Advertisement

ಮಯಾಮಿ ಓಪನ್‌ ಟೆನಿಸ್‌: ಸಿನ್ನರ್‌- ಹುರ್ಕಾಝ್ ಫೈನಲ್‌

11:50 PM Apr 03, 2021 | Team Udayavani |

ಫ್ಲೋರಿಡಾ : ರವಿವಾರ ನಡೆಯುವ “ಮಯಾಮಿ ಓಪನ್‌ ಟೆನಿಸ್‌’ ಕೂಟದ ಫೈನಲ್‌ನಲ್ಲಿ ಎರಡು ಹೊಸ ಮುಖಗಳು ಪ್ರಶಸ್ತಿಗೆ ಸೆಣಸಲಿವೆ. ಇಟಲಿಯ 19 ವರ್ಷದ ಜಾನಿಕ್‌ ಸಿನ್ನರ್‌ ಮತ್ತು ಪೋಲೆಂಡಿನ 26ನೇ ಶ್ರೇಯಾಂಕದ ಹ್ಯೂಬರ್ಟ್‌ ಹುರ್ಕಾಝ್ ಮುಖಾಮುಖೀಯಾಗಲಿದ್ದಾರೆ.

Advertisement

ಸೆಮಿಫೈನಲ್‌ನಲ್ಲಿ ಜಾನಿಕ್‌ ಸಿನ್ನರ್‌ ಸ್ಪೇನಿನ ರಾಬರ್ಟೊ ಬೌಟಿಸ್ಟ ಅಗುಟ್‌ ಅವರನ್ನು 5-7, 6-4, 6-4ರಿಂದ; ಹುರ್ಕಾಝ್ ರಶ್ಯದ ಆ್ಯಂಡ್ರೆ ರುಬ್ಲೇವ್‌ ಅವರನ್ನು 6-3, 6-4ರಿಂದ ಹಿಮ್ಮೆಟ್ಟಿಸಿದರು.

“ಬಿಗ್‌ ತ್ರೀ’ಗಳಾದ‌ ಜೊಕೋವಿಕ್‌, ನಡಾಲ್‌, ಫೆಡರರ್‌ ಹಿಂದೆ ಸರಿದುದರಿಂದ ಇದೊಂದು ಮುಕ್ತ ಪಂದ್ಯಾವಳಿಯಾಗಿ ಮಾರ್ಪಟ್ಟಿತ್ತು. ವನಿತಾ ಫೈನಲ್‌ನಲ್ಲಿ ಆ್ಯಶ್ಲಿ ಬಾರ್ಟಿ-ಬಿಯಾಂಕಾ ಆ್ಯಂಡ್ರಿಸ್ಕೂ ಎದುರಾಗುವರು.

ಇದನ್ನೂ ಓದಿ :ಕೆಪಿಎಸ್‌ಸಿ ನೂತನ ಅಧ್ಯಕ್ಷರಾಗಿ ಶಿವಶಂಕರಪ್ಪ ಸಾಹುಕಾರ್‌ ನೇಮಕ

Advertisement

Udayavani is now on Telegram. Click here to join our channel and stay updated with the latest news.

Next