Advertisement
ಈ ಶೈಕ್ಷಣಿಕ ವರ್ಷ ಮೇ 16ರಿಂದ ಆರಂಭಗೊಂಡಿದ್ದರೂ ಅಕ್ಷರ ದಾಸೋಹ ಸಿಬಂದಿಯು ಕಳೆದ ಎಪ್ರಿಲ್‌ನಲ್ಲಿ 10 ದಿನ ಕೆಲಸ ನಿರ್ವಹಿಸಿದ್ದರು. ಮೇಯಲ್ಲಿ 15 -16 ದಿನ, ಜೂನ್, ಜುಲೈಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಆಗಸ್ಟ್ ಸಹ ಮುಗಿಯುವ ಹಂತದಲ್ಲಿದೆ. ಆದರೆ ಶಾಲಾರಂಭವಾದಾಗಿನಿಂದ ಈವರೆಗೆ ಬಿಸಿಯೂಟ ನೌಕರರಿಗೆ ಸರಕಾರ ಸಂಬಳವೇ ನೀಡಿಲ್ಲ.
ಉಡುಪಿ ಜಿಲ್ಲೆಯಲ್ಲಿ 1,866 ಹಾಗೂ ದ.ಕ.ದಲ್ಲಿ 3,213 ಮಂದಿ ಸೇರಿದಂತೆ ಒಟ್ಟು ಉಭಯ ಜಿಲ್ಲೆಗಳಲ್ಲಿ 5,079 ಮಂದಿ ಅಕ್ಷರ ದಾಸೋಹ ಸಿಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ರಾಜ್ಯದಲ್ಲಿ 47,250 ಮಂದಿ ಅಡುಗೆ ತಯಾರಕರು ಹಾಗೂ 71,336 ಮಂದಿ ಅಡುಗೆ ಸಹಾಯಕರು ಸೇರಿ ಒಟ್ಟು 1,18,586 ಮಂದಿ ಅಕ್ಷರ ದಾಸೋಹ ಸಿಬಂದಿಯಿದ್ದಾರೆ. ಈ ಪೈಕಿ ಹೊಸ ಆದೇಶದಂತೆ ಈ ಶೈಕ್ಷಣಿಕ ಸಾಲಿನಿಂದ ಅಡುಗೆ ತಯಾರಕರಿಗೆ ಮಾಸಿಕ 3,700 ರೂ. ಹಾಗೂ ಸಹಾಯಕರಿಗೆ ಮಾಸಿಕ 3,600 ರೂ. ಗೌರವ ಧನವನ್ನು ಸರಕಾರ ನೀಡಲಾಗುತ್ತಿದೆ. ನಾವು ಎಪ್ರಿಲ್‌ನಲ್ಲಿ 10 ದಿನ ಹಾಗೂ ಮೇಯಲ್ಲಿ 12ರಿಂದ ಕೆಲಸ ಮಾಡಿದ್ದೇವೆ. ಜೂನ್, ಜುಲೈ ಪೂರ್ತಿ ಕೆಲಸ ಮಾಡಿದ್ದು, ಆಗಸ್ಟ್ ಆದರೂ ಈವರೆಗೆ ವೇತನ ಕೊಟ್ಟಿಲ್ಲ. ಸರಕಾರ ದಯವಿಟ್ಟು ವೇತವನ್ನು ಪ್ರತೀ ತಿಂಗಳು ನೀಡುವಂತಾಗಲಿ. ತಿಂಗಳ 5ನೇ ತಾರೀಕು ಬಿಡಿ, ಪ್ರತೀ ತಿಂಗಳ 10ರೊಳಗೆ ಆದರೂ ಕೊಡುವ ಕೆಲಸವನ್ನು ಮಾಡಲಿ. ನಾವು ಅದನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದು, ಹೀಗೆ ಆದರೆ ತುಂಬಾ ಕಷ್ಟವಾಗುತ್ತಿದೆ.
– ಸಿಂಗಾರಿ ಪೂಜಾರ್ತಿ, ಅಧ್ಯಕ್ಷೆ, ಕುಂದಾಪುರ ಅಡುಗೆ ಸಿಬಂದಿ ಸಂಘ
Related Articles
– ನಾರಾಯಣ ಗೌಡ ಜಂಟಿ ನಿರ್ದೇಶಕರು,
ಮಧ್ಯಾಹ್ನದ ಬಿಸಿಯೂಟ ಯೋಜನೆ, ಬೆಂಗಳೂರು
Advertisement
– ಪ್ರಶಾಂತ್ ಪಾದೆ