Advertisement

Airport ಲೋಡರ್‌ಹುದ್ದೆಗೆ ನೂಕುನುಗ್ಗಲು! 2,216 ಹುದ್ದೆಗಳಿಗೆ 25,000ಕ್ಕೂ ಹೆಚ್ಚು ಜನ…

10:29 AM Jul 18, 2024 | Team Udayavani |

ಮುಂಬಯಿ: ತಿಂಗಳಿಗೆ 25 ಸಾವಿರ ರೂ. ವೇತನವಿರುವ ಏರ್‌ಪೋರ್ಟ್‌ ಲೋಡರ್‌ ಕೆಲಸಕ್ಕಾಗಿ ಬರೋಬ್ಬರಿ 25 ಸಾವಿರಕ್ಕೂ ಹೆಚ್ಚು ಆಕಾಂಕ್ಷಿಗಳು ಮುಗಿಬಿದ್ದ ಘಟನೆ ಮುಂಬಯಿಯಲ್ಲಿ ನಡೆದಿದೆ.

Advertisement

ಹೀಗಾಗಿ ಅಲ್ಲಿ ಕಾಲು¤ಳಿತದ ಪರಿಸ್ಥಿತಿ ನಿರ್ಮಾಣವಾಗಿತ್ತು. ಏರ್‌ ಇಂಡಿಯಾ ಏರ್‌ಪೋರ್ಟ್‌ ಸರ್ವಿಸಸ್‌ ಲಿಮಿಟೆಡ್‌ 2,216 ಏರ್‌ಪೋರ್ಟ್‌ ಲೋಡರ್‌ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ ಮಾಡಿತ್ತು. ಅದಕ್ಕಾಗಿ ಎಂಕಾಂ, ಬಿಎ, ಬಿಬಿಎ ಪದವೀಧರರು ಕೂಡ 400-500ಕಿ.ಮೀ. ದೂರದಿಂದ ಮುಂಬಯಿಗೆ ಧಾವಿಸಿದ್ದರು. 25 ಸಾವಿ ರಕ್ಕೂ ಅಧಿಕ ಮಂದಿ ಏಕಕಾಲಕ್ಕೆ ಬಂದ ಕಾರಣ, ಪರಿಸ್ಥಿತಿ ಕೈಮೀರುವಂತಾಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಉದ್ಯೋಗಾಕಾಂಕ್ಷಿಗಳನ್ನು ನಿಯಂತ್ರಿ ಸುವ ನಿಟ್ಟಿನಲ್ಲಿ ಸಂಸ್ಥೆಯ ಅಧಿಕಾರಿಗಳು ನಡೆಸುವ ವಿವಿಧ ಪ್ರಯತ್ನಗಳು ಈಗ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ವಿಮಾನದಲ್ಲಿನ ಲಗೇಜ್‌ಗಳನ್ನು ಲೋಡ್‌ ಮಾಡುವ ಮತ್ತು ಅನ್‌ಲೋಡ್‌ ಮಾಡುವ, ಬ್ಯಾಗೇಜ್‌ ಬೆಲ್ಟ್ ಹಾಗೂ ರ್‍ಯಾಂಪ್‌ ಟ್ರ್ಯಾಕ್ಟರ್‌ಗಳನ್ನು ನಿಭಾಯಿಸುವ ಕೆಲಸವನ್ನು ಏರ್‌ಪೋರ್ಟ್‌ ಲೋಡರ್‌ಗಳು ಮಾಡು ತ್ತಾರೆ. ಪ್ರತೀ ವಿಮಾನಕ್ಕೂ ಇಂಥ ಕನಿಷ್ಠ 5 ಲೋಡರ್‌ಗಳು ಬೇಕಾಗುತ್ತಾರೆ.

ಇದನ್ನೂ ಓದಿ: Ankola ಗುಡ್ಡ ಕುಸಿತ ಪ್ರಕರಣ: ಮತ್ತೆರಡು ಮೃತದೇಹ ಪತ್ತೆ: ಆರಕ್ಕೆರಿದ ಸಾವಿನ ಸಂಖ್ಯೆ

Advertisement

Udayavani is now on Telegram. Click here to join our channel and stay updated with the latest news.

Next