Advertisement

ಲೈಂಗಿಕ ದೌರ್ಜನ್ಯ ಖಂಡಿಸಿ ಎಂ.ಜಿ. ರಸ್ತೆಯಲ್ಲಿ ಪ್ರತಿಭಟನೆ

12:17 PM Jan 12, 2017 | Team Udayavani |

ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಎಂ.ಜಿ. ರಸ್ತೆ ಬಳಿ ಯುವತಿಯರ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯ ಖಂಡಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ಎಂ.ಜಿ. ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.

Advertisement

ಮಹಿಳೆಯರಿಗೆ ಸೂಕ್ತ ಭದ್ರತೆ ಒದಗಿಸದೆ ಲೈಂಗಿಕ ವಸ್ತುವಾಗಿ ನೋಡುವುದಲ್ಲದೆ ದೌರ್ಜನ್ಯಕ್ಕೆ ಗುರಿಯಾಗಿರುವ ಸಂತ್ರಸ್ತೆಯನ್ನೇ ಟೀಕಿಸುವ ಕೀಳು ಸಂಸ್ಕೃತಿಯನ್ನು ಇದೇ ವೇಳೆ ಕಾರ್ಯಕರ್ತರು ವಿರೋಧಿಸಿದರು. ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ಪರ ಮೇಣದ ಬತ್ತಿ ಹಿಡಿದು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಸಂತ್ರಸ್ತೆಯನ್ನು ಟೀಕಿಸುವ ಸಂಸ್ಕೃತಿಯನ್ನು ತೀವ್ರವಾಗಿ ವಿರೋಧಿಸುತ್ತೇವೆ ಎಂದು ಹೇಳಿದರು.

ನೈತಿಕ ಪೊಲೀಸ್‌ಗಿರಿ ಹಾಗೂ ವಿನಾಕಾರಣ ಮಹಿಳೆಯರಿಗೆ ನಿರ್ಬಂಧ ವಿಧಿಸುವ ಮನಸ್ಥಿತಿ, ಸರ್ಕಾರದ ವೈಫ‌ಲ್ಯದಿಂದ ಆದ ಘಟನೆಯನ್ನು ತೀವ್ರವಾಗಿ ಖಂಡಿಸಿ ಎಂ.ಜಿ. ರಸ್ತೆ ಹಾಗೂ ಬ್ರಿಗೇಡ್‌ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ ಅವರು, ಮಹಿಳೆಯರಿಗೆ ಕೊಠಡಿಯಿಂದ ಹೊರಗೆ ಬಂದು ತನ್ನ ಹಕ್ಕಿನಂತೆ ಬದುಕಲು ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿದರು.

ಈ ವೇಳೆ ಸ್ವರಾಜ್‌, ಗಾರ್ಮೆಂಟ್ಸ್‌ ವರ್ಕರ್ಸ್‌ ಯೂನಿಯನ್‌, ಆಮ್ನೆಸ್ಟಿ ಇಂಡಿಯಾ, ಆಲ್ಟರ್ನೇಟಿವ್‌ ಲಾ ಫೋರಂ, ಆಪ್ನಾಕಿ ಅದಾಲತ್‌, ರೇಡಿಯೋ ಆ್ಯಕ್ಟಿವ್‌ ಸೇರಿದಂತೆ ಹಲವಾರು ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next