ಹೊಸದಿಲ್ಲಿ: ಐಟಿ ಸಂಸ್ಥೆಗಳಲ್ಲಿನ ಉದ್ಯೋಗ ಕಡಿತ ಸರಣಿ ಮುಂದುವರಿದಿದ್ದು, ಮೈಕ್ರೋಸಾಫ್ಟ್ ನಿಂದ ಅಂಗಸಂಸ್ಥೆಯಾದ ಗಿತ್‌ಹಬ್ ಭಾರತದಲ್ಲಿನ ತನ್ನ 142 ಉದ್ಯೋ ಗಿಗಳನ್ನು ಕೆಲಸದಿಂದ ವಜಾಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.
Advertisement
ಬೆಂಗಳೂರು, ಹೈದರಾಬಾದ್ ಹಾಗೂ ದಿಲ್ಲಿಯಲ್ಲಿರುವ ಸಂಸ್ಥೆಯ ಕಚೇರಿಗಳಲ್ಲಿನ ಎಂಜಿನಿ ಯರಿಂಗ್ ವಿಭಾಗದ ಎಲ್ಲ ಉದ್ಯೋಗಿಗಳನ್ನೂ ವಜಾಗೊಳಿಸಲಾಗಿದೆ.
ಸಂಸ್ಥೆಯ ಮರು ಸಂಘಟನೆಯ ಯೋಜನೆಯ ಭಾಗವಾಗಿ ನಿರ್ಣಯ ಕೈಗೊಂಡಿರುವುದಾಗಿ ಕಂಪೆನಿ ವಕ್ತಾರರು ತಿಳಿಸಿದ್ದಾರೆ.
ಸಂಸ್ಥೆಯ ಸೇವೆಗಳಲ್ಲಿ ಎಐ ಚಾಲಿತ ತಂತ್ರಜ್ಞಾನದ ಸಂಪೂರ್ಣ ಬಳಕೆಯನ್ನು ಹೊಂದಲು ಯೋಜಿಸಿರುವುದಾಗಿಯೂ ನಿರ್ಧರಿಸಲಾಗಿದೆ.