Advertisement

ಇತಿಹಾಸ ಸೇರಿದ ಮಿಗ್‌-27

10:03 AM Dec 26, 2019 | Team Udayavani |

ಜೋಧ್‌ಪುರ: ಭಾರತೀಯ ವಾಯುಪಡೆಯಲ್ಲಿ ಪ್ರಮುಖ ಅಸ್ತ್ರವಾಗಿದ್ದ ಮಿಗ್‌-27 ಯುದ್ಧ ವಿಮಾನ ಇತಿಹಾಸದ ಪುಟ ಸೇರಲಿದೆ. 1999ರಲ್ಲಿ ಕಾರ್ಗಿಲ್‌ ಯುದ್ಧದಲ್ಲಿ ವೈರಿಗಳ ವಿರುದ್ಧ ಹೋರಾಡಿದ್ದ ಈ ಮಿಗ್‌-27 ಅನ್ನು ‘ಬಹದ್ದೂರ್‌’ ಎಂದು ಪೈಲಟ್‌ಗಳು ಬಣ್ಣಿಸಿದ್ದರು. ಡಿ.27ರಂದು ಜೋಧ್‌ಪುರ ವಾಯು ನೆಲೆ ಸೇರುವ ಮೂಲಕ ತನ್ನ ಸೇವೆಯನ್ನು ಸ್ಥಗಿತಗೊಳಿಸಲಿದೆ.

Advertisement

ರಷ್ಯಾ ನಿರ್ಮಿತ ಮಿಗ್‌-27 ಯುದ್ಧ ವಿಮಾನವೇ ಭಾರತದ ವಾಯುಪಡೆಯ ಪ್ರಮುಖ ಅಸ್ತ್ರವಾಗಿತ್ತು. ಭಾರತ ಮಾತ್ರವಲ್ಲದೇ ವಿಶ್ವದ ಎಲ್ಲೂ ಕೂಡ ಈ ವಿಮಾನ ಸೇವೆ ಸಿಗುವುದಿಲ್ಲ. ಬೇರೆ ಯಾವ ದೇಶ ಕೂಡ ಮಿಗ್‌-27 ಬಳಸುತ್ತಿಲ್ಲ. ಜೋಧ್‌ಪುರದಲ್ಲಿ ಈ ವರ್ಷದ ಪ್ರಾರಂಭದಲ್ಲಿ ಎರಡು ಮಿಗ್‌-27 ಯುದ್ಧ ವಿಮಾನಗಳ ಸೇವೆಯನ್ನು ರದ್ದುಪಡಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next