Advertisement

ಮನಸ್ಸು ಮತ್ತು ದುಷ್ಪರಿಣಾಮ: ಐನ್ ಸ್ಟೀನ್ ಪಶ್ಚಾತ್ತಾಪಪಟ್ಟಿದ್ರು…ವಿವೇಕ ಸೂತ್ರ ಪ್ರವಚನ

01:10 PM Jul 23, 2020 | Nagendra Trasi |

ಮನಸ್ಸನ್ನು ಉಪಯೋಗಿಸಲು ಎಲ್ಲರಿಂದಲೂ ಆಗುವುದಿಲ್ಲ. ಅತ್ಯಪರೂಪವಾಗಿ ಯಾರೊ ಒಬ್ಬೊಬ್ಬರಿಗೆ ಮಾತ್ರ ಮನಸ್ಸನ್ನು ಉಪಯೋಗಿಸಲು ಆಗುವುದು-ಒಬ್ಬ ಬುದ್ಧ, ಒಬ್ಬ ಜೀಸಸ್, ಒಬ್ಬ ಅತೀಶ, ಒಬ್ಬ ತ್ರಿಲೋಪ, ಒಬ್ಬ ನರೋಪ-ಇಂಥವರಿಂದ ಮಾತ್ರ ಮನಸ್ಸನ್ನು ಉಪಯೋಗಿಸಲು ಆಗುವುದು. ಇವರೆಲ್ಲರೂ ಅತ್ಯಂತ ವಿರಳ ವ್ಯಕ್ತಿಗಳು. ಉಳಿದೆಲ್ಲರನ್ನೂ ಮನಸ್ಸು ಉಪಯೋಗಿಸುತ್ತಿರುವುದು. ಅಂಥ ವಿರಳ ವಿಶಿಷ್ಟ ಸ್ವರೂಪರು ಇಲ್ಲ ಎಂದಾಗಿದ್ದರೆ, ಆಗ ನಿನಗೂ ಬುದ್ಧರಿಗೂ ಏನಿದೆ ವ್ಯತ್ಯಾಸ? ಅದು ಏನೆಂದರೆ ನಿನ್ನ ಮನಸ್ಸು ನಿನ್ನನ್ನು ಉಪಯೋಗಿಸುತ್ತಿರುವುದು, ಬುದ್ಧ ಮನಸ್ಸನ್ನು ಉಪಕರಣವಾಗಿ ಉಪಯೋಗಿಸುತ್ತಿರುವರು-ಇದೇ ವ್ಯತ್ಯಾಸ!

Advertisement

ನಿಮ್ಮ ಗಮನದಲ್ಲಿರಲಿ, ದುರುಪಯೋಗದ ಸವಾಲಲ್ಲ ಇದು, ಮನಸ್ಸನ್ನು ನಿನ್ನಿಂದ ಉಪಕರಣವಾಗಿ ಉಪಯೋಗಿಸಲು ಆಗದಿರುವಾಗ ಹೇಗೆ ತಾನೆ ನಿನ್ನಿಂದ ಮನಸ್ಸನ್ನು ದುರುಪಯೋಗಿಸಲು ಆಗುವುದು? ಉಪಯೋಗ, ದುರುಪಯೋಗ ಎರಡನ್ನೂ ನಿಮ್ಮಲ್ಲಿ ಮಾಡುತ್ತಿರುವುದು ಮನಸ್ಸು, ನಿನ್ನಿಂದ ಅದನ್ನು ದುರುಪಯೋಗಿಸಲೂ ಆಗುವುದಿಲ್ಲ.

ವಿಜ್ಞಾನಿಗಳು ಪರಮಾಣು ಶಕ್ತಿ ಕಂಡು ಹಿಡಿದಾಗ, ಅವರುಗಳು ತಮ್ಮ ಮನಸ್ಸನ್ನು ಉಪಯೋಗಿಸಿದರು ಎಂಬುದು ನಿನ್ನ ಆಲೋಚನೆಯೇನು? ಆಟಂಬಾಂಬ್ ಅನ್ನು ಹಿರೋಶಿಮಾ-ನಾಗಸಾಕಿಯ ಮೇಲೆ ಹಾಕಿದಾಗ ಐನ್ ಸ್ಟೀನ್ ನಿದ್ರಿಸದೆ ಪಶ್ಚಾತ್ತಾಪಪಟ್ಟಿದ್ದರು. ಆತನಿಂದ ವಿಶ್ರಮಿಸಲು ಆಗಲಿಲ್ಲ. ಅತ್ಯಧಿಕವಾಗಿ ಯಾತನೆ ಅನುಭವಿಸಿದರು. ಆತ ಆಟಂಬಾಂಬ್ ನ ಜನಕ!

