Advertisement

ಬೆಂಗಳೂರಿನ ವಿಜ್ಞಾನಿಗಳ ಮಹತ್ವದ ಸಂಶೋಧನೆ: ಬಸವನಹುಳು ಹೊಸ ಪ್ರಭೇದ ಪತ್ತೆ

12:15 AM Oct 22, 2021 | Team Udayavani |

ಶಿಲ್ಲಾಂಗ್‌: ಮೇಘಾಲಯದ ಈಸ್ಟ್‌ ಖಾಸಿ ಹಿಲ್ಸ್‌ ಜಿಲ್ಲೆಯ ಮಾಸ್ವಮೈ ಎಂಬ ಹಳ್ಳಿಯಲ್ಲಿ ಬಸವನಹುಳು ವಿನ ಹೊಸ ಪ್ರಬೇಧವೊಂದು ಪತ್ತೆಯಾಗಿದೆ. ಬೆಂಗಳೂರಿನ ಅಶೋಕ ಟ್ರಸ್ಟ್‌ ಫಾರ್‌ ರಿಸರ್ಚ್‌ ಇನ್‌ ಎಕಾಲಜಿ ಆ್ಯಂಡ್‌ ದ ಎನ್ವಿರಾನ್ಮೆಂಟ್‌ (ಅಟ್ರೀ) ಸಂಸ್ಥೆಯ ವಿಜ್ಞಾನಿಗಳಾದ ನಿಪು ಕುಮಾರ್‌ ದಾಸ್‌ ಹಾಗೂ

Advertisement

ಎನ್‌.ಎ. ಅರವಿಂದ್‌ ಎಂಬುವರು ಈ ಪ್ರಭೇದಗಳನ್ನು ಪತ್ತೆ ಹಚ್ಚಿದ್ದಾರೆ. ಆ ಹಳ್ಳಿಯಲ್ಲಿರುವ ಸುಣ್ಣದ ಕಲ್ಲಿನ ಗುಹೆಯಲ್ಲಿ ಇವು ಪತ್ತೆಯಾಗಿದ್ದು ಇವುಗಳಿಗೆ ಜಿಯೋರಿಸ್ಸಾ ಮಾಸ್ವಮೈನಿಸ್‌ ಎಂದು ಹೆಸರಿಡಲಾಗಿದೆ.

ಈ ಪ್ರಭೇದದ ಬಸವನಹುಳುಗಳು ಭೌತಿಕವಾಗಿ ತುಂಬಾ ಚಿಕ್ಕವಾಗಿದ್ದು, ಇವುಗಳಲ್ಲಿ ವಯಸ್ಕ ಬಸವನಹುಳು ಕೇವಲ 2 ಮಿಮೀ ಉದ್ದವಿರುತ್ತದೆ. ಇದೇ ಜಾತಿಗೆ ಸೇರಿದ “ಜಿಯೊರಿಸ್ಸಾ ಸರಿಟಾ’ ಪ್ರಭೇದವು 170 ವರ್ಷಗಳ ಹಿಂದೆ ಇದೇ ಪ್ರಾಂತ್ಯದಲ್ಲಿ ಪತ್ತೆಯಾಗಿತ್ತು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ತಮ್ಮಿà ಸಂಶೋಧನೆಯ ಬಗ್ಗೆ ಟ್ವೀಟ್‌ ಮಾಡಿರುವ ಅಟ್ರೀ ಸಂಸ್ಥೆ, “ಸುಣ್ಣದಕಲ್ಲಿನ ಗಣಿಯ ತೇವಾಂಶವಿರುವ ಕಡೆ ಈ ಹೊಸ ಪ್ರಭೇದದ ಬಸವನಹುಳುಗಳು ಪತ್ತೆಯಾಗಿವೆ. ಆದರೆ, ಇವು ಸುಣ್ಣದಕಲ್ಲು ಇರುವ ಪ್ರಾಂತ್ಯಗಳಲ್ಲಿ ಮಾತ್ರ ಇರುತ್ತವೆಯೇ ಎಂಬುದು ಖಚಿತವಾಗಿಲ್ಲ’ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next