Advertisement

ಸಿರಿಂಜ್‌ ಮೂಲಕ ದೇಹಕ್ಕೆ ಮೈಕ್ರೋಚಿಪ್‌ ಅಳವಡಿಕೆ

07:03 AM May 13, 2021 | Team Udayavani |

ವಾಷಿಂಗ್ಟನ್‌: ಎಲೆಕ್ಟ್ರಾನಿಕ್ಸ್‌ ಪರಿಕರಗಳನ್ನು ಅತೀ ಚಿಕ್ಕ ಪರಿಕರಗಳನ್ನಾಗಿ ರೂಪಿಸಿರುವುದೇನೂ ಹೊಸ ವಿಚಾರವೇನಲ್ಲ. ಈ ತಂತ್ರಜ್ಞಾನದಲ್ಲಿ ಮತ್ತಷ್ಟು ಪರಿಣತಿ ಸಾಧಿಸಿರುವ ಕೊಲಂಬಿಯಾ ವಿವಿ ತಜ್ಞರು, ಮನುಷ್ಯನ ದೇಹದಲ್ಲಿ ಅಳವಡಿಸಬಹುದಾದ ಅತೀ ಚಿಕ್ಕ ಮೈಕ್ರೋಚಿಪ್‌ ಅನ್ನು ರೂಪಿಸಿ ಜಗತ್ತಿನ ಗಮನ ಸೆಳೆದಿದ್ದಾರೆ.

Advertisement

ಸಾಮಾನ್ಯವಾಗಿ, ಇಂಜೆಕ್ಷನ್‌ ಸೂಜಿಯ ಆಂತರಿಕ ವ್ಯಾಸ 0.071 ಇಂಚು ಇರುತ್ತದೆ. ಈ ಚಿಪ್‌ ಅದಕ್ಕಿಂತ ಚಿಕ್ಕ ಗಾತ್ರದ್ದಾಗಿದ್ದು (0.1 ಞಞ3), ಇಂಜೆಕ್ಷನ್‌ ಸೂಜಿಯ ಮೂಲಕವೇ ದೇಹದೊಳಗೆ ಈ ಚಿಪ್‌ ಅನ್ನು ಅಳವಡಿಸಬಹುದು. ಇದು ದೇಹದ ಉಷ್ಣಾಂಶದ ಗ್ರಹಿಕೆ ಇನ್ನಿತರ, ಊಹೆಗೂ ನಿಲುಕದ ಕೆಲಸಗಳನ್ನು ಮಾಡಬಲ್ಲದು.

ಉದಾಹರಣೆಗೆ, ಈ ಚಿಪ್‌, ಶರೀರದ ಆಂತರಿಕ ಅವಯವಗಳ ಒಳಗೆ ಆಗುವ ಬದ ಲಾವಣೆಗಳನ್ನು, ಸಣ್ಣ ಏರಿಳಿತವನ್ನೂ ಗ್ರಹಿಸಿ, ಮಾಹಿತಿ ರವಾನಿಸುತ್ತದೆ. ದೇಹದ ಅಂಗಾಂಶ ಗಳಲ್ಲಿನ‌ ಆಮ್ಲಜನಕ ಪ್ರಮಾಣ, ನರಗಳಲ್ಲಿ ಉತ್ಪತ್ತಿಯಾಗುವ ನ್ಯೂರಾನ್‌ ಡಸ್ಟ್‌ ಹಾಗೂ ಇನ್ನಿತರ ಸಂವೇದನೆಗಳನ್ನು ನೀಡುತ್ತವೆ. ರೇಡಿಯೋ ಫ್ರೀಕ್ವೆನ್ಸಿ ತರಂಗಗಳ ಮೂಲಕ ಬರುವ ಈ ಮಾಹಿತಿಯನ್ನು ಅಧ್ಯಯನ ಮಾಡ ಬಹುದು. ಇದರಿಂದ ಮನುಷ್ಯನ ಆರೋಗ್ಯದ ಮೇಲೆ ಸತತ ನಿಗಾ ಇಡಲು, ಅಪಾಯಗಳಿಂದ ಕಾಪಾಡಲು ಸಹಾಯಕವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next