Advertisement

15 ಎಕರೆ: 100 ಕ್ವಿಂಟಲ್‌ ರಾಗಿ

05:27 PM Feb 12, 2021 | Team Udayavani |

ಮಾಗಡಿ: ರಾಗಿ ತಿಂದರೆ ರೋಗವಿಲ್ಲ ಎಂಬ ಪೂರ್ವಿಕರು ಕಟ್ಟಿದ ಗಾಧೆ ಅಕ್ಷರಸಃ ಸತ್ಯ. ಆಧುನಿಕ ಯುಗದಲ್ಲಿಯೂ ರಾಗಿಗೆ ಅತ್ಯಂತ ಬೇಡಿಕೆಯಿದ್ದು, ಮಧುಮೇಹಿಗಳಿಗಂತೂ ರಾಗಿ ರಾಮಭಾಣವಾಗಿದೆ. ರಾಗಿ ಸೇವನೆಯಿಂದಲೇ ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿಡಬಹುದು ಎಂದು ರೈತ ಕೆ.ಬಾಗೇಗೌಡ ತಿಳಿಸಿದ್ದಾರೆ.

Advertisement

ತಾಲೂಕಿನಲ್ಲಿ ರಾಗಿ ಪ್ರಮುಖ ಬೆಳೆಯಾಗಿದೆ. ರಾಗಿ ಬೆಳೆದು ಸಾಧನೆ ಮಾಡಿದ ಅನೇಕರಲ್ಲಿ ರೈತ ಕೆ.ಬಾಗೇಗೌಡ ಒಬ್ಬರು. ತಾಲೂಕಿನಬೆಳಗುಂಬ ವ್ಯಾಪ್ತಿಯ ತಮ್ಮ 15 ಎಕರೆ ಜಮೀನಿನಲ್ಲಿ ರಾಗಿ ಬೆಳೆದಿರುವ ಕೆ.ಬಾಗೇಗೌಡ, 100 ಕ್ವಿಂಟಲ್‌ ರಾಗಿ ಜೊತೆಗೆ 13 ಎಕರೆಯಲ್ಲಿ 40 ಕ್ವಿಂಟಲ್‌ ತೊಗರಿ ಬೆಳೆದು ಸಂತೃಪ್ತಿ ಜೀವನ ಕಟ್ಟಿಕೊಂಡಿದ್ದಾರೆ.

ಸಾಧಕರ ತವರೂರು: ಮಾಗಡಿ ಮಣ್ಣಿನ ಮಹತ್ವವೇ ಅಂತದ್ದು, ಮಾಗಡಿ ಮಣ್ಣಿನಲ್ಲಿ ನಾಡಪ್ರಭ ಕೆಂಪೇಗೌಡ, ಸಿದ್ಧಗಂಗೆ ಸಂತ ಲಿಂಗೈಕ್ಯ ಡಾ.ಶಿವಕುಮಾರಸ್ವಾಮಿ, ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ, ಕ್ರೀಡಾಪಟು ಕೆ.ಆರ್‌.ರಾಹುಲ್‌, ಸಮಾಜ ಸೇವಕ ಕೆ.ಬಾಗೇಗೌಡ, ತಗ್ಗೀಕುಪ್ಪೆ ರಂಗೇಗೌಡ ಸೇರಿದಂತೆ ನೂರಾರು ಮಂದಿ ಸಾಧನೆ ತಾಲೂಕಿನ ಜನತೆಗೆ ಸ್ಫೂರ್ತಿಯಾಗಿದೆ. ರಾಗಿ, ತೊಗರಿ ಸಂಗ್ರಹ: ರೈತ ಕೆ.ಬಾಗೇಗೌಡ ಅವರ ಸಹಾಯಕ ಚಂದ್ರಣ್ಣ , ಕೂಲಿಕಾರರನ್ನು ಹೊಂದಿಸಿಕೊಂಡು ರಾಗಿ, ತೊಗರಿ ಬೆಳೆದು ಧಾನ್ಯ ಸಂಗ್ರಹಿಸುವಲ್ಲಿ ಶ್ರಮಿಸಿದ್ದಾರೆ.

ನಂಬಿದವರನ್ನು ಭೂಮಿ ತಾಯಿ ಎಂದೂ ಕೈ ಬಿಡುವುದಿಲ್ಲ. ಭೂಮಿ ತಾಯಿ ಸೇವೆ ಮಾಡುವುದರಿಂದ ಸಿಗುವ ನೆಮ್ಮದಿ ಬೇರೆ ಯಾವ ಕಂಪನಿಗಳಲ್ಲಿ ದುಡಿದರೂ ಸಿಗುವುದಿಲ್ಲ ಎನ್ನುತ್ತಾರೆ ರೈತ ಕೆ.ಬಾಗೇಗೌಡ.

Advertisement

Udayavani is now on Telegram. Click here to join our channel and stay updated with the latest news.

Next