Advertisement

Mexico open; ಮೆಕ್ಸಿಕೊ ಓಪನ್‌ ಟೆನಿಸ್‌: ಸ್ಟೆಫ‌ನಸ್‌ ಸಿಸಿಪಸ್‌ ಚಾಂಪಿಯನ್‌

03:50 PM Aug 07, 2023 | Team Udayavani |

ಮೆಕ್ಸಿಕೊ: ಗ್ರೀಸ್‌ನ ಸ್ಟೆಫ‌ನಸ್‌ ಸಿಸಿಪಸ್‌ ತಮ್ಮ ಟೆನಿಸ್‌ ಪ್ರಶಸ್ತಿ ಬರಗಾಲ ನೀಗಿಸಿಕೊಂಡಿದ್ದಾರೆ. ಅವರು ಆಸ್ಟ್ರೇಲಿಯದ ಅಲೆಕ್ಸ್‌ ಡಿ ಮಿನೌರ್‌ ವಿರುದ್ಧ ಜಯ ಸಾಧಿಸಿ ಎಟಿಪಿ ಮೆಕ್ಸಿಕೊ ಓಪನ್‌ ಚಾಂಪಿಯನ್‌ ಆಗಿ ಮೂಡಿಬಂದಿದ್ದಾರೆ. ಗೆಲುವಿನ ಅಂತರ 6-3, 6-4.

Advertisement

ಈ ವರ್ಷದ ಆಸ್ಟ್ರೇಲಿಯನ್‌ ಓಪನ್‌ ರನ್ನರ್ ಅಪ್‌ ಆಗಿರುವ ಸ್ಟೆಫ‌ನಸ್‌ ಸಿಸಿಪಸ್‌ 14 ತಿಂಗಳ ಬಳಿಕ ಗೆದ್ದ ಮೊದಲ ಪ್ರಶಸ್ತಿ ಇದಾಗಿದೆ. ಇದು ಈ ವರ್ಷ ಸಿಸಿಪಸ್‌ ಆಡಿದ 3ನೇ ಫೈನಲ್‌. ಆಸ್ಟ್ರೇಲಿಯನ್‌ ಓಪನ್‌ ಫೈನಲ್‌ನಲ್ಲಿ ನೊವಾಕ್‌ ಜೊಕೋವಿಕ್‌ ಅವರಿಗೆ ಶರಣಾಗಿದ್ದ ಸಿಸಿಪಸ್‌, ಬಳಿಕ ಎಪ್ರಿಲ್‌ನಲ್ಲಿ ನಡೆದ ಬಾರ್ಸಿಲೋನಾ ಫೈನಲ್‌ನಲ್ಲಿ ಕಾರ್ಲೋಸ್‌ ಅಲ್ಕರಾಜ್‌ ವಿರುದ್ಧ ಪರಾಭವಗೊಂಡಿದ್ದರು. ಆದರೆ ಮಿನೌರ್‌ ವಿರುದ್ಧ ಆಡಿದ ಎಲ್ಲ 10 ಪಂದ್ಯಗಳಲ್ಲೂ ಜಯ ಸಾಧಿಸಿದರು.

ಇದು 24 ವರ್ಷದ ಗ್ರೀಸ್‌ ಟೆನಿಸಿಗನಿಗೆ ಒಲಿದ 10ನೇ ಟೆನಿಸ್‌ ಪ್ರಶಸ್ತಿಯಾಗಿದೆ. ಕೊನೆಯ ಸಲ ಇವರು ಚಾಂಪಿಯನ್‌ ಆದದ್ದು 2022ರ ಜೂನ್‌ನಲ್ಲಿ. ಅದು ಮಲ್ಲೋರ್ಕಾ ಟೆನಿಸ್‌ ಚಾಂಪಿಯನ್‌ಶಿಪ್‌ ಆಗಿತ್ತು.

ಇತ್ತ ಅಲೆಕ್ಸ್‌ ಡಿ ಮಿನೌರ್‌ ಕೂಡ ವರ್ಷದ 3ನೇ ಫೈನಲ್‌ನಲ್ಲಿ ಆಡಲಿಳಿದಿದ್ದರು. ಆದರೆ ಬಾಳ್ವೆಯ 8ನೇ ಪ್ರಶಸ್ತಿಯಿಂದ ವಂಚಿತರಾದರು.

Advertisement

Udayavani is now on Telegram. Click here to join our channel and stay updated with the latest news.

Next