟರೇಟ್‌ನ್ನು ಶಿವಲಿಂಗೇಶ್ವರ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಡಾ| ಶಂಭುಲಿಂಗ ಶಿವಾಚಾರ್ಯರಿಗೆ ಪಾಂಡಿಚೇರಿ ಅಂತಾರಾಷ್ಟ್ರೀಯ ವಿಶ್ವ ವಿದ್ಯಾಲಯ ನೀಡಿದ್ದು, ಈ ಪ್ರಶಸ್ತಿಗಳು ಸಾಮಾಜಿಕ ಹೊಣೆಗಾರಿಕೆ ಹೆಚ್ಚಳ ಮಾಡುತ್ತವೆ ಎಂದು ಶಾಸಕ ಸುಭಾಷ ಗುತ್ತೇದಾರ ಹೇಳಿದರು.

Advertisement

ತಾಲೂಕಿನ ಪಡಸಾವಳಿ ಮಠದ ಶಂಭುಲಿಂಗ ಶಿವಾಚಾರ್ಯರಿಗೆ ಗೌರವ ಡಾಕ್ಟರೇಟ್‌ ಲಭಿಸಿದ್ದಕ್ಕೆ ಗ್ರಾಮದ ಶಿವಲಿಂಗೇಶ್ವರ ಸಂಸ್ಥಾನ ಮಠದಲ್ಲಿ ಭಕ್ತರು ಹಮ್ಮಿಕೊಂಡಿದ್ದ ಅಭಿನಂಧನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಗುರುಗಳಿಗೆ ಗೌರವ ಡಾಕ್ಟರೇಟ್‌ ಬಂದಿದ್ದಕ್ಕೆ ಖುಷಿಯಾಗಿದೆ. ಶ್ರೀಗಳು ಡೋಣಗಾಂವ, ಉದಗೀರ ಮಠಗಳಿಗಿಂತ ಇಲ್ಲಿನ ಮಠಕ್ಕೆ ಮೊದಲ ಪ್ರಾಶಸ್ತ್ಯ ನೀಡಬೇಕು ಎಂದು ಮನವಿ ಮಾಡಿದರಲ್ಲದೇ, ಮಠದಲ್ಲಿ ಸಮುದಾಯ ಭವನ ನಿರ್ಮಿಸಲು ಅನುದಾನ ನೀಡುವುದಾಗಿ ಭರವಸೆ ನೀಡಿದರು.

ಹಿರೇನಾಗಾಂವ ಮಠದ ಶ್ರೀ ಜಯಶಾಂತಲಿಂಗ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಅಚಲೇರ ಮಠದ ಪೀಠಾಧಿಪತಿ ಬಸವರಾಜೇಂದ್ರ ಸ್ವಾಮೀಜಿ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಿತು. ಕಲಬುರಗಿಯ ಶಿವರಾಜ ಪಾಟೀಲ ಉಪನ್ಯಾಸ ನೀಡಿ, ಶ್ರೀಗಳು ಸಾರ್ವಜನಿಕರು, ರೈತರು, ಭಕ್ತರ ಪರವಾಗಿ ಮಾಡಿದ ಅನುಪಮ ಸೇವೆಗೆ ಗೌರವ ಡಾಕ್ಟರೆಟ್‌ ಲಭಿಸಿದೆ ಎಂದು ಹೇಳಿದರು.

ಭಕ್ತರ ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ| ಶಂಭುಲಿಂಗ ಶಿವಾಚಾರ್ಯರು ನಾನು ಕಾಡಿ, ಬೇಡಿ ತೆಗೆದುಕೊಂಡ ಡಾಕ್ಟರೆಟ್‌ ಪದವಿ ಇದಲ್ಲ. ಜನಪರ, ಜೀವಪರ ಕಾಳಜಿಗೆ ಸಂದ ಗೌರವ ಇದಾಗಿದೆ. ಇದು ಮಠಕ್ಕೆ ಮತ್ತು ಭಕ್ತರಿಗೆ ಸಲ್ಲುವ ಗೌರವ ಎಂದರು.

Advertisement

ಅಣದೂರಿನ ಶಿವಯೋಗೇಶ್ವರ ಶಿವಾಚಾರ್ಯರು, ಅಕ್ಕಲಕೋಟದ ಬಸವಲಿಂಗ ಸ್ವಾಮೀಜಿ, ನರೋಣಾದ ಗುರುಮಹಾಂತ ಸ್ವಾಮೀಜಿ, ಆಳಂದದ ಸಿದ್ದೇಶ್ವರ ಶಿವಾಚಾರ್ಯರು, ರಾಜೇಶ್ವರದ ಘನಲಿಂಗ ಶಿವಾಚಾರ್ಯರು, ಅಚಲೇರದ ಶಿವಮೂರ್ತಿ ಶಿವಾಚಾರ್ಯರು, ಕೇಸರಜವಳಗಾದ ವೀರಂತೇಶ್ವರ ಸ್ವಾಮೀಜಿ, ಜವಳಿಯ ಗಂಗಾಧರ ಸ್ವಾಮೀಜಿ, ಕಡಣಿಯ ರೇವಣಸಿದ್ದ ಸ್ವಾಮೀಜಿ ಸಮ್ಮುಖ ವಹಿಸಿದ್ದರು.

ಗ್ರಾಪಂ ಅಧ್ಯಕ್ಷೆ ಭೌರಮ್ಮ ಮಲ್ಲಿನಾಥ ಧುಲಂಗೆ ಅಧ್ಯಕ್ಷತೆ ವಹಿಸಿದ್ದರು. ಮುಖಂಡ ಮಲ್ಲಣ್ಣಾ ನಾಗೂರೆ, ಶರಣಬಸಪ್ಪ ಬಿರಾದಾರ, ರಮೇಶ ಲೋಹಾರ, ಕಾಂಗ್ರೆಸ್‌ ಜಿಲ್ಲಾ ಮುಖಂಡ ಶಂಕರರಾವ ದೇಶಮುಖ ನಿರಗುಡಿ, ರೇವಣಸಿದ್ದಪ್ಪ ನಾಗೂರೆ, ಸೋಮನಾಥ ಪಾಟೀಲ, ಅಶೋಕ ಹೌದೆ, ವೈಜನಾಥ ಕೋರೆ, ಸಿದ್ರಾಮಪ್ಪ ಕುಂಬಾರ, ಭೋಜರಾಜ ನಿಂಬರ್ಗಿ, ಯಶ್ವಂತ ಪ್ರಜಾರಿ
ಭಾಗವಹಿಸಿದ್ದರು. ಮಹಾದೇವಪ್ಪ ಪೂಜಾರಿ ಭಕ್ತಿಗೀತೆ ಹೇಳಿಕೊಟ್ಟರು.

ರಾಜಕುಮಾರ ಸುತಾರ ಸ್ವಾಗತಿಸಿದರು.ಗಜಾನಂದ ಕುಂಬಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಪಾಲ ಭೋಗಾರ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next