ಎಂಜಿ ಮೋಟಾರ್ 99 ವರ್ಷಗಳ ಪರಂಪರೆ ಹೊಂದಿದ್ದು ಭಾರತದ ನಗರ ಸಂಚಾರ ಸಮಸ್ಯೆಗಳಿಗೆ ಸ್ಪಂದಿಸುವ ದೃಷ್ಟಿಯಿಂದ ಕಾಮೆಟ್ ಇವಿಯನ್ನು ತಯಾರಿಸಿದೆ. ವೈವಿಧ್ಯಮಯ ಜಿಎಸ್‌ಇವಿ-ಪ್ಲಾಟ್‌ಫಾರಂ-ಆಧಾರಿತ ಪ್ಯೂರ್ ಇವಿ ವಿಶಾಲ ವಿನ್ಯಾಸ ಹೊಂದಿದ್ದು ನಗರದೊಳಗೆ ಮೃದು, ಒತ್ತಡರಹಿತ ಪ್ರಯಾಣಕ್ಕೆ ಪೂರಕವಾಗಿದೆ.
ದಿ ಕಾಮೆಟ್ ಇವಿ ಎಂಜಿ ಮೋಟಾರ್ ಇಂಡಿಯಾದ ಎರಡನೆಯ ಇವಿಯಾಗಿದ್ದು ಭವಿಷ್ಯಾತ್ಮಕ ಮತ್ತು ಬಳಕೆದಾರ ಸ್ನೇಹಿ ಸ್ಮಾರ್ಟ್ ತಂತ್ರಜ್ಞಾನಗಳೊಂದಿಗೆ ಬಂದಿದೆ. ಈ ಸ್ಮಾರ್ಟ್ ಇವಿ-ಎಂಜಿ ಕಾಮೆಟ್ ವಿಶೇಷ ಪ್ರಾರಂಭಿಕ ಬೆಲೆ ರೂ.7,98,000 (ಎಕ್ಸ್-ಶೋರೂಂ)ನಲ್ಲಿ ಲಭ್ಯವಿದೆ.
Advertisement
ಬಿಡುಗಡೆ ಮಾಡಿ ಮಾತನಾಡಿದ ಎಂಜಿ ಮೋಟಾರ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಛಾಬಾ, “ನಾವು ಎಂಜಿ ಕಾಮೆಟ್ ಇವಿಯನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಂತಸ ಪಡುತ್ತೇವೆ. ಇದು ನಗರ ಸಾರಿಗೆಗೆ ಬದಲಾವಣೆಯ ಸಮಯ. ಕಾಮೆಟ್ ಇವಿಯು ನಮ್ಮ ನಗರಗಳಲ್ಲಿ ನಾವು ಸಂಚರಿಸುವ ವಿಧಾನವನ್ನು ಬದಲಾಯಿಸುವ ಬದ್ಧತೆಯನ್ನು ಪ್ರತಿನಿಧಿಸುತ್ತದೆ” ಎಂದರು.