ಕಲೆ ಎಂಬುವುದು ಕೌಶಲ ವೃದ್ಧಿಯ ಜತೆಗೆ ನಮ್ಮನ್ನು ಪ್ರಸಿದ್ಧಿಯೆಡೆಗೆ ಕೊಂಡೊಯ್ಯುತ್ತದೆ. ಈ ಕಲೆಗಳ ಪಟ್ಟಿಯಲ್ಲಿ ಚಿತ್ರಕಲೆ, ಕಲಾಕೃತಿಗಳ ರಚನೆ ಹೀಗೆ ಬೆಳೆಯುತ್ತಾ ಹೋಗುತ್ತಿದೆ. ಇವುಗಳಲ್ಲಿ ಇಂದು ಮೈಕ್ರೋ ಆರ್ಟಿಸ್ಟ್ ಕಲೆಗಾರರಿಗೆ ಇಂದು ಬಹು ಬೇಡಿಕೆಯಿದೆ.
ಮೈಕ್ರೋ ಆರ್ಟಿಸ್ಟ್ ಎಂಬುವುದನ್ನು ಪೆನ್ಸಿಲ್ ಆರ್ಟಿಸ್ಟ್ ಎಂತಲೂ ಕರೆಯುತ್ತಾರೆ. ಈ ಮೈಕ್ರೋ ಆರ್ಟಿಸ್ಟ್ ಸೂಕ್ಷ್ಮ ಕಲೆಯಾಗಿದ್ದು ಇದು ಪೆನ್ಸಿಲ್‌ಗಳ ಅಥವಾ ಕಣ್ಣಿಗೆ ಕಾಣದಷ್ಟು ಚಿಕ್ಕದಾಗಿ ಚಿತ್ರಕಲೆ ಅಥವಾ ಕಲಾಕೃತಿಗಳನ್ನು ರಚಿಸುವುದಾಗಿದೆ. ಈ ಕಲೆಯನ್ನು ರೂಢಿಸಿಕೊಳ್ಳಲು ಯಾವುದೇ ವಿಶ್ವವಿದ್ಯಾಲಯಗಳಿಂದ ಪದವಿ ಅಥವಾ ಪಿಎಚ್.ಡಿ. ಮಾಡಬೇಕೆಂತೇನಿಲ್ಲ. ನಮ್ಮಲ್ಲಿ ದೃಢ ಮನಸ್ಸು ಮತ್ತು ಆಸಕ್ತಿಯಿದ್ದರೆ ಈ ಕಲೆಯನ್ನು ಕಲಿಯಬಹುದಾಗಿದೆ.
ಮೈಕ್ರೋ ಆರ್ಟ್ ಪ್ರಯೋಗವನ್ನು ಪೆನ್ಸಿಲ್, ಸಾಬೂನು, ಟೀ-ಕಪ್‌ಗ್ಳ ಮೇಲೆ ಮಾಡಬಹುದಾಗಿದೆ. ಈ ಕಲೆಯನ್ನು ಕಲಿಯಬೇಕಾದರೆ ಸತತ ಪ್ರಯತ್ನ ಸಹಿತ ಆಸಕ್ತಿ ಮುಖ್ಯವಾಗಿ ಬೇಕಾಗುತ್ತದೆ. ಕಣ್ಣಿಗೆ ಕಾಣದಷ್ಟು ವಸ್ತು ಅಥವಾ ಪೆನ್ಸಿಲ್ ಗಳ ಮೇಲೆ ಕಲಾಕೃತಿಗಳನ್ನು ರಚಿಸುವುದು ಸಾಮಾನ್ಯವಲ್ಲ,. ಇದಕ್ಕೆ ಪರಿಶ್ರಮವೂ ಕೂಡ ಅಷ್ಟೇ ಮುಖ್ಯ. ಈ ಕಲೆಯೂ ಪ್ರಸಿದ್ಧಿ ತಂದುಕೊಡುವುದರ ಜತೆಗೆ ಒಂದು ಅರೆಕಾಲಿಕ ಉದ್ಯೋಗವಾಗಿ ಮಾಡಿಕೊಳ್ಳಬಹುದಾಗಿದೆ.
