ಕೋಲ್ಕತ್ತಾ: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ನ ಈ ಬಾರಿಯ ಕೂಟದಲ್ಲಿ ಪಾಕಿಸ್ತಾನ ತಂಡವು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಕೂಟದಲ್ಲಿ ಐದು ಸೋಲನುಭವಿಸಿದ ಬಾಬರ್ ಅಜಂ ಪಡೆಯು ಸೆಮಿ ಫೈನಲ್ ಪ್ರವೇಶ ಕಾಣದೆ ಹೊರಬಿದ್ದಿದೆ.
ಪಾಕಿಸ್ತಾನ ತಂಡದ ನಿರ್ದೇಶಕ ಮಿಕ್ಕಿ ಆರ್ಥರ್ 2023 ರ ವಿಶ್ವಕಪ್‌ನಲ್ಲಿ ತಂಡದ ನೀರಸ ಪ್ರದರ್ಶನದ ಹೊರತಾಗಿಯೂ ನಾಯಕ ಬಾಬರ್ ಅಜಂ ಅವರ ಬೆಂಬಕ್ಕೆ ನಿಂತಿದ್ದಾರೆ. ಪಾಕಿಸ್ತಾನದ ನಾಯಕ ಅವರ ತಪ್ಪುಗಳಿಂದ ಕಲಿಯುತ್ತಾರೆ ಎಂದು ಅವರು ಹೇಳಿದರು.
ಪಾಕಿಸ್ತಾನದ ನೀರಸ ಪ್ರದರ್ಶನದ ಬಳಿಕ ತಂಡದಲ್ಲಿ ನಾಯಕತ್ವದಲ್ಲಿ ಬದಲಾವಣೆಯ ಕೂಗು ಎದ್ದಿದೆ. ಮಾಜಿ ಆಟಗಾರರು ನಾಯಕನ ಸ್ಥಾನವನ್ನು ಬೇರೆಯವರಿಗೆ ನೀಡಬೇಕು ಎಂದಿದ್ದಾರೆ.
“ನಾವು ನಿಜವಾಗಿ ಉತ್ತಮ ಘಟಕ. ನಾನು ಬಾಬರ್ ಬೆಂಬಲಕ್ಕೆ ನಿಲ್ಲುನೆ. ಬಾಬರ್ ನನಗೆ ತುಂಬಾ ಹತ್ತಿರವಾಗಿದ್ದಾನೆ. ಅವನು ಪ್ರಯಾಣದಲ್ಲಿ ಕರೆದೊಯ್ಯಬೇಕಾದ ಯುವಕ. ಅವನಿಗೆ ದಾರಿಯನ್ನು ತೋರಿಸಬೇಕಾಗಿದೆ. ಅವನು ಇನ್ನೂ ಎಲ್ಲವನ್ನೂ ಕಲಿಯುತ್ತಿದ್ದಾನೆ. ಅವರು ತುಂಬಾ ಉತ್ತಮವಾದ ಬ್ಯಾಟ್ಸ್‌ಮನ್ ಎಂದು ನಮಗೆ ತಿಳಿದಿದೆ. ಅವನು ತಮ್ಮ ನಾಯಕತ್ವದಿಂದ ಪ್ರತಿದಿನ ಕಲಿಯುತ್ತಾನೆ. ಅವನು ಬೆಳೆಯುತ್ತಿದ್ದಾನೆ. ನಾವು ಅವನಿಗೆ ಸಮಯವನ್ನು ನೀಡಬೇಕಾಗಿದೆ” ಎಂದು ಮಿಕ್ಕಿ ಆರ್ಥರ್ ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಬಾಬರ್ ಅಜಮ್ ವಿರುದ್ಧ ಆಕ್ರಮಣಶೀಲತೆಯ ಕೊರತೆಗೆ ಟೀಕೆಗಳು ಎದುರಾಗಿದೆ. ಪಂದ್ಯಗಳ ಸಮಯದಲ್ಲಿ ಅವರ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯಗಳನ್ನು ಹಲವರು ಪ್ರಶ್ನಿಸಿದರು. ನಾಯಕತ್ವದ ಜವಾಬ್ದಾರಿಗಳು ಅವರ ಬ್ಯಾಟಿಂಗ್ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಹಲವಾರು ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಸಲಹೆ ನೀಡಿದ್ದಾರೆ.