Advertisement

ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ನಡೆಸಲು ಎಂ.ಜಿ. ಕರ್ಕೇರ ಮನವಿ

06:15 AM Aug 19, 2017 | |

ಬೆಳ್ಮಣ್‌: ಶಿಕ್ಷಣದ ಬದಲಾವಣೆ ಸಮಾಜದಲ್ಲಿ  ಬದಲಾವಣೆ ತರಲು ಸಾಧ್ಯವಾಗಿದ್ದು  ಊರಿನಲ್ಲಿ ಶಿಕ್ಷಣ ಸಂಸ್ಥೆಗಳು ಒಂದಾದಲ್ಲಿ ಪ್ರತಿಯೊಂದು ಕ್ಷೇತ್ರಗಳಲ್ಲಿ ಕ್ರಾಂತಿ ನಡೆಸಲು ಸಾಧ್ಯವೆಂದು ಮುಂಬೈನ ಉದ್ಯಮಿ, ಮುಂಡ್ಕೂರು ಕಜೆ ಶ್ರೀ ಮಹಮ್ಮಾಯೀ ದೇಗುಲದ ಸಮಿತಿಯ ಗೌರವಾಧ್ಯಕ್ಷ ಮಹಾಬಲ ಕರ್ಕೇರ ಹೇಳಿದರು.

Advertisement

ಅವರು ಮಂಗಳವಾರ ಮುಂಡ್ಕೂರು ದೇಗುಲದ ನಾನಾ ಪಾಟೇಕರ್‌ ಸಭಾಭವನದಲ್ಲಿ  ಮುಂಡ್ಕೂರಿನ ಆಶ್ರಯ ಬಾಲವಾಡಿ, ಸ.ಹಿ.ಪ್ರಾ.ಶಾಲೆ, ವಿದ್ಯಾವರ್ಧಕ ಪ.ಪೂ. ಹಾಗೂ ಪ್ರೌಢಶಾಲೆಗಳ ಆಶ್ರಯದಲ್ಲಿ ನಡೆದ ಅಕ್ಷರ ಜಾತ್ರೆ ಶೈಕ್ಷಣಿಕ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಮುಂಡ್ಕೂರು ಗ್ರಾ.ಪಂ.  ಅಧ್ಯಕ್ಷೆ ಶುಭಾ ಪಿ. ಶೆಟ್ಟಿ ಧ್ವಜಾರೋಹಣ ನಡೆಸಿದರೆ, ಮುಂಡ್ಕೂರು ದೇಗುಲದ ಅರ್ಚಕ ಅನಂತಕೃಷ್ಣ ಆಚಾರ್ಯ ಆಶೀರ್ವಚನ ನೀಡಿದರು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಬೇಲಾಡಿ ವಿಟuಲ ಶೆಟ್ಟಿ  ಮುಖ್ಯ ಅತಿಥಿಯಾಗಿದ್ದು, ಮುಂಡ್ಕೂರು ದೇಗುಲದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಎಂ. ವಾದಿರಾಜ ಶೆಟ್ಟಿ, ಆಶ್ರಯದ ಮುಖ್ಯಸ್ಥ ಸುಧಾಕರ ಶೆಟ್ಟಿ, ಆಶ್ರಯದ ಟ್ರಸ್ಟಿ ಜಗದೀಶ್ಚಂದ್ರ ಹೆಗ್ಡೆ, ವಿದ್ಯಾವರ್ಧಕ ಪ.ಪೂ. ಕಾಲೇಜಿನ ಸಂಚಾಲಕ ಡಾ| ಪಿ. ಬಾಲಕೃಷ್ಣ ಆಳ್ವ, ಮುಂಡ್ಕೂರು ಶಿಕ್ಷಣ  ಸಮಾಜೋದ್ಧಾರಕ ಸಂಘದ ಅಧ್ಯಕ್ಷ ಅಂಗಡಿಗುತ್ತು ಪ್ರಸಾದ್‌ ಎಂ. ಶೆಟ್ಟಿ, ವಿದ್ಯಾವರ್ಧಕ ಪ.ಪೂ. ಕಾಲೇಜಿನ ಪ್ರಾಚಾರ್ಯ ಸುದರ್ಶನ್‌ ವೈ.ಎಸ್‌., ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸವಿತಾ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶಾರದಾ ಬಿ., ಎಸ್‌ಡಿಎಂಸಿ ಆಧ್ಯಕ್ಷ  ಗುರುನಾಥ ಪೂಜಾರಿ, ಆಶ್ರಯ ಬಾಲವಾಡಿಯ ಮುಖ್ಯ ಶಿಕ್ಷಕಿ ಪ್ರಭಾ ಶತಾನಂದ, ಮುಂಬೈನ ಸಾಧಕ ಮುಂಡ್ಕೂರು ರತ್ನಾಕರ ಶೆಟ್ಟಿ, ಮುಂಬೈನ  ಉದ್ಯಮಿಗಳಾದ  ಇನ್ನಾ ಬೀಡು ರವೀಂದ್ರ ಶೆಟ್ಟಿ, ನರಸಿಂಹ ಶೆಟ್ಟಿ, ಸದಾಶಿವ ಶೆಟ್ಟಿ ಹಾಗೂ ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ಮುಂಡ್ಕೂರು ದೊಡ್ಡಮನೆ ಭಾಸ್ಕರ ಶೆಟ್ಟಿ (ಕೃಷಿ ಕ್ಷೇತ್ರ), ಪಾಂಡುರಂಗ ಪ್ರಭು (ಶಿಕ್ಷಣ), ಶ್ರೀಧರ ಸನಿಲ್‌ (ಸಾಮಾಜಿಕ ಕ್ಷೇತ್ರ), ಕೃಷ್ಣರಾಜ ಶೆಟ್ಟಿ ಮುಂಡ್ಕೂರು (ಸಾಂಸ್ಕೃತಿಕ ಕ್ಷೇತ್ರ) ಹಾಗೂ ಜಿನ್ನೋಜಿ ರಾವ್‌ (ಉದ್ಯಮ ಕ್ಷೇತ್ರ) ಅವರನ್ನು ಸಾಧಕರ ನೆಲೆಯಲ್ಲಿ ಗೌರವಿಸಲಾಯಿತು.

