ಚಿಕ್ಕಬಳ್ಳಾಪುರ: ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆಯ ಬೆಂಬಲ ಬೆಲೆ ಯೋಜನೆಯನ್ನು ಬಳಸಿಕೊಂಡು ಜಿಲ್ಲಾದ್ಯಂತ ಬರೋಬ್ಬರಿ 8,742 ಮಂದಿ ರೈತರು 1,21,419 ಕ್ವಿಂಟಲ್ ರಾಗಿಯನ್ನು ಮಾರಾಟ ಮಾಡಿದ್ದಾರೆ.
ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್ ರಾಗಿಗೆ ಬರೋಬ್ಬರಿ 3,578 ರೂ.ನಿಗದಿಪಡಿಸಿತ್ತು. ಇದರಿಂದ ಜಿಲ್ಲಾದ್ಯಂತ ರಾಗಿ ಖರೀದಿ ಕೇಂದ್ರಗಳನ್ನು ತೆರೆದು ರೈತರ ನೋಂದಣಿ ಕಾರ್ಯ ನಡೆಸಿ ಬಳಿಕ ರೈತರಿಂದ ರಾಗಿ ಖರೀದಿ ಕಾರ್ಯ ನಡೆದು ಇಲ್ಲಿವರೆಗೂ ಜಿಲ್ಲೆಯಲ್ಲಿ ಒಟ್ಟು ನೋಂದಾಯಿಸಿಕೊಂಡಿದ್ದ 9,652 ಮಂದಿ ಪೈಕಿ 8,742 ಮಂದಿ ರೈತರು ಬೆಂಬಲ ಬೆಲೆ ಯೋಜನೆಯಡಿ ರಾಗಿ ಮಾರಾಟ ಮಾಡಿದ್ದಾರೆ.
ಬಾಗೇಪಲ್ಲಿ ತಾಲೂಕಿನಲ್ಲಿ 234 ಮಂದಿ ನೋಂದಾಯಿತ ರೈತರ ಪೈಕಿ 220 ಮಂದಿ ರೈತರು ಒಟ್ಟು 30,56 ಕ್ವಿಂಟಲ್ ರಾಗಿ ಮಾರಾಟ, ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಒಟ್ಟು 2,374 ನೋಂದಾಯಿತ ರೈತರ ಪೈಕಿ ಇಲ್ಲಿವರೆಗೂ 2,171 ರೈತರು 30047.50 ಕ್ವಿಂಟಲ್, ಚಿಂತಾಮಣಿ ತಾಲೂಕಿನಲ್ಲಿ ನೋಂದಾಯಿತ 1,615 ರೈತರ ಪೈಕಿ ಇಲ್ಲಿವರೆಗೂ 1,455 ರೈತರು 19,215 ಕ್ವಿಂಟಲ್, ಗೌರಿಬಿದನೂರು ತಾಲೂಕಿನಲ್ಲಿ 617 ನೋಂದಾಯಿತ ರೈತರ ಪೈಕಿ ಇಲ್ಲಿವರೆಗೂ 589 ರೈತರು 8,403 ಕ್ವಿಂಟಲ್ ರಾಗಿಯನ್ನು ರಾಗಿಯನ್ನು ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಿದ್ದಾರೆ.
ಗುಡಿಬಂಡೆ ತಾಲೂಕಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ನೋಂದಣಿಗೊಂಡಿದ್ದ 1,776 ರೈತರ ಪೈಕಿ 1,641 ರೈತರಿಂದ 23,714 ಕ್ವಿಂಟಲ್ ರಾಗಿ ಮಾರಾಟ ಮಾಡಿದ್ದಾರೆ.
ಶಿಡ್ಲಘಟ್ಟ ತಾಲೂಕಿನಲ್ಲಿ ಒಟ್ಟು 3036 ಮಂದಿ ನೋಂದಣಿ ಆಗಿದ್ದು ಇಲ್ಲಿವರೆಗೂ 2,666 ಮಂದಿ ರೈತರಿಂದ ಒಟ್ಟು 36,984 ಕ್ವಿಂಟಲ್ ರಾಗಿಯನ್ನು ಖರೀದಿ ಕೇಂದ್ರಗಳಲ್ಲಿ ಬೆಂಬಲ ಬೆಲೆ ಯೋಜನೆಯಡಿ ಮಾರಾಟ ಮಾಡಿದ್ದಾರೆ.
140 ರೈತರಿಗೆ ಮಾತ್ರ ಹಣ ಪಾವತಿ ಬಾಕಿ: ಜಿಲ್ಲೆಯಲ್ಲಿ ರಾಗಿ ಮಾರಾಟ ಮಾಡಿದ ಎಲ್ಲಾ ರೈತರಿಗೂ ಕೂಡ ಈಗಾಗಲೇ ನೇರ ಪಾವತಿ ಮೂಲಕ ಅವರ ಬ್ಯಾಂಕ್ ಖಾತೆಗೆ ಬೆಂಬಲ ಬೆಲೆ ಹಣ ಪಾವತಿ ಆಗಿದೆ. ಆದರೆ ಆಧಾರ್ ಕಾರ್ಡ್‌ನಲ್ಲಿ ಇರುವ ಹೆಸರು ಹೊಂದಾಣಿಕೆ ಆಗದ ಕಾರಣ ಸುಮಾರು 140 ಮಂದಿ ರೈತರ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡಲು ಬಾಕಿ ಇದೆಯೆಂದು ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕಿ ಸವಿತಾ ತಿಳಿಸಿದರು.