Advertisement

ಮಯಾಮಿ ಓಪನ್‌ ಟೆನಿಸ್‌: ಇಸ್ನರ್‌-ಜ್ವೆರೇವ್‌ ಫೈನಲ್‌

06:55 AM Apr 01, 2018 | Team Udayavani |

ಮಯಾಮಿ: ಅಮೆರಿಕದ ಜಾನ್‌ ಇಸ್ನರ್‌ ಮತ್ತು ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೇವ್‌ “ಮಯಾಮಿ ಓಪನ್‌ ಟೆನಿಸ್‌’ ಪಂದ್ಯಾವಳಿಯ ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ ಪರಸ್ಪರ ಮುಖಾಮುಖೀಯಾಗಲಿದ್ದಾರೆ.

Advertisement

ಶುಕ್ರವಾರ ರಾತ್ರಿಯ ಮೊದಲ ಸೆಮಿಫೈನಲ್‌ನಲ್ಲಿ ಜಾನ್‌ ಇಸ್ನರ್‌ ಆರ್ಜೆಂಟೀನಾದ ಜುವಾನ್‌ ಮಾರ್ಟಿನ್‌ ಡೆಲ್‌ ಪೊಟ್ರೊ ಅವರನ್ನು 6-1, 7-6 (7-2) ಅಂತರದಿಂದ ಪರಾಭವಗೊಳಿಸಿದರು. ಅನಂತರದ ಸೆಮಿಫೈನಲ್‌ ಹಣಾಹಣಿಯಲ್ಲಿ ಅಲೆಕ್ಸಾಂಡರ್‌ ಜ್ವೆರೇವ್‌ ಸ್ಪೇನಿನ ಪಾಬ್ಲೊ ಕರೆನೊ ಬುಸ್ಟ ವಿರುದ್ಧ 7-6 (7-2), 6-2 ಅಂತರದ ಜಯ ಸಾಧಿಸುವಲ್ಲಿ ಯಶಸ್ವಿಯಾದರು. ಪ್ರಶಸ್ತಿ ಸಮರ ಭಾರತೀಯ ಕಾಲಮಾನದಂತೆ ರವಿವಾರ ರಾತ್ರಿ 10.30ಕ್ಕೆ ಆರಂಭವಾಗಲಿದೆ.

ಈ ಸೌತ್‌ ಫ್ಲೋರಿಡಾ ಟೆನಿಸ್‌ ಕೂಟಕ್ಕೆ ಆಗಮಿಸುವ ಮುನ್ನ ಜಾನ್‌ ಇಸ್ನರ್‌ 2018ರಲ್ಲಿ  ಕೇವಲ 6 ಜಯಗಳನ್ನಷ್ಟೇ ಕಂಡಿದ್ದರು. ಆದರೆ ಮಯಾಮಿಯಲ್ಲಿ ಗೆಲುವಿನ ಅಮೋಘ ಅಭಿಯಾನ ನಡೆಸಿದರು. ಜ್ವೆರೇವ್‌ ವಿರುದ್ಧ ಗೆದ್ದು ಬಂದರೆ ಇಸ್ನರ್‌ ಮೊದಲ ಎಟಿಪಿ ಪ್ರಶಸ್ತಿಯನ್ನು ಒಲಿಸಿಕೊಳ್ಳಲಿದ್ದಾರೆ.

ಮತ್ತೋರ್ವ ಸೆಮಿಫೈನಲ್‌ ವಿಜೇತ ಅಲೆಕ್ಸಾಂಡರ್‌ ಜ್ವೆರೇವ್‌ಗೆ ಮೊದಲ ಸೆಟ್‌ ಬಹಳ ಕಠಿನವಾಗಿ ಪರಿಣಮಿಸಿತು. “ಇಲ್ಲಿ ತಾನು ಬಹಳಷ್ಟು ತಪ್ಪು ಮಾಡಿದೆ, ಆದರೆ ಇದು ಫೈನಲ್‌ನಲ್ಲಿ ಮರುಕಳಿಸದಂತೆ ಎಚ್ಚರ ವಹಿಸುವೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next