ಶರತ್‌ ಸ್ವಾಗತಿಸಿ ಪ್ರಸ್ತಾವನೆಗೈದರು. ಪ್ರಭಾಕರ ಶೆಟ್ಟಿ ಸಾಧಕರನ್ನು ಪರಿಚಯಿಸಿ, ಅರುಣ್‌ ರಾವ್‌ ವಂದಿಸಿದರು. ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಆಶ್ರಯ ಬಾಲವಾಡಿಯ ವಿದ್ಯಾರ್ಥಿಗಳಿಗೆ ಪ್ರಾರ್ಥನೆ ಗೀತೆ ಯನ್ನು ಹಾಡಿದ ನಿನಾದಾ ಯು. ನಾಯಕ್‌ ಅವರನ್ನು ವಿಶೇಷವಾಗಿ ಗೌರವಿಸಲಾಗಿ ಮೂಡಬಿದಿರೆಯ ಇತಿಹಾಸ ಸಂಶೋಧಕ, ಚಿಂತಕ ಡಾ| ಪುಂಡಿಕಾç ಗಣಪಯ್ಯ ಭಟ್‌ ರವರಿಂದ ಶಿಕ್ಷಣ- ವರ್ತಮಾನದ ಆತಂಕ, ಅಂತಾರಾಷ್ಟ್ರೀಯ ತರಬೇತುದಾರ ಬೆಳ್ಮಣ್‌ ರಾಜೇಂದ್ರ ಭಟ್‌ ಅವರಿಂದ ಶಿಕ್ಷಕರು-ಪೋಷಕರು- ವಿದ್ಯಾರ್ಥಿಗಳ ಸಂಬಂಧ ಕುರಿತು ಉಪನ್ಯಾಸ ನಡೆಯಿತು. ಕಟೀಲು ದೇಗುಲ ಪ.ಪೂ. ಕಾಲೇಜಿನ ಉಪನ್ಯಾಸಕ ಗೋಪಿನಾಥ ಹೆಗ್ಡೆ ಅವರಿಂದ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಸ್ಪರ್ಧೆ ನಡೆದು ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next