Advertisement

ಸಬ್‌ಜರ್‌ ಭಟ್‌ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಉಗ್ರ ಪೊಲೀಸರಿಗೆ ಶರಣು

11:15 AM Jun 07, 2017 | Team Udayavani |

ಜಮ್ಮು : ಭದ್ರತಾ ಪಡೆಗಳಿಂದ ಹತನಾಗಿದ್ದ ಹಿಜ್‌ಬುಲ್‌ ಕಮಾಂಡರ್‌ ಸಬ್‌ಜರ್‌ ಅಹ್ಮದ್‌ ಭಟ್‌ನ ದಕ್ಷಿಣ ಕಾಶ್ಮೀರದ ತ್ರಾಲ್‌ ನಲ್ಲಿ ನಡೆದಿದ್ದ  ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ನೂರಾರು ಜನರ ನಡುವೆ ಕಾಣಿಸಿಕೊಂಡ ಅಪರಿಚಿತ ಉಗ್ರನೋರ್ವ ತಾನು ಭದ್ರತಾ ಪಡೆಗಳಿಂದ ಬಂಧಿತನಾಗಬಹುದೆಂಬ ಭಯದಲ್ಲಿ ಇಂದು ಬುಧವಾರ ಹಂದ್ವಾರಾ ಪೊಲೀಸರಿಗೆ ಶರಣಾಗಿದ್ದಾನೆ.

Advertisement

ಎಎನ್‌ಐ ವರದಿ ಪ್ರಕಾರ ಶರಣಾಗತನಾಗಿರುವ ಉಗ್ರನನ್ನು ದಾನಿಶ್‌ ಅಹ್ಮದ್‌ ಎಂದು ಗುರುತಿಸಲಾಗಿದೆ. ಈತನು ಈ ತನಕ ಪರಿಚಿತನಲ್ಲದ ಉಗ್ರನಾಗಿದ್ದಾನೆ. 

ಹತ ಉಗ್ರ ಸಬ್‌ಜರ್‌ ಭಟ್‌ನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ ಜನರೊಂದಿಗೆ ಈತ ಕೂಡ ಆಜಾದಿ ಪರ, ಇಸ್ಲಾಂ ಪರ ಘೋಷಣೆಗಳನ್ನು ಕೂಗಿದ್ದಾನೆ; ಹತ ಭಟ್‌ನನ್ನು ಹೊಗಳಿದ್ದಾನೆ ಮತ್ತು ಕಾಶ್ಮೀರದಲ್ಲಿ ಪ್ರಕೃತ ನಡೆಯುತ್ತಿರುವ ಜಿಹಾದಿ ಚಳವಳಿ ಪರ ಘೋಷಣೆ ಕೂಗಿದ್ದಾನೆ. 

ಈಗ ಶರಣಾಗಿರುವ ಉಗ್ರ ದಾನಿಶ್‌ ಅಹ್ಮದ್‌, ಹತ ಸಬ್‌ಜರ್‌ ಭಟ್‌ ನ ಅಂತ್ಯಕ್ರಿಯೆಯಲ್ಲಿ ಭಾಗಿಯಾದುದನ್ನು ಕಾಣಿಸುವ ವಿಡಿಯೋ ಚಿತ್ರಿಕೆ ಈಚೆಗೆ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್‌ ಆಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next