ಮೈಕ್ರೋ ಆರ್ಟ್‌ನ್ನು ವೃತ್ತಿಗತವಾಗಿ ಮಾಡಿಕೊಂಡವರ ಹಲವರಿದ್ದಾರೆ. ಅದರಲ್ಲಿ ಹಾಸನದ ಸಾದೀಕ್ ಎಂಬುವವರು 1 ನಿಮಿಷದಲ್ಲಿ ಪೆನ್ಸಿಲ್‌ನ ಮೇಲೆ ಆಂಗ್ಲ ಅಕ್ಷರಗಳಿಂದ ಇಂಡಿಯಾ ಎಂಬುವುದನ್ನು ರಚಿಸಿ ದಾಖಲೆ ನಿರ್ಮಿಸಿದ್ದಾರೆ. ಇನ್ನು ಹಲವು ಪ್ರಸಿದ್ಧ ಕಲೆಗಾರರಿದ್ದು, ಪ್ರಧಾನಿ ಮೋದಿ, ಸಿದ್ಧಗಂಗಾ ಶ್ರೀ, ಸಚಿನ್ ತೆಂಡ್ಲುಕರ್, ವರನಟ ರಾಜಕುಮಾರ್ ಅವರನ್ನು ಮೈಕ್ರೋ ಆರ್ಟ್‌ಗಳಲ್ಲಿ ಬಿಡಿಸಿ ಕಲೆಗಾರರು ತಮ್ಮ ಕಲೆಯ ಸಾಹಸವನ್ನು ಮೆರೆದಿದ್ದಾರೆ.
ಮೈಕ್ರೋ ಆರ್ಟಿಸ್ಟ್‌ಗಳದು ಬೆರಗು ಮೂಡಿಸುವ ಕಲೆ ಇದಾಗಿದೆ. ಒಂದು ಸಣ್ಣದಾದ ವಸ್ತುವಿನ ಕಲೆಯ ಮೂಲಕ ಕಲಾಕೃತಿ ಮೂಡಿಸುವುದು ಒಂದು ರೀತಿಯಲ್ಲಿ ಸವಾಲು ಆಗಿದ್ದು, ಇದಕ್ಕೆ ಮುಖ್ಯವಾಗಿ ಆಸಕ್ತಿ, ಗಂಭೀರತೆ ಬೇಕಾಗುತ್ತದೆ ಎನ್ನುತ್ತಾರೆ ಮೈಕ್ರೋ ಆಟಿರ್ಸ್ಡ್ ಮುಖೇಶ್ ಬೆಳ್ತಂಗಡಿ.
ಅರೆಕಾಲಿಕೆ ಉದ್ಯೋಗ
ಮೈಕ್ರೋ ಆರ್ಟ್ ರಚನೆ ಈಗ ಬಹುತೇಕವಾಗಿ ನಾವು ಅರೆಕಾಲಿಕ ಉದ್ಯೋಗವಾಗಿ ಮಾಡಬಹುದಾಗಿದೆ. ಇದರಲ್ಲಿ ಹೆಚ್ಚು ವಿದ್ಯಾರ್ಥಿಗಳೇ ತಮ್ಮ ಶಾಲಾ-ಕಾಲೇಜು ವಿದ್ಯಾಭ್ಯಾಸದ ಜತೆಗೆ ಇದೊಂದು ಅರೆಕಾಲಿಕ ಉದ್ಯೋಗ ಮಾಡಿಕೊಂಡು ಹಣವನ್ನು ಗಳಿಸುತ್ತಾರೆ. ಮೈಕ್ರೋ ಕಲಾಕೃತಿಗಳಿಗೆ ಹೆಚ್ಚಿನ ಬೇಡಿಕೆಯಿದ್ದು ಇಷ್ಟವಾದರೆ ಹೆಚ್ಚಿನ ಮೌಲ್ಯಕ್ಕೆ ಮಾರಾಟವಾಗುತ್ತದೆ. ಅಲ್ಲದೇ ಹಲವಾರು ವಸ್ತು ಪ್ರದರ್ಶನ ಸ್ಪರ್ಧೆಗಳಲ್ಲಿ ಕೂಡ ಭಾಗವಹಿಸಬಹುದಾಗಿದ್ದು ಮೈಕ್ರೋ ಆರ್ಟಿಸ್ಟ್ ಹೆಚ್ಚಿನ ಒಲುವು ತೋರಿಸಬಹುದಾಗಿದೆ.
ಪೆನ್ಸಿಲ್ ಆರ್ಟಿಸ್ಟ್ ಕಲಿಕೆಗೆ ಯಾವುದೇ ಕೋರ್ಸ್ ಗಳಲ್ಲಿದ್ದರೂ ಇತ್ತೀಚೆಗೆ ಡಿಪ್ಲೋಮಾ ಕೋರ್ಸ್ ಗಳನ್ನು ಆರಂಭಿಸಲಾಗಿದೆ. ಯುಟ್ಯೂಬ್‌ಗಳಲ್ಲಿ ಮೈಕ್ರೋ ಆರ್ಟಿಸ್ಟ್‌ಗಳು ಮಾರ್ಗದರ್ಶನ ಮಾಡುತ್ತಿದ್ದಾರೆ. ಇದರಿಂದ ಕಲಿತು ನಾವು ಮೈಕ್ರೋ ಆರ್ಟಿಸ್ಟ್ ಗಳಾಬಹುದಾಗಿದೆ.