Advertisement

ಮೂರನೇ ಪ್ರವಾಸ ಕೈಗೊಂಡ ಬ್ಲೂ ಒರಿಜಿನ್‌

09:15 PM Dec 12, 2021 | Team Udayavani |

ನ್ಯೂಯಾರ್ಕ್‌: ಅಮೆಜಾನ್‌ ಸಂಸ್ಥಾಪಕ ಜೆಫ್ ಬೆಜೋಸ್‌ ಸಂಸ್ಥಾಪಿಸಿದ ಬ್ಲೂ ಒರಿಜಿನ್‌ ಕಂಪನಿ ವತಿಯಿಂದ ಮೂರನೇ ಆವೃತ್ತಿಯ ಗಗನಯಾತ್ರೆ ಯಶಸ್ವಿಯಾಗಿ ಮುಕ್ತಾಯವಾಗಿದೆ.

Advertisement

ಈ ಬಾರಿಯ ವಿಶೇಷತೆ ಏನೆಂದರೆ 1961ರಲ್ಲಿ ಮೊದಲ ಬಾರಿಗೆ ಗಗನಯಾತ್ರೆ ಕೈಗೊಂಡಿದ್ದ ಅಮೆರಿಕದ ಮೊದಲ ಗಗನಯಾತ್ರಿ ಅಲೆನ್‌ ಶೆಪರ್ಡ್‌ ಅವರ ಪುತ್ರಿ ಲಾರಾ ಶೆಪರ್ಡ್‌ ಚರ್ಚ್‌ಲೇ (74) ಸೇರಿದಂತೆ ಆರು ಮಂದಿ ಬಾಹ್ಯಾಕಾಶ ಯಾತ್ರೆ ಕೈಗೊಂಡಿದ್ದಾರೆ.

ಬಾಹ್ಯಾಕಾಶ ಪ್ರವಾಸಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಬ್ಲೂ ಒರಿಜಿನ್‌ ಕಂಪನಿ ವತಿಯಿಂದ ಪ್ರಸಕ್ತ ವರ್ಷ ಆಯೋಜಿಸಲಾಗಿದ್ದ ಮೂರನೇ ಗಗನ ಪ್ರವಾಸ ಇದಾಗಿದೆ.

ಪ್ರತಿಕೂಲ ಹವಾಮಾನದಿಂದಾಗಿ ಎರಡು ದಿನಗಳ ಕಾಲ ವಿಳಂಬ ಮಾಡಿದ್ದ ಯಾತ್ರೆಯನ್ನು ಶನಿವಾರ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿತ್ತು. ಅದರ ಪ್ರಕಾರ ಅಮೆರಿಕದ ಟೆಕ್ಸಸ್‌ನ ವ್ಯಾನ್‌ ಹಾರ್ನ್ ಎಂಬಲ್ಲಿಂದ ಯಶಸ್ವಿ ಯಾತ್ರೆ ನಡೆಸಲಾಯಿತು.

ಇದನ್ನೂ ಓದಿ:ಧಮ್ ಇದ್ದರೆ ಹನುಮಮಾಲಾಧಾರಿಗಳನ್ನು ತಡೆಯಿರಿ : ಡಿಸಿಗೆ ಸವಾಲು

Advertisement

ಕೇವಲ ಹತ್ತು ನಿಮಿಷಗಳ ಅವಧಿಯದ್ದಾಗಿದ್ದ 100 ಕಿಮೀ ದೂರ ಪ್ರಯಾಣ ನಡೆಸಿತ್ತು. ಯಾತ್ರೆಯಲ್ಲಿ ಭಾಗಿಯಾದ ಬಗ್ಗೆ ಹರ್ಷ ವ್ಯಕ್ತಪಡಿಸಿದ ಲಾರಾ ಶೆಪರ್ಡ್‌ “ಆಗಸದಲ್ಲಿ ನಾನು ಕೈಗೊಂಡ ಯಾತ್ರೆಯನ್ನು ಕಣ್ಣು ತುಂಬಿ ನೋಡಲು ಬರಲಿದ್ದಾರೆ ಎಂಬ ಭಾವನೆಯಲ್ಲಿದ್ದೆ. ಅವರು ಈಗ ಇದ್ದಿದ್ದರೆ ಹರ್ಷ ವ್ಯಕ್ತಪಡಿಸುತ್ತಿದ್ದರು’ ಎಂದಿದ್ದಾರೆ.

ಬಾಹ್ಯಾಕಾಶ ಪ್ರವಾಸ ಉತ್ತೇಜನಕ್ಕಾಗಿ ಉದ್ಯಮಿ ರಿಚರ್ಡ್‌ ಬ್ರ್ಯಾನ್ಸನ್‌ ಅವರು ವರ್ಜಿನ್‌ ಅಟ್ಲಾಂಟಿಕ್‌, ಮತ್ತೂಬ್ಬ ಸಿರಿವಂತ ಉದ್ಯಮಿ ಎಲಾನ್‌ ಮಸ್ಕ್ ಅವರ ಕಂಪನಿ ಕೂಡ ನಾಲ್ವರನ್ನು ಗಗನ ಯಾತ್ರೆಗೆ ಕಳುಹಿಸಿಕೊಟ್ಟಿತ್ತು.

Advertisement

Udayavani is now on Telegram. Click here to join our channel and stay updated with the latest news.

Next