ಜಮ್ಮು-ಕಾಶ್ಮೀರ: ಜಮ್ಮು ಕಾಶ್ಮೀರದ ಕಿಶ್ ತ್ವಾರ್ ಜಿಲ್ಲೆಯಲ್ಲಿ ಉಗ್ರರ ದಾಳಿಗೆ ಪೊಲೀಸ್ ಅಧಿಕಾರಿ ಹುತಾತ್ಮರಾಗಿದ್ದು, ಎಎಸ್ ಐ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸೋಮವಾರ ನಡೆದಿದೆ ಎಂದು ವರದಿ ತಿಳಿಸಿದೆ.
ವರದಿ ಪ್ರಕಾರ, ಡಕನ್ ಪ್ರದೇಶದ ಟಾನ್ದಾರ್ ಗ್ರಾಮದಲ್ಲಿ ಸ್ಥಳೀಯ ಪೊಲೀಸರ ಮೇಲೆ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದರು. ಬಳಿಕ ಕೊಡಲಿಯಿಂದ ಪೊಲೀಸ್ ಅಧಿಕಾರಿಯನ್ನು ಹತ್ಯೆಗೈದಿದ್ದು, ಘಟನೆಯಲ್ಲಿ ಎಎಸ್ ಐ ಗಾಯಗೊಂಡಿದ್ದು, ಚಿಂತಾಜನಕ ಸ್ಥಿತಿಯಲ್ಲಿರುವುದಾಗಿ ವರದಿ ವಿವರಿಸಿದೆ.
ಮೃತ ಪೊಲೀಸ್ ಅಧಿಕಾರಿಯನ್ನು ಪಾಶಿದ್ ಇಕ್ಬಾಲ್ ಎಂದು ಗುರುತಿಸಲಾಗಿದೆ. ದಾಳಿಯಲ್ಲಿ ಗಾಯಗೊಂಡಿರುವ ವ್ಯಕ್ತಿ ಎಎಸ್ ಐ ವಿಶಾಲ್ ಸಿಂಗ್ ಎಂದು ಗುರುತಿಸಲಾಗಿದೆ.
ಪೊಲೀಸ್ ಅಧಿಕಾರಿಗಳ ಮೇಳೆ ಟಾನ್ದಾರ್ ಗ್ರಾಮದ ನಿವಾಸಿಗಳಾದ ಬಶ್ರಾತ್ ಹುಸೈನ್ ಮತ್ತು ಆತನ ಸಹಚರ ಆಶಿಖಿ ಹುಸೈನ್ ಎಂದು ಜಮ್ಮು ಕಾಶ್ಮೀರ ಪೊಲೀಸರು ಆರೋಪಿಸಿದ್ದಾರೆ. ಆರೋಪಿ ಆಶಿಖಿ ಹುಸೈನ್ ಆರ್ ಪಿಸಿ ಸೆಕ್ಷನ್ 363 ಹಾಗೂ 376ರ ಅಡಿ ಬಂಧಿಸಲ್ಪಟ್ಟಿದ್ದು, 20 ದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದ ಎಂಬ ಮಾಹಿತಿಯನ್ನು ಬಹಿರಂಗಗೊಳಿಸಿದ್ದಾರೆ.
ಘಟನೆ ಬಳಿಕ ದಾಳಿಕೋರರನ್ನು ಸೆರೆಹಿಡಿಯುವ ನಿಟ್ಟಿನಲ್ಲಿ ಡೆಪ್ಯುಟಿ ಇನ್ಸ್ ಪೆಕ್ಟರ್ ಜನರಲ್ ನೇತೃತ್ವದ ತಂಡ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದೆ ಎಂದು ವರದಿ ತಿಳಿಸಿದೆ.