ಹೈದರಾಬಾದ್: ಪ್ರಸಿದ್ಧ ಐಟಿ ಸಂಸ್ಥೆಯಾಗಿರುವ ಮೈಕ್ರೋಸಾಫ್ಟ್ ಸಂಸ್ಥೆಯು ಭಾರತದ ಅತ್ಯಂತ ದೊಡ್ಡ ಡೇಟಾ ಸೆಂಟರ್ ಅನ್ನು ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ಸ್ಥಾಪಿಸಲಿದೆ.
ಈ ವಿಚಾರವನ್ನು ತೆಲಂಗಾಣದ ಐಟಿ ಮತ್ತು ಕೈಗಾರಿಕೆ ಸಚಿವ ಕೆ.ಟಿ.ರಾಮಾ ರಾವ್ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
ಒಟ್ಟು 15000 ಕೋಟಿ ರೂ. ವೆಚ್ಚದಲ್ಲಿ ಡೇಟಾ ಸೆಂಟರ್ ನಿರ್ಮಿಸಲಾಗುವುದು. ಇದರಿಂದಾಗಿ ಹೆಚ್ಚಿನ ಪ್ರಮಾಣದ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಕೆ.ಟಿ.ರಾಮಾ ರಾವ್ ತಿಳಿಸಿದ್ದಾರೆ.
ಇದನ್ನೂ ಓದಿ:ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು : ಮಹತ್ವ ಪಡೆಯಲಿದೆ ನಾಳಿನ ಕಾರ್ಯಕಾರಿ ಸಮಿತಿ ಸಭೆ
ಈ ಬಗ್ಗೆ ಕೇಂದ್ರದ ಮಾಹಿತಿ ಮತ್ತು ತಂತ್ರಜ್ಞಾನದ ಇಲಾಖೆಯ ಸಹಾಯಕ ಸಚಿವ ರಾಜೀವ್ ಚಂದ್ರಶೇಖರ್ ಕೂಡ ಮಾತನಾಡಿದ್ದು, “ಮೈಕ್ರೋಸಾಫ್ಟ್ ಡೇಟಾ ಸೆಂಟರ್‌ನಿಂದಾಗಿ ನಮ್ಮ ಡಿಜಿಟಲ್ ಆರ್ಥಿಕತೆಗೆ ಪ್ರಯೋಜನವಾಗಲಿದೆ. ಹಾಗೂ ಇದು ನಮ್ಮ ದೇಶಕ್ಕೆ ದೀರ್ಘಾವಧಿಯ ಹೂಡಿಕೆಯಾಗಲಿದೆ.
ಕೌಶಲ್ಯದ ಮೇಲಿನ ಹೂಡಿಕೆಯು ನಮ್ಮ ಉದ್ಯೋಗಿಗಳನ್ನು ಇನ್ನಷ್ಟು ಸಶಕ್ತವಾಗಿಸುತ್ತದೆ’ ಎಂದಿದ್ದಾರೆ.