Advertisement
ಪುಂಜಾಲಕಟ್ಟೆ: ಬಂಟ್ವಾಳ ತಾ|ನ ಸಂಗ ಬೆಟ್ಟು ಗ್ರಾ.ಪಂ. ವ್ಯಾಪ್ತಿಯ ಕಪೆìಯ ಪ್ರಗತಿಪರ ಕೃಷಿಕ ಪದ್ಮನಾಭ ಹೆಗ್ಡೆ ಅವರ ಸ್ಥಾಪಕಾಧ್ಯಕ್ಷತೆಯಲ್ಲಿ 1988ರ ನ. 5ರಂದು ಬಾಡಿಗೆ ಕಟ್ಟಡದಲ್ಲಿ ಆರಂಭಗೊಂಡ ಸಿದ್ದಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘ 32 ವರ್ಷಗಳನ್ನು ಪೂರೈಸಿ ಪರಿಸರದ ಹೈನುಗಾರ ರಿಗೆ ಆಸರೆಯಾಗಿದೆ. ಪ್ರಸ್ತುತ ಸದಾಶಿವ ಕೆ. ಕಪೆì ಮತ್ತು ರತ್ನಕುಮಾರ್‌ಚೌಟ ಸ್ಥಾಪಕ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
Related Articles
ಸಂಘವು 5 ಸಾವಿರ ಲೀ. ಸಾಮರ್ಥ್ಯದ ಸಾಂಧ್ರ ಶೀತಲೀಕರಣ ಘಟಕ ಹೊಂದಿದ್ದು, ಸಂಗಬೆಟ್ಟು, ಸಿದ್ದಕಟ್ಟೆ, ಕಪೆì, ಪರಿಸರದಿಂದ ಹಾಲು ಸಂಗ್ರಹಿಸಲಾಗುತ್ತಿದೆ. ಸಂಘದಲ್ಲಿ ಜಾನುವಾರು ಪ್ರದರ್ಶನ, ಮಾಹಿತಿ ಶಿಬಿರ ಗಳನ್ನು ನಡೆಸಲಾಗುತ್ತಿದ್ದು, ಹಾಲು ಒಕ್ಕೂಟದ ಮತ್ತು ಸರಕಾರಿ ವಿವಿಧ ಅನುದಾನ ಗಳನ್ನು ಒದಗಿಸಿಕೊಡಲಾಗುತ್ತಿದೆ. ಪ್ರತಿವರ್ಷ ಹಾಲು ಉತ್ಪಾದಕರಿಗೆ ಬೋನಸ್, ಪ್ರೋತ್ಸಾ ಹಕರ ಬಹುಮಾನ ನೀಡುತ್ತಿದೆ. ಒಕ್ಕೂಟದ ಸಹಯೋಗ ದಿಂದ ಸದಸ್ಯ ರೈತರಿಗೆ ವಿವಿಧ ಸವಲತ್ತು, ಸಹಾಯಧನ ನೀಡುತ್ತ ಪ್ರೋತ್ಸಾಹಿಸುತ್ತದೆ. ಸಂಘದಲ್ಲಿ ಪಶುಗಳಿಗೆ ಕೃತಕ ಗರ್ಭಧಾರಣೆ ಸೌಲಭ್ಯವಿದ್ದು, ಇದನ್ನು ಸಿಬಂದಿ ನಿರ್ವಹಿಸುತ್ತಿದ್ದಾರೆ.
Advertisement
ಸಾಮಾಜಿಕ ಕಾರ್ಯಗಳುಸಂಘವು ಪರಿಸರದ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಕ್ರೀಡಾ ಚಟುವಟಿಕೆಗಳಲ್ಲಿ ಸಹಭಾಗಿತ್ವ ನೀಡುತ್ತಾ ಧನಸಹಾಯ ಒದಗಿಸುತ್ತಾ ಬಂದಿದೆ. ಸಂಘದ ಸದಸ್ಯರ ಸಾಧಕ ಮಕ್ಕಳನ್ನು ಗೌರವಿಸುವುದು, ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಸಂಘದ ಸದಸ್ಯ ರವೀಂದ್ರ ಜೈನ್ ಅವರ ಪುತ್ರಿ, ರಾಷ್ಟ್ರೀಯ ಕ್ರೀಡಾ ಪ್ರತಿಭೆ ರಮ್ಯಶ್ರೀ ಜೈನ್ ಅವರಿಗೆ ಕ್ರೀಡಾ ಪ್ರೋತ್ಸಾಹ ನೀಡಲಾಗಿದೆ. ಪ್ರಶಸ್ತಿ, ಸಾಧನೆಗಳು
ಸಂಘಕ್ಕೆ 1998-99, 1999-2000 ಮತ್ತು 2015-16ರಲ್ಲಿ ಒಕ್ಕೂಟದಿಂದ ತಾಲೂಕಿನ ಉತ್ತಮ ಸಂಘವೆಂಬ ಪ್ರಶಸ್ತಿ ಬಂದಿದೆ. 2017-18ರಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ಸಾಧನಾ ಪ್ರಶಸ್ತಿ ಲಭಿಸಿದೆ. ಸಂಘದ ನಿರ್ದೆಶಕಿ ಅರುಣಾ ವಿ. ದೋಟ ಮತ್ತು ಸುರೇಶ್ ಪಾಣಿಮೇರು ಅವರು ಅತೀ ಹೆಚ್ಚು ಹಾಲು ಪೂರೈಸಿದ ಗೌರವಕ್ಕೆ ಭಾಜನರಾಗಿದ್ದಾರೆ. ಮಾಜಿ ಅಧ್ಯಕ್ಷರು
ಪದ್ಮನಾಭ ಹೆಗ್ಡೆ, ಪ್ರಭಾಕರ ಐಗಳ್, ಜಯರಾಮ ಅಡಪ್ಪ, ಗೋಪಾಲ ಬಂಗೇರ, ಅಜಿತ್ ಕುಮಾರ್ ಜೈನ್, ಸದಾಶಿವ. -ರತ್ನದೇವ್ ಪುಂಜಾಲಕಟ್ಟೆ