Advertisement

ಸಿಲಿಕಾನ್‌ ವ್ಯಾಲಿ ಟೆನಿಸ್‌ ಮೊದಲ ಪ್ರಶಸ್ತಿ ಗೆದ್ದ ಬಝರ್ನೆಸ್ಕಾ

06:00 AM Aug 07, 2018 | |

ಸ್ಯಾನ್‌ ಜೋಸ್‌ (ಕ್ಯಾಲಿಫೋರ್ನಿಯಾ): ರೊಮೇನಿಯಾದ ಮಿಹೇಲಾ ಬಝರ್ನೆಸ್ಕಾ ಮೊದಲ ಡಬ್ಲ್ಯುಟಿಎ ಪ್ರಶಸ್ತಿಯ ಸಂಭ್ರಮವನ್ನಾಚರಿಸಿದ್ದಾರೆ. 30ರ ಹರೆಯದ ಮಿಹೇಲಾ “ಸಿಲಿಕಾನ್‌ ವ್ಯಾಲಿ ಕ್ಲಾಸಿಕ್‌ ಟೆನಿಸ್‌’ ಪಂದ್ಯಾವಳಿಯಲ್ಲಿ ಚಾಂಪಿಯನ್‌ ಎನಿಸಿಕೊಳ್ಳುವ ಮೂಲಕ ಈ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Advertisement

ರವಿವಾರ ರಾತ್ರಿ ನಡೆದ ಫೈನಲ್‌ನಲ್ಲಿ 30ರ ಹರೆಯದ ಮಿಹೇಲಾ ಬಝರ್ನೆಸ್ಕಾ ಗ್ರೀಕ್‌ನ ಮರಿಯಾ ಸಕ್ಕರಿ ವಿರುದ್ಧ 6-1, 6-0 ಅಂತರದ ಸುಲಭ ಜಯ ಸಾಧಿಸಿದರು. ಕೂಟದಲ್ಲಿ ವೀನಸ್‌ ವಿಲಿಯಮ್ಸ್‌, ಡೇನಿಯಲ್‌ ಕೊಲಿನ್ಸ್‌ ಅವರನ್ನು ಉರುಳಿಸಿ ಸುದ್ದಿಯಾಗಿದ್ದ ಸಕ್ಕರಿಗೆ ಫೈನಲ್‌ನಲ್ಲಿ ಮಾತ್ರ ಸಿಹಿ ಒಲಿಯಲಿಲ್ಲ. ಗೆದ್ದರೆ ಸಕ್ಕರಿ ಪಾಲಿಗೂ ಇದು ಮೊದಲ ಡಬ್ಲ್ಯುಟಿಎ ಪ್ರಶಸ್ತಿಯಾಗುತ್ತಿತ್ತು.

“ಸಕ್ಕರಿ ಈ ಕೂಟದಲ್ಲಿ ಅನೇಕ ಏರುಪೇರಿನ ಫ‌ಲಿತಾಂಶಗಳನ್ನು ದಾಖಲಿಸಿದ ಆಟಗಾರ್ತಿ. ಮೊದಲ ಸೆಟ್‌ ಸೋತರೂ ಆಕೆ ತಿರುಗಿ ಬೀಳುವ ಸಾಧ್ಯತೆ ಇತ್ತು. 3-0 ಮುನ್ನಡೆ ಸಾಧಿಸಿದ ಬಳಿಕವಷ್ಟೇ ಈ ಪಂದ್ಯ ನನ್ನದಾಗುವುದು ಖಂಡಿತ ಎಂಬ ನಂಬಿಕೆ ಮೂಡಿತು…’ ಎಂಬುದಾಗಿ ಮಿಹೇಲಾ ಬಝರ್ನೆಸ್ಕಾ ಹೇಳಿದರು. 73 ನಿಮಿಷಗಳಲ್ಲಿ ಈ ಪಂದ್ಯ ಮುಗಿದು ಹೋಯಿತು.

Advertisement

Udayavani is now on Telegram. Click here to join our channel and stay updated with the latest news.

Next