ಮುಂಬಯಿ: ಡೆಲ್ಲಿ ಕ್ಯಾಪಿಟಲ್ಸ್‌ನ ಆಸ್ಟ್ರೇಲಿಯದ ಆಲ್‌ರೌಂಡರ್ ಮಿಚೆಲ್ ಮಾರ್ಷ್ ಅವರ ಎರಡನೇ ಆರ್‌ಟಿಪಿಸಿಆರ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅವರು ಕಡಿಮೆ ಪಕ್ಷ 10 ದಿನ ಯಾವುದೇ ಪಂದ್ಯದಲ್ಲಿ ಆಡುವಂತಿಲ್ಲ. ಅವರ ಜತೆ ಇನ್ನಿಬ್ಬರು ಬೆಂಬಲ ಸಿಬಂದಿಗೂ ಪಾಸಿಟಿವ್ ಬಂದಿದೆ. ಇದರಿಂದ ತಂಡದ ಒಟ್ಟು ನಾಲ್ವರಿಗೆ ಸೋಂಕು ದೃಢಪಟ್ಟಿದೆ.
ಮಾರ್ಷ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆಯೆ ಎಂಬುದು ದೃಢಪಟ್ಟಿಲ್ಲ. ತಂಡದ ವೈದ್ಯ ಅಭಿಜಿತ್ ಸಾಲ್ವಿ ಮತ್ತು ಮಸಾಜ್ ಮಾಡುವವರಿಗೆ ಸೋಂಕು ದೃಢಪಟ್ಟಿದೆ.
ಈ ಮೊದಲು ತಂಡದ ಫಿಸಿಯೊ ಪ್ಯಾಟ್ರಿಕ್ ಫರ್ಹಾರ್ತ್ ಅವರಿಗೆ ಪಾಸಿಟಿವ್ ಬಂದಿತ್ತು.ಮಿಚೆಲ್ ಮಾರ್ಷ್ ಅವರ ಮೊದಲ ಆರ್‌ಟಿಪಿಸಿಆರ್ ವರದಿಯಲ್ಲಿ ನೆಗೆಟಿವ್ ಬಂದಿತ್ತು. ಆದರೆ ಎರಡನೇ ವರದಿಯಲ್ಲಿ ಪಾಸಿಟಿವ್ ಬಂದಿದೆ. ಉಳಿದ ಆಟಗಾರರ ಆರ್‌ಟಿಪಿಸಿಆರ್ ವರದಿ ನೆಗೆಟಿವ್ ಬಂದಿದೆ.
ಇದನ್ನೂ ಓದಿ:ಜಹಾಂಗೀರ್ ಪುರಿ ಹಿಂಸಾಚಾರ : ದೆಹಲಿ ಪೊಲೀಸರಿಗೆ ಓವೈಸಿ ಗಂಭೀರ ಪ್ರಶ್ನೆ
ಹೀಗಾಗಿ ಮಾರ್ಷ್ ಅವರನ್ನು ಐಶೊಲೇಶನ್‌ನಲ್ಲಿ ಇಡಲಾಗುವುದು ಮತ್ತು 10 ದಿನ ಅವರು ಆಟ ಆಡುವುದಿಲ್ಲ. ಮಾರ್ಷ್ ಒಬ್ಬರ ವರದಿ ಪಾಸಿಟಿವ್ ಬಂದ ಕಾರಣ ಬುಧವಾರ ನಡೆಯುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಣ ಐಪಿಎಲ್ ಪಂದ್ಯಕ್ಕೆ ಯಾವುದೇ ಅಪಾಯ ಇಲ್ಲ ಎದು ಬಿಸಿಸಿಐಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.