ಇಲ್ಲೀಗ ಸವಾಲು: ಐನ್ ಸ್ಟೀನ್ ಬೋಧಪೂರ್ಣನಾಗಿ ಮನಸ್ಸನ್ನು ಉಪಯೋಗಿಸಿದರೇನು? ಅದೂ ಅಲ್ಲದೆ, ಒಬ್ಬ ರಾಜಕಾರಣಿಗೆ ಅಂಥ ವಿಚಾರವನ್ನು ತಿಳಿಸಬೇಕೋ ಬೇಡವೋ ಎಂಬ ಅರಿವಾಗಲಿ, ಮತ್ತದರಿಂದಾಗುವ ದುಷ್ಪರಿಣಾಮದ ಅರಿವು ಐನ್ ಸ್ಟೀನ್ ಗೆ ನಿಜವಾಗಿಯೂ ಇತ್ತೇನು? ಹಿರೋಶಿಮಾ-ನಾಗಸಾಕಿ ಅಲ್ಲಿ ನೆಲೆಸಿದ್ದ ಸಾವಿರಾರು ಜನರ ಹತ್ಯೆ, ಮುಗ್ದ ಜನರು ಕ್ಷಣಮಾತ್ರದಲ್ಲಿ ಸುಟ್ಟು ಭಸ್ಮವಾಗುವರು ಎಂಬ ಸಂಗತಿಯನ್ನು ಆತನಿಂದ ಊಹಿಸಲಾದರೂ ಆಗಿತ್ತೇನು? ಪಾಪ, ಆ ಮುಗ್ದ ಪ್ರಜೆಗಳ ಯಾವ ತಪ್ಪೂ ಇಲ್ಲ, ನಿರಪರಾಧಿಗಳು ಅವರು, ಆದರೆ ಐನ್ ಸ್ಟೀನ್ ಅದರ ಬಗ್ಗೆ ಕಿಂಚಿತ್ತೂ ಚಿಂತನೆಯನ್ನು ಸಹಿತ ನಡೆಸಿರಲಿಲ್ಲ. ಆತ ಬೋಧಪೂರ್ಣನಾಗಿ ಆ ಕೃತ್ಯವನ್ನು ಮಾಡಲಿಲ್ಲ, ವಸ್ತುತಃ ಈ ಪರಮಾಣು ಶಕ್ತಿಯನ್ನು ಏತಕ್ಕಾಗಿ
ಉಪಯೋಗಿಸಬೇಕು ಎಂಬುದನ್ನು ಸಹಿತ ಆತ ಜಾಗೃತಿಯಿಂದ ಅವಲೋಕಿಸಿರಲಿಲ್ಲ, ಆತ ಸಾಯುವುದಕ್ಕೆ ಮುನ್ನ ಯಾರೋ ಆತನನ್ನು ಕೇಳಿದ್ದರು, “ನೀವು ಇನ್ನೊಮ್ಮೆ ಈ ಭೂಮಿಯಲ್ಲಿ ಜನಿಸಿದಲ್ಲಿ, ಆಗ ನೀವೇನಾಗಬೇಕೆಂದು ಇಚ್ಛಿಸುವಿರಿ? ಒಬ್ಬ ಪ್ರತಿಭಾವಂತ ವಿಜ್ಞಾನಿಯಾಗಲು ಇಚ್ಚಿಸುವಿರೋ ಯಾ ಒಬ್ಬ ಪ್ರತಿಭಾವಂತ ಫಿಸಿಸ್ಟ್ ಆಗಲು ಇಚ್ಚಿಸುವಿರೋ ಯಾ ಒಬ್ಬ ಪ್ರತಿಭಾವಂತ ವಿಜ್ಞಾನಿ ಆಗಲು ಇಚ್ಚಿಸುವಿರೋ” ಎಂದು.

ಅದಕ್ಕೆ ಐನ್ ಸ್ಟೀನ್ ನೀಡಿದ ಉತ್ತರ:ಇಲ್ಲ, ಇಲ್ಲ, ಅದಾವುದೂ ಆಗಲು ನಾನು ಇಚ್ಚಿಸುವುದಿಲ್ಲ, ನಾನೊಬ್ಬ ತೋಟಿಯಾಗಲು ಅಥವಾ ಚಮ್ಮಾರನಾಗಲು ಬಯಸುತ್ತೇನೆ, ಆದರೀಗ ಕಾಲ ಮಿಂಚಿ ಹೋಗಿದೆ ” ಎಂದು ಹೇಳಿದ್ದರು. ಟೆಕ್ನಾಲಜಿಯನ್ನು ನಿರ್ಮಿಸಿ, ಎಕಾಲಜಿ(ಪರಿಸರ)ಯನ್ನು ಧ್ವಂಸಮಾಡುತ್ತಿರುವ ವಿಜ್ಞಾನಿಗಳು ಮನಸ್ಸನ್ನು ಉಪಯೋಗಿಸುತ್ತಿರುವರು ಅಥವಾ ಮನಸ್ಸನ್ನು ಉಪಯೋಗಿಸುತ್ತಿರುವವರು ಎಂದು ಹೇಳಲಾಗುವುದಿಲ್ಲ.

