ವಾಷಿಂಗ್ಟನ್ : ವಿಶ್ವ ಪ್ರಸಿದ್ಧ ಮೈಕ್ರೋಸಾಫ್ಟ್ ಕಂಪೆನಿಯು ಇದೀಗ ಜಗತ್ತಿನಾದ್ಯಂತದ ತನ್ನ ಸಾವಿರಾರು ನೌಕರರನ್ನು ಉದ್ಯೋಗದಿಂದ ತೆಗೆದುಹಾಕುವ ಸಿದ್ಧತೆ ನಡೆಸುತ್ತಿದೆ ಎಂದು ಟೆಕ್ ಕ್ರಂಚ್ ವರದಿ ತಿಳಿಸಿದೆ.
Cloud Sales ಉದ್ಯಮಕ್ಕೆ ಹೆಚ್ಚು ಒತ್ತು ನೀಡುವುದು ಮೈಕ್ರೋಸಾಫ್ಟ್ ಕಂಪೆನಿಯ ಉದ್ದೇಶವಾಗಿರುವ ಕಾರಣ ಅದು ತನ್ನ ಉದ್ಯೋಗಿಗಳ ಸಂಖ್ಯೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಲು ನಿರ್ಧರಿಸಿರುವುದಾಗಿ ತಿಳಿದು ಬಂದಿದೆ.
ಮೈಕ್ರೋಸಾಫ್ಟ್ ವಿಶ್ವಾದ್ಯಂತದ ತನ್ನ ಸಹಸ್ರಾರು ಉದ್ಯೋಗಿಗಳನ್ನು ಕೈಬಿಡಲು ನಿರ್ಧರಿಸಿದ್ದು ಈ ಕುರಿತ ಪ್ರಕಟನೆಯು ಈ ವಾರಾಂತ್ಯದೊಳಗೆ ಹೊರ ಬೀಳುವ ಸಾಧ್ಯತೆ ಇದೆ ಕಂಪೆನಿಗೆ ನಿಕಟವಿರುವ ಮೂಲಗಳು ತಿಳಿಸಿರುವುದಾಗಿ ಟೆಕ್ ಕ್ರಂಚ್ ಹೇಳಿದೆ.
ಮೈಕ್ರೋಸಾಫ್ಟ್ ಕಂಪೆನಿಯ ಹಣಕಾಸು ವರ್ಷ ಜೂನ್ 30ಕ್ಕೆ ಕೊನೆಗೊಂಡಿದೆ. ಅಂತೆಯೇ ಹೊಸ ಹಣಕಾಸು ವರ್ಷಕ್ಕೆ (ಜು.1) ಸಂಬಂಧಿಸುವ ಕ್ರಮವಾಗಿ ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗುವುದು ಎಂದು ಗೊತ್ತಾಗಿದೆ.
ಉದ್ಯೋಗಿಗಳ ಸಂಖ್ಯೆ ಕಡಿತದೊಂದಿಗೆ ಸಾಂಸ್ಥಿಕ ವಿಲಯನವನ್ನು ಕೂಡ ಮೈಕ್ರೋಸಾಫ್ಟ್ ಉದ್ದೇಶಿಸಿದೆ. ಇದರಲ್ಲಿ ಗ್ರಾಹಕ ಘಟಕಗಳು ಮತ್ತು ಒಂದಕ್ಕಿಂತ ಹೆಚ್ಚು ಎಸ್‌ಎಂಇ ವಿಭಾಗಗಳನ್ನು ವಿಲಯನಗೊಳಿಸುವ ಪ್ರಸ್ತಾವವೂ ಸೇರಿದೆ ಟೆಕ್ ಕ್ರಂಚ್ ವರದಿ ಮಾಡಿದೆ.