Advertisement

MIA ಇಂಟಿಗ್ರೇಟೆಡ್‌ ಕಾರ್ಗೋ ಟರ್ಮಿನಲ್‌ನಲ್ಲಿ ಅಡಿಕೆ ಪಾರ್ಸೆಲ್‌ ನಿರ್ವಹಣೆ

11:08 PM Jan 23, 2024 | Team Udayavani |

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಎಂಐಎ)ದ ಇಂಟಿಗ್ರೇಟೆಡ್‌ ಕಾರ್ಗೋ ಟರ್ಮಿನಲ್‌ (ಐಸಿಟಿ)ನಲ್ಲಿ 2024ರ ಜನವರಿ ಆರಂಭದಲ್ಲಿ ಅಡಿಕೆ ನಿರ್ವಹಣೆಗೆ ಅನುಕೂಲ ಮಾಡಿಕೊಡಲಾಗಿದೆ. ಅದರಂತೆ 1,519 ಕೆ.ಜಿ. ತೂಕದ ಕೆಂಪು ತಳಿಯ ಅಡಿಕೆಯನ್ನು 60 ಮೂಟೆಗಳಲ್ಲಿ ಅಗರ್ತಲಾದಿಂದ ಮಂಗಳೂರಿಗೆ ತರಲಾಗಿದೆ.

Advertisement

ಶಿವಮೊಗ್ಗ ಮೂಲದ ಅಡಿಕೆ ವ್ಯಾಪಾರ ಕಂಪನಿಯಾದ ಶ್ರೀನಿವಾಸ್‌ ಸುಪಾರಿ ಟ್ರೇಡರ್ಸ್‌ ಖರೀದಿಸಿದ ಇಷ್ಟು ಪ್ರಮಾಣದ ಅಡಕೆ ಮೇ 1, 2023 ರಂದು ದೇಶೀಯ ಸರಕು ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗಿನಿಂದ ಇಂಟಿಗ್ರೇಟೆಡ್‌ ಕಾರ್ಗೋ ಟರ್ಮಿನಲ್‌ ನಿರ್ವಹಿಸಿದ ಅತೀ ಹೆಚ್ಚಿನ ಪ್ರಮಾಣದ ಸರಕಾಗಿದೆ. ಈ ಹಿಂದೆ ಐಸಿಟಿಯಲಿ ಸಣ್ಣ ಪ್ರಮಾಣದಲ್ಲಿ ಅಡಿಕೆಯ ಒಳಬರುವ ಪಾರ್ಸೆಲ್‌ ಗಳನ್ನು ನಿರ್ವಹಿಸಲಾಗುತಿತ್ತು.

ದೇಶೀಯವಾಗಿ ಹೊರ ಹೋಗುವ ಅಂಚೆಕಚೇರಿ ಮೇಲ್‌ ಸರಕುಗಳ ಅತಿದೊಡ್ಡ ನಿರ್ವಹಣೆಯಲ್ಲಿ ಐಸಿಟಿ ಈಗಾಗಲೇ ತನ್ನದೇ ಆದ ಸ್ಥಾನ ಪಡೆದುಕೊಂಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ಸಮುದ್ರಾಹಾರವನ್ನು (ಜೀವಂತ ಏಡಿಗಳು) ರಫ್ತು ಮಾಡುವುದು ಸಹ ಸರಕು ಟರ್ಮಿನಲ್‌ ನಿರ್ವಹಿಸುತ್ತದೆ. ಕಾರ್ಯಾಚರಣೆ ಪ್ರಾರಂಭಿಸಿದಾಗಿನಿಂದ, ಐಸಿಟಿ 2523.98 ಟನ್‌ ಹೊರಹೋಗುವ ಮತ್ತು 190.3ಟನ್‌ ಒಳಬರುವ ಸರಕು ಸೇರಿದಂತೆ 2714.29 ಟನ್‌ ಸರಕುಗಳನ್ನು ನಿರ್ವಹಿಸಿದೆ. ಅಂತಾರಾಷ್ಟ್ರೀಯ ಸರಕು ಕಾರ್ಯಾಚರಣೆಗಳು ಫೆಬ್ರವರಿ ತಿಂಗಳಿನಿಂದ ಪ್ರಾರಂಭವಾಗಲಿದೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಮತ್ತು ಇಲ್ಲಿಂದ ವಿವಿಧ ರೀತಿಯ ಸರಕುಗಳ ತಡೆರಹಿತ ಹರಿವನ್ನು ಸುಗಮಗೊಳಿಸುವಲ್ಲಿ ಇಂಟಿಗ್ರೇಟೆಡ್‌ ಕಾರ್ಗೋ ಟರ್ಮಿನಲ್‌ ಕಾರ್ಯನಿರ್ವಹಿಸುತ್ತಿದೆ ಎಂದು ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next