Advertisement

ಪುಲ್ವಾಮಾ ಎನ್‌ಕೌಂಟರ್‌: ಉಗ್ರನ ಹತ್ಯೆ, ಓರ್ವ ಜವಾನ ಹುತಾತ್ಮ

06:18 AM Feb 12, 2019 | Team Udayavani |

ಶ್ರೀನಗರ : ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಇಂದು ಮಂಗಳವಾರ ಉಗ್ರರ ವಿರುದ್ಧ ಭದ್ರತಾ ಪಡೆಗಳು ನಡೆಸಿರುವ ಎನ್‌ಕೌಂಟರ್‌ನಲ್ಲಿ ಓರ್ವ ಉಗ್ರ ಹತನಾಗಿ ಓರ್ವ ಸೇನಾ ಜವಾನ  ಹುತಾತ್ಮನಾಗಿರುವುದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ. 

Advertisement

ಪುಲ್ವಾಮಾದ ರತ್ನಿಪೋರಾದಲ್ಲಿ ನಡೆದ ಈ ಎನ್‌ಕೌಂಟರ್‌ನಲ್ಲಿ ಓರ್ವ ಸೇನಾ ಜವಾನ ಗಾಯಗೊಂಡಿರುವುದಾಗಿ ಮೂಲಗಳು ಹೇಳಿವೆ. ಗಾಯಾಳುವನ್ನು ಒಡನೆಯೇ ಆಸ್ಪತ್ರೆಗೆ ಒಯ್ದು ಚಿಕಿತ್ಸೆ ನೀಡಲಾಗಿದ್ದು ಆತನು ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಎನ್‌ಕೌಂಟರ್‌ ಬಳಿಕದಲ್ಲಿ ಭದ್ರತಾ ಪಡೆಗಳು ರತ್ನಿಪೋರಾ ಪ್ರದೇಶದಲ್ಲಿ ಅಡಗಿಕೊಂಡಿರಬಹುದಾದ ಉಗ್ರರಿಗಾಗಿ ಶೋಧ ಕಾರ್ಯಾಚರಣೆ ಕೈಗೊಂಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next