ನವದೆಹಲಿ: ಎರಡು ವರ್ಷಗಳ ನಂತರ ಕೇಂದ್ರ ಸರ್ಕಾರ ಮಧ್ಯಾಹ್ನದ ಬಿಸಿಯೂಟ ವೆಚ್ಚವನ್ನು ಪ್ರತಿ ಮಗುವಿಗೆ ಶೇ. 9.6ರಷ್ಟು ಹೆಚ್ಚಳ ಮಾಡಿದೆ. ಬಿಸಿಯೂಟಕ್ಕೆ ಸಂಬಂಧಿಸಿದ ಸಮಿತಿಯ ಶಿಫಾರಸ್ಸಿನ ಮೇರೆಗೆ ಕೇಂದ್ರ ಹಣಕಾಸು ಇಲಾಖೆ ಇದಕ್ಕೆ ಅನುಮೋದನೆ ನೀಡಿದೆ. ಈ ವೆಚ್ಚ ಹೆಚ್ಚಳವೂ ಹಾಲಿ ತಿಂಗಳಿನಿಂದಲೇ ಜಾರಿಗೆ ಬರಲಿದೆ.
ತರಕಾರಿ, ಬೇಳೆಕಾಳುಗಳು ಸೇರಿದಂತೆ ಅಡುಗೆ ಅನಿಲ ದರ ಹೆಚ್ಚಳದ ಹಿನ್ನೆಲೆಯಲ್ಲಿ ಬಿಸಿಯೂಟದ ವೆಚ್ಚವನ್ನು ಹೆಚ್ಚಿಸಬೇಕೆಂದು ಶಾಲಾ ಅಭಿವೃದ್ಧಿ ಸಮಿತಿ ಮತ್ತು ಸಾಮಾಜಿಕ ಕಾರ್ಯಕರ್ತರು ಮನವಿ ಮಾಡಿದ್ದರು. ಕೋರಿಕೆ ಮೇರೆಗೆ ಕೇಂದ್ರ ಸರ್ಕಾರ ಈ ನಿರ್ಣಯ ಕೈಗೊಂಡಿದೆ. ಬಿಸಿಯೂಟ ಯೋಜನೆಯಿಂದ ದೇಶದಲ್ಲಿ ಒಟ್ಟು 11.8 ಕೋಟಿ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುತ್ತಿದೆ.
ಈ ಮೊದಲು ಪ್ರತಿ ವಿದ್ಯಾರ್ಥಿಗೆ ಬಿಸಿಯೂಟ ವೆಚ್ಚ ಪ್ರಾಥಮಿಕ ತರಗತಿಗಳಿಗೆ(1ರಿಂದ 5) 4.97 ರೂ. ಇದ್ದದ್ದು, ದರ ಹೆಚ್ಚಳದ ನಂತರ 5.45 ರೂ. ಆಗಿದೆ. ಅದೇ ರೀತಿ ಹಿರಿಯ ಪ್ರಾಥಮಿಕ ತರಗತಿಗಳಿಗೆ(5ರಿಂದ 8) 7.45 ರೂ. ಇದ್ದದ್ದು, ದರ ಹೆಚ್ಚಳದ ನಂತರ 8.17 ರೂ. ಆಗಿದೆ.
ವರ್ಷ ಪ್ರಾಥಮಿಕ ಶಾಲೆ ಹಿರಿಯ ಪ್ರಾಥಮಿಕ ಶಾಲೆ
2010-11 2.69 ರೂ. 4.03 ರೂ.
2022-23 5.45 ರೂ. 8.17 ರೂ.