Advertisement

Middle Class Family: ಮತ್ತೆ ರಂಜಿಸಲು ಬರುತ್ತಿದ್ದಾರೆ ಸೌಂಡ್‌ ಲೈಟ್ಸ್‌ ಹುಡುಗರು

06:57 PM Oct 24, 2024 | Team Udayavani |

ಈ ಹಿಂದೆ ರಾಜ್‌ ಸೌಂಡ್ಸ್‌ ಆ್ಯಂಡ್ ಲೈಟ್ಸ್‌ (Raj Sounds & Lights) ಚಿತ್ರದ ಮೂಲಕ ತುಳು ಸಿನಿಮಾ ರಂಗದಲ್ಲಿ ದೊಡ್ಡ ಹಿಟ್‌ ನೀಡಿದ್ದ ತಂಡ ಇದೀಗ ಮತ್ತೊಂದು ಚಿತ್ರದೊಂದಿಗೆ ಬರುತ್ತಿದೆ. ಅದುವೆ ʼಮಿಡಲ್‌ ಕ್ಲಾಸ್‌ ಫ್ಯಾಮಿಲಿʼ (Middle Class Family)

Advertisement

ರಾಹುಲ್‌ ಅಮೀನ್‌ ನಿರ್ದೇಶನದ ‘ಮಿಡಲ್‌ ಕ್ಲಾಸ್‌ ಫ್ಯಾಮಿಲಿ’ ಚಿತ್ರವು 2025ರ ಜನವರಿಯಲ್ಲಿ ತೆರೆಗೆ ಬರಲಿದೆ. ರಾಜ್‌ ಸೌಂಡ್ಸ್‌ ಆ್ಯಂಡ್ ಲೈಟ್ಸ್‌ ಚಿತ್ರದ ಮೂಲಕ ಯಶಸ್ಸು ಕಂಡಿದ್ದ ರಾಹುಲ್‌ ಅಮೀನ್-‌ ವಿನೀತ್‌ ಕುಮಾರ್‌ ಜೊತೆ ಮತ್ತೆ ʼಮಿಡಲ್‌ ಕ್ಲಾಸ್‌ ಫ್ಯಾಮಿಲಿʼ ಮೂಲಕ ತುಳು ಚಿತ್ರ ಪ್ರೇಮಿಗಳನ್ನು ರಂಜಿಸಲು ಬರುತ್ತಿದ್ದಾರೆ.

ವಿನೀತ್‌ ಕುಮಾರ್‌ ಗೆ ಸಮತಾ ಅಮೀನ್‌ ಅವರು ನಾಯಕಿಯಾಗಿದ್ದಾರೆ. ನವೀನ್‌ ಡಿ ಪಡೀಲ್‌, ಅರವಿಂದ ಬೋಳಾರ್‌, ಭೋಜರಾಜ್‌ ವಾಮಂಜೂರು, ಪ್ರಸನ್ನ ಶೆಟ್ಟಿ, ಸಂದೀಪ್‌ ಶೆಟ್ಟಿ, ರವಿ ರಾಮಕುಂಜ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ವಿನೀತ್‌ ಕುಮಾರ್‌ ಅವರ ಕಥೆ, ಪ್ರಸನ್ನ ಶೆಟ್ಟಿ ಬೈಲೂರು ಅವರ ಸಂಭಾಷಣೆ ಈ ಚಿತ್ರಕ್ಕಿದೆ. ಸೃಜನ್‌ ಕುಮಾರ್‌ ತೋನ್ಸೆ ಸಂಗೀತ ನೀಡಿದ್ದು, ವಿಷ್ಣು ಪ್ರಸಾದ್‌ ಕ್ಯಾಮರಾ ಕೈಚಳಕವಿದೆ.

Advertisement

ಅರವಿಂದ ಎನ್‌ ಕುಂಪಲಾ ನಿರ್ಮಾಣದಲ್ಲಿ ಮೂಡಿ ಬಂದಿರುವ ʼಮಿಡಲ್‌ ಕ್ಲಾಸ್‌ ಫ್ಯಾಮಿಲಿʼ ಚಿತ್ರದಿಂದ ಈಗಾಗಲೇ ನಕಾನೆ ನಕಾನೆ ಎಂಬ ಹಾಡೊಂದು ಬಿಡುಗಡೆಯಾಗಿ ಸದ್ದು ಮಾಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next