Advertisement

ಮನಸ್ಸು ಇಂದು ಅತ್ಯಧಿಕವಾಗಿ ವೇಗವನ್ನು ಪಡೆದಿದೆ. ಈ ನೂರು ವರ್ಷಗಳಲ್ಲಿ, ನಾವು ಹೇರಳವಾದ ವೈಜ್ಞಾನಿಕ ವಸ್ತುಗಳನ್ನು ನಿರ್ಮಿಸಿದ್ದೇವೆ, ಅದರಲ್ಲೂ ಈ ಹತ್ತು ವರ್ಷಗಳಲ್ಲಿ ಅತ್ಯಧಿಕವಾಗಿ ಹೆಚ್ಚಿರುವುದು, ಈ ವೈಜ್ಞಾನಿಕತೆಯ ಉದ್ರೇಕತೆಯಿಂದಾಗಿ ಈ ಭುವಿ ನಾಶವಾಗುವ ಹಂತಕ್ಕೆ ತಲುಪಿರುವುದು, ಇದಕ್ಕೆಲ್ಲಾ ಯಾರು ಹೊಣೆ? ನೀವೇನು ಹೇಳುವಿರಿ? ಈ ದೃಷ್ಟಿಯಲ್ಲಿ ನೋಡಿದರೆ ವಿಜ್ಞಾನಿಗಳು ಮನಸ್ಸನ್ನು ಉಪಯೋಗಿಸುತ್ತಿರುವರೋ ಅಥವಾ ದುರುಪಯೋಗಿಸುತ್ತಿರುವರೋ! ನೀವು ನನ್ನನ್ನು ಕೇಳಿದರೆ ನಾನು ಹೇಳುವೆ, ಇವರಾರು ಮನಸ್ಸಿನ ಮಾಲೀಕರಲ್ಲ, ಇವರಾರು ಮನಸ್ಸನ್ನು ಉಪಯೋಗಿಸಲೂ ಇಲ್ಲ; ದುರುಪಯೋಗಿಸಲೂ ಇಲ್ಲ; ಮನಸ್ಸು ತನ್ನ ಸ್ವೇಚ್ಛಾನುಸಾರವಾಗಿ ಇವರೆಲ್ಲರನ್ನೂ ಉಪಯೋಗಿಸುತ್ತಿರುವುದು ಮತ್ತು ದುರುಪಯೋಗಿಸುತ್ತಿರುವುದು ಎಂದು.

ವೈಜ್ಞಾನಿಕ ರಂಗದಲ್ಲಿ ಇಂದು ಬೇಕಾಗಿರುವುದು ಧ್ಯಾನಿಗಳು, ಧ್ಯಾನಿಗಳು ಈ ರಂಗದಲ್ಲಿ ಇಲ್ಲದೆ ಹೋದಲ್ಲಿ ಆಗ ಈ ಭುವಿಯ ಅವನತಿ ನಿಶ್ಚಯ. ವಿಜ್ಞಾನಕ್ಕೆ ಇಂದು ಅತ್ಯಗತ್ಯವಾಗಿ ಬೇಕಾಗಿರುವುದು ಮನಸ್ಸನ್ನು ಉಪಕರಣವಾಗಿ ಉಪಯೋಗಿಸುವಂಥ ವ್ಯಕ್ತಿ ಸ್ವರೂಪರು, ಯಾರು ತಮ್ಮಿರುವಿಕೆಯ ಮಾಲಿಕರು ಆಗಿರುವರೋ ಅವರು, ಬೋಧಪೂರ್ಣವಾಗಿ ವಿಜ್ಞಾನವನ್ನು ಉಪಯೋಗಿಸುವಂಥವರು. ಇಲ್ಲದೆ ಹೋದರೆ ಈ ಅಸ್ತಿತ್ವದ ಅವನತಿಯ ಮತ್ತು ಆತ್ಮಘಾತುಕತೆಯ ತುತ್ತತುದಿಯಲ್ಲಿ ನಾವಿಂದಿರುವೆವು.
(ಅತೀಶರ ವಿವೇಕ ಸೂತ್ರಗಳು-ಒಶೋ ಪ್ರವಚನದ ಆಯ್ದ ಭಾಗ)

Advertisement

Udayavani is now on Telegram. Click here to join our channel and stay updated with the latest news.

Next