Advertisement

Microsoft ಬೆನ್ನಲ್ಲೇ ಯುಟ್ಯೂಬ್‌ನಲ್ಲೂ ಅಡಚಣೆ

09:36 PM Jul 22, 2024 | Team Udayavani |

ನವದೆಹಲಿ: ಮೈಕ್ರೋಸಾಫ್ಟ್ ಜಾಗತಿಕ ತಾಂತ್ರಿಕ ಅಡಚಣೆ ಬೆನ್ನಲ್ಲೇ ಇದೀಗ ಯುಟ್ಯೂಬ್‌ನಲ್ಲೂ ಅಂಥ ಸಮಸ್ಯೆ ಕಾಣಿಸಿಕೊಂಡು, ಗ್ರಾಹಕರು ಸೋಮವಾರ ಪರದಾಡುವಂತಾಯಿತು.

Advertisement

ಸೋಮವಾರ ಮಧ್ಯಾಹ್ನದಿಂದ ಸಮಸ್ಯೆ ಆರಂಭವಾಯಿತು. ಯುಟ್ಯೂಬ್‌ ಆ್ಯಪ್‌ ಮತ್ತು ವೆಬ್‌ಸೈಟ್‌ನಲ್ಲಿ ವಿಡಿಯೋ ಅಪ್‌ಲೋಡ್‌ ಮಾಡುವಾಗ ಹೆಚ್ಚು ಸಮಸ್ಯೆಯಾಗಿದೆ ಎಂದು ಬಳಕೆದಾರರು ದೂರಿದ್ದಾರೆಂದು ಡೌನ್‌ ಡಿಕ್ಟೆಟರ್‌ ಜಾಲತಾಣ ಹೇಳಿದೆ.

ಹಾಗಿದ್ದೂ, ಹೆಚ್ಚಿನ ಸಮಸ್ಯೆ ಯುಟ್ಯೂಬ್‌ ಆ್ಯಪ್‌ನಲ್ಲೇ ಕಂಡು ಬಂದಿದೆ. ಜಾಗತಿಕವಾಗಿ ಬಳಕೆದಾರರು ಸಾಕಷ್ಟು ಸಮಸ್ಯೆಯನ್ನು ಎದುರಿಸಿದರು. ಈ ಬಗ್ಗೆ ಯುಟ್ಯೂಬ್‌ ಅಧಿಕೃತವಾಗಿ ಯಾವುದೇ ಹೇಳಿಕೆಯನ್ನು ನೀಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next