Advertisement

ಮೆಕ್ಸಿಕೋದಲ್ಲಿ 10 ಲಕ್ಷ ಉದ್ಯೋಗ ನಷ್ಟ

05:27 PM May 26, 2020 | sudhir |

ಕೋವಿಡ್‌ ಪರಿಣಾಮ ಅಗತ್ಯ ಅನ್ನಿಸದ ಹಲವು ಕೈಗಾರಿಕೆಗಳು ಇನ್ನೂ ಮುಚ್ಚಿಯೇ ಇರುವ ಕಾರಣ ದೇಶದಲ್ಲಿ ಸುಮಾರು 10 ಲಕ್ಷ ಉದ್ಯೋಗಗಳು ನಷ್ಟವಾಗುವ ಸಾಧ್ಯತೆ ಇದೆ ಎಂದು ಮೆಕ್ಸಿಕೋ ಪ್ರಧಾನಿ ಆ್ಯಂಡ್ರೆಸ್‌ ಮ್ಯಾನುಯೆಲ್‌ ಲೋಪೆಝ್ ಒಬ್ರಡಾರ್‌ ಅಂದಾಜಿಸಿದ್ದಾರೆ.

Advertisement

ಇದಕ್ಕೆ ಪರ್ಯಾಯವಾಗಿ 20 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವುದಾಗಿಯೂ ಅವರು ಭರವಸೆ ನೀಡಿದ್ದಾರೆ.

ಲೋಪೆಝ್ ಅವರ ಸರಕಾರ ಸೋಂಕು ನಿಯಂತ್ರಣದಲ್ಲಿದೆ ಎಂದು ಪದೇ ಪದೆ ಘೋಷಿಸಿತ್ತು. ಆದರೆ, ಅಲ್ಲಿ ದಾಖಲೆ ಸಂಖ್ಯೆಯ ಕೋವಿಡ್‌ ಪ್ರಕರಣಗಳು ಹಾಗೂ ಸಾವುಗಳು ವರದಿಯಾಗಿವೆ. ಸೋಂಕಿಗೂ ಮೊದಲೇ ಮೆಕ್ಸಿಕನ್‌ ಆರ್ಥಿಕತೆ ತೀವ್ರ ಕುಸಿತ ಅನುಭವಿಸಿತ್ತು. ಹಲವು ಬ್ಯಾಂಕುಗಳು ಶೇ. 9ರಷ್ಟು ಹಿನ್ನಡೆ ಅಂದಾಜಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next