ಜೇವರ್ಗಿ: ಕುಂಬಾರರ ವೃತ್ತಿಗೆ ಬೆಂಬಲ ನೀಡುವ ಸರ್ಕಾರದ ಯೋಜನೆಗಳು ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಶಾಸಕ ಡಾ| ಅಜಯಸಿಂಗ್ ಹೇಳಿದರು.
ಪಟ್ಟಣದ ಇಟಗಿ ದಾಲ್‌ಮಿಲ್ ಆವರಣದಲ್ಲಿ ಗುರುವಾರ ರಾಜ್ಯ ಕುಂಬಾರರ ಯುವ ಸೈನ್ಯ ತಾಲೂಕು ಘಟಕದ ವತಿಯಿಂದ ಆಯೋಜಿಸಲಾಗಿದ್ದ ಕುಂಬಾರರ ಜಾಗೃತಿ ಸಮಾವೇಶ ಹಾಗೂ ತಾಲೂಕ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಂಘಟನೆಯಿಂದ ಸಮಾಜದ ಅಭಿವೃದ್ಧಿಯಾಗಲು ಸಾಧ್ಯ. ಈ ಸಮಾಜದ ಬಾಂಧವರು ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ತೀರಾ ಹಿಂದುಳಿದಿದ್ದಾರೆ. ಸಮಾಜ
ಬಾಂಧವರು ಮಕ್ಕಳಿಗೆ ಮೊದಲು ಗುಣಮಟ್ಟದ ಶಿಕ್ಷಣ ಕೊಡಿಸಬೇಕು. ಪಟ್ಟಣದ ಹೊಸ ಬಸ್ ನಿಲ್ದಾಣ ಪಕ್ಕದಲ್ಲಿರುವ ಸ್ಥಳವನ್ನು ಕುಂಬಾರ ಸಮಾಜಕ್ಕೆ ಕೊಡಿಸುವ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಮಡಿಕೆ, ಕುಡಿಕೆ ಮಾರಾಟ ಮಾಡಲು ಸ್ಥಳಾವಕಾಶದ ಜೊತೆಗೆ ರಾಜಕೀಯ ಸ್ಥಾನಮಾನ ನೀಡಲಾಗುವುದು ಎಂದು ಭರವಸೆ ನೀಡಿದರು.
ಇದಕ್ಕೂ ಮುನ್ನ ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ಸಮಾವೇಶ ಉದ್ಘಾಟಿಸಿದರು. ಸೊನ್ನದ ಡಾ| ಶಿವಾನಂದ ಸ್ವಾಮೀಜಿ, ನಿಡಗುಂದಿಯ ಕರುಣೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕುಂಬಾರ ಯುವ ಸೈನ್ಯ ಅಧ್ಯಕ್ಷ ದೌಲತ್ತರಾಯ ಗುಳ್ಳಾಳ ಅಧ್ಯಕ್ಷತೆ ವಹಿಸಿದ್ದರು.
ಯುವ ಸೈನ್ಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಜಗದೇವ ಕುಂಬಾರ, ಜಿಪಂ ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ದೇವಕ್ಕೆಮ್ಮ ಚನ್ನಮಲ್ಲಯ್ಯ ಹಿರೇಮಠ, ಸದಸ್ಯರಾದ ಶಿವರಾಜ ಪಾಟೀಲ, ಶಾಂತಪ್ಪ ಕೂಡಲಗಿ, ರುಕುಂ ಪಟೇಲ ಇಜೇರಿ, ಚಂದ್ರಶೇಖರ ಹರನನಾಳ, ಸಿದ್ದಲಿಂಗ ರೆಡ್ಡಿ ಇಟಗಿ, ಮಹಿಮೂದ್ ನೂರಿ ದಂಡಪ್ಪ ಸಾಹು ಕುಳಗೇರಿ, ಕಮಲಾಬಾಯಿ ಬಡಿಗೇರ, ಗಂಗಮ್ಮ ದೇಸಾಯಿ, ಸಿದ್ದಲಿಂಗರೆಡ್ಡಿ ಇಟಗಿ, ರುಕುಂ ಪಟೇಲ ಇಜೇರಿ, ಗೊಲ್ಲಾಳಪ್ಪ ಪೂಜಾರಿ, ಭಗವಂತ್ರಾಯಗೌಡ ಅಂಕಲಗಿ, ಖ್ಯಾತಣ್ಣ ಕುಮಬಾರ, ನಿಂಗಣ್ಣ ಮುಖ್ಯ ಅತಿಥಿಗಳಾಗಿದ್ದರು.