ನವದೆಹಲಿ: ದಿನಕ್ಕೊಂದರಂತೆ ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಹಲವಾರು ಸ್ಮಾರ್ಟ್ ಪೋನ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಹೀಗಿರುವಾಗ ಮೊಬೈಲ್ ಪೋನ್ ಗಳಲ್ಲಿ ಹಿಂದೆ ಇದ್ದ ಕೇಬಲ್ ಚಾರ್ಜಿಂಗ್ ತಂತ್ರಜ್ಞಾನದಲ್ಲಿ ಬದಲಾವಣೆ ಹೊಂದಿ ವಯರ್ ಲೆಸ್ ಚಾರ್ಜಿಂಗ್ ವ್ಯವಸ್ಥೆಗಳು ಬಂದಿವೆ. ಇದೀಗ ಈ ಚಾರ್ಜಿಂಗ್ ತಂತ್ರಜ್ಞಾನ ಇನ್ನೊಂದು ಹೊಸ ಹೆಜ್ಜೆಯನ್ನು ಇಡಲು ಮುಂದಾಗಿದ್ದು, ತರಂಗಗಳ(wave) ಮೂಲಕ ಸ್ಮಾರ್ಟ್ ಪೋನ್ ಗಳನ್ನು ಚಾರ್ಜ್ ಮಾಡುವ ವ್ಯವಸ್ಥೆಯನ್ನು ಪರಿಚಯಿಸಲು ಹೊರಟಿದೆ.
ಚೀನಾ ಮೂಲದ ಶಿಯೋಮಿ ಕಂಪನಿಯು ಎಂಐ ಏರ್ ಚಾರ್ಜರ್ ಹೆಸರಿನಲ್ಲಿ ಹೊಸ ತಂತ್ರಜ್ಞಾನವನ್ನು ಜಗತ್ತಿಗೆ ಪರಿಚಯಿಸಲು ಮುಂದಾಗಿದೆ. ಒಟ್ಟು ಐದು ಆ್ಯಂಟೆನಾಗಳನ್ನು ಒಳಗೊಂಡ ಈ ತಂತ್ರಜ್ಞಾನದ ಮೂಲಕ ಮೊಬೈಲ್ ಪೋನ್ ಎಲ್ಲಿದೆ ಎಂಬುದನ್ನು ಗುರುತಿಸಲಾಗುತ್ತದೆ. ಆ ಮೂಲಕ ಸ್ಪೇಸ್ ಪೊಜಿಷನ್ ಮತ್ತು ಎನರ್ಜಿ ಟ್ರಾನ್ಸ್ಮಿಷನ್ನಿಂದ ಸ್ಮಾರ್ಟ್ಫೋನ್ ದೂರದಿಂದ ಚಾರ್ಜ್ ಆಗಲಿದೆಯಂತೆ.
ಇದನ್ನೂ ಓದಿ:ಬಜೆಟ್ 2021: ಕೋವಿಡ್ ವಿರುದ್ಧ ಹೋರಾಟ, ಕೇಂದ್ರದಿಂದ ಆರೋಗ್ಯ ಕ್ಷೇತ್ರಕ್ಕೆ ಒತ್ತು
ಈ ತಂತ್ರಜ್ಞಾನದ ಬಳಕೆ ಮಾಡುವ ಮೂಲಕ ಯಾವುದೆ ಕೇಬಲ್ ಅಥವಾ ಚಾರ್ಜಿಂಗ್ ಸ್ಟ್ಯಾಂಡ್ ಇಲ್ಲದೆ ಸ್ಮಾರ್ಟ್ಫೋನನ್ನು ಚಾರ್ಜ್ ಮಾಡಬಹುದಾಗಿದೆ ಎನ್ನಲಾಗಿದೆ. ಇದು 5 ವ್ಯಾಟ್ ಚಾರ್ಜಿಂಗ್ ಸಾಮರ್ಥ್ಯವನ್ನು ಒಳಗೊಂಡಿರಲಿದ್ದು, ಏಕ ಕಾಲದಲ್ಲಿ ಹಲವಾರು ಸ್ಮಾರ್ಟ್ ಪೋನ್ ಗಳನ್ನು ಚಾರ್ಜ್ ಮಾಡಬಹುದಾಗಿದೆ ಎಂದು ತಿಳಿದುಬಂದಿದೆ.
ಈ ನಡುವೆ ತರಂಗಗಳ ಮೂಲಕ ಜಾರ್ಜ್ ಮಾಡಬಹುದಾದ ಈ ತಂತ್ರಜ್ಞಾನ ಮನುಷ್ಯ ಮತ್ತು ಪ್ರಾಣಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆಯೇ ಎಂಬುವುದರ ಕುರಿತಾಗಿ ಯಾವುದೇ ಮಾಹಿತಿ ಲಭ್ಯವಿಲ್ಲ. ಸದ್ಯಕ್ಕೆ ಈ ಎಂ ಐ ತಂತ್ರಜ್ಞಾನವನ್ನು ಸಾರ್ವಜನಿಕರ ಬಳಕೆಗೆ ಅವಕಾಶ ನೀಡಿಲ್ಲ ಎಂದು ವರದಿಯಾಗಿದೆ.
ಇದನ್ನೂ ಓದಿಕೇಂದ್ರ ಬಜೆಟ್ 2021: ಅತೀ ಸಣ್ಣ, ಸಣ್ಣ ಕೈಗಾರಿಕಾ ಕ್ಷೇತ್ರಕ್ಕೆ 15,700 ಕೋಟಿ