Advertisement

ಕಮೆಂಟ್ರಿ ನಿಲ್ಲಿಸಿದ ಹೋಲ್ಡಿಂಗ್‌

10:26 PM Sep 16, 2021 | Team Udayavani |

ಕಿಂಗ್‌ಸ್ಟನ್‌ (ಜಮೈಕಾ): ತನ್ನ ಘಾತಕ ಬೌಲಿಂಗ್‌ ಮೂಲಕ ವಿಶ್ವದ ಘಟಾನುಘಟಿ ಬ್ಯಾಟ್ಸ್‌ಮನ್‌ಗಳನ್ನು ಬೆದರಿಸಿದ ಬಳಿಕ ಕ್ರಿಕೆಟ್‌ ವೀಕ್ಷಕ ವಿವರಣಕಾರನಾಗಿ ಜನಪ್ರಿಯರಾದ ವೆಸ್ಟ್‌ ಇಂಡೀಸ್‌ನ ಮೈಕಲ್‌ ಹೋಲ್ಡಿಂಗ್‌ ಈ ವೃತ್ತಿಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ. 2021ರ ಬಳಿಕ ಇವರ ಧ್ವನಿ ಕೇಳಿಬರುವುದಿಲ್ಲ.

Advertisement

ಹೋಲ್ಡಿಂಗ್‌ ಕಳೆದೆರಡು ದಶಕಗಳಿಂದ ಸ್ಕೈ ನ್ಪೋರ್ಟ್ಸ್ ಕಮೆಂಟ್ರಿ ತಂಡದ ಮೂಲಕ ತನ್ನದೇ ಆದ ಛಾಪು ಮೂಡಿಸಿದ್ದರು. 1988ರಲ್ಲಿ ಮೊದಲ ಸಲ ಕೆರಿಬಿಯನ್‌ನಲ್ಲಿ ಕಮೆಂಟ್ರಿ ಬಾಕ್ಸ್‌ ಪ್ರವೇಶಿಸಿದರು. ಬಳಿಕ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಇವರ ಧ್ವನಿ ಖಾಯಂ ಆಯಿತು. ಇವರ ವಿಶ್ಲೇಷಣಾತ್ಮಕ ವೀಕ್ಷಕ ವಿವರಣೆಗೆ “ರಾಯಲ್‌ ಟೆಲಿವಿಷನ್‌ ಸೊಸೈಟಿ’ (ಆರ್‌ಟಿಎಸ್‌) ಪ್ರಶಸ್ತಿ ಕೂಡ ಒಲಿದು ಬಂತು.

“2021ರ ಬಳಿಕ ಕಮೆಂಟ್ರಿಯಲ್ಲಿ ಮುಂದುವರಿಯದಿರಲು ನಾನು ಹಿಂದೆಯೇ ನಿರ್ಧರಿಸಿದ್ದೆ. ಈ ವಯಸ್ಸಿನಲ್ಲಿ ಧ್ವನಿ ನಮ್ಮ ಹಿಡಿತದಲ್ಲಿರದು. ನನಗೀಗ 66 ವರ್ಷ; 36, 46 ಅಥವಾ 56 ಅಲ್ಲ…’ ಎಂಬುದಾಗಿ ಹೋಲ್ಡಿಂಗ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next