Advertisement
ಮೊದಲ ಸೆಮಿಫೈನಲ್‌ನಲ್ಲಿ ಕಿರ್ಗಿಯೋಸ್ 3ನೇ ಶ್ರೇಯಾಂಕಿತ ಜಾನ್ ಇಸ್ನರ್ ವಿರುದ್ಧ 7-5, 5-7, 7-6 (9/7) ಸೆಟ್‌ಗಳಿಂದ ಗೆಲುವು ದಾಖಲಿಸಿದರು. ಈ ಪಂದ್ಯ 2 ಗಂಟೆ, 21 ನಿಮಿಷಗಳ ತನಕ ನಡೆಯಿತು. ಹಿಂದಿನೆರಡು ಪಂದ್ಯಗಳಲ್ಲಿ ಕಿರ್ಗಿಯೋಸ್ ಸ್ಟಾರ್ ಆಟಗಾರ ರಫೆಲ್ ನಡಾಲ್, ಸ್ಟಾನ್ ವಾವ್ರಿಂಕ ಅವರನ್ನು ಸೋಲಿಸಿ ಮೆರೆದಿದ್ದರು.
Related Articles
ವನಿತಾ ಸಿಂಗಲ್ಸ್ ವಿಭಾಗದ ಮೊದಲ ಸೆಮಿಫೈನಲ್‌ನಲ್ಲಿ ಚೀನದ ವಾಂಗ್ ಯೂಫಾನ್ ಕ್ರೊವೇಶಿಯಾದ ಡೋನಾ ವೆಕಿಕ್ ಅವರನ್ನು 2-6, 6-3, 6-1 ಸೆಟ್‌ಗಳಿಂದ ಸೋಲಿಸಿ ಚೊಚ್ಚಲ ಡಬ್ಲ್ಯುಟಿಪಿ ಟೂರ್ ಫೈನಲ್ ಪ್ರವೇಶಿಸಿದರು. ಫೈನಲ್‌ನಲ್ಲಿ ಅವರು ಅಮೆರಿಕದ ಸೋಫಿಯಾ ಕೆನ್ನಿನ್ ವಿರುದ್ಧ ಆಡಲಿದ್ದಾರೆ. ಇನ್ನೊಂದು ಸೆಮಿಸ್‌ನಲ್ಲಿ ಕೆನ್ನಿನ್ ಕೆನಡಾದ ಬಿಯಾಂಕಾ ಆ್ಯಂಡ್ರಿಸ್ಕೂ ವಿರುದ್ಧ 6-4, 3-6, 7-5ರಿಂದ ಜಯ ಸಾಧಿಸಿದರು.
Advertisement