Advertisement

ಕೇರಳ: ಪಾಲಕ್ಕಾಡ್ ಕ್ಷೇತ್ರದಲ್ಲಿ ಮೆಟ್ರೋ ಮ್ಯಾನ್, BJP ಅಭ್ಯರ್ಥಿ ಇ.ಶ್ರೀಧರನ್ ಗೆ ಮುನ್ನಡೆ

02:26 PM May 02, 2021 | Team Udayavani |

ತಿರುವನಂತಪುರಂ:ಕೇರಳ ವಿಧಾನಸಭಾ ಚುನಾವಣೆಯ ಮತಎಣಿಕೆ ಬಿರುಸಿನಿಂದ ಮುಂದುವರಿದಿದ್ದು, ಆಡಳಿತಾರೂಢ ಎಲ್ ಡಿಎಫ್ ಮೈತ್ರಿಕೂಟ 90 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಏತನ್ಮಧ್ಯೆ ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಮೆಟ್ರೋ ಮ್ಯಾನ್ ಇ.ಶ್ರೀಧರನ್ ಕೇರಳದ ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರದಲ್ಲಿ ಏಳು ಸಾವಿರ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

Advertisement

ಇದನ್ನೂ ಓದಿ:ಆಕ್ಸಿಜನ್ ಖರೀದಿಗಾಗಿ ತನ್ನ ನೆಚ್ಚಿನ ಬೈಕ್ ಸೇಲಿಗಿಟ್ಟ ಫಿದಾ ನಟ

ಪಾಲಕ್ಕಾಡ್ ಕ್ಷೇತ್ರದ ಹಾಲಿ ಕಾಂಗ್ರೆಸ್ ಶಾಸಕ ಶಫಿ ಪರಂಬಿಲ್ ಅವರ ವಿರುದ್ಧ ಬಿಜೆಪಿ ಇ.ಶ್ರೀಧರನ್ ಅವರನ್ನು ಕಣಕ್ಕಿಳಿಸಿತ್ತು. ಸಿಪಿಐ(ಎಂ)ನಿಂದ ಸಿಪಿ ಪ್ರಮೋದ್ ಪ್ರತಿಸ್ಪರ್ಧಿಯಾಗಿದ್ದಾರೆ. ದೇಶದಲ್ಲಿನ ಮೆಟ್ರೋ ಯೋಜನೆಯ ರೂವಾರಿಯಾಗಿದ್ದ ಇ.ಶ್ರೀಧರನ್ ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡು, ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದರು.

ಬಿಜೆಪಿಯ ಮುಖ್ಯಮಂತ್ರಿಯ ಅಭ್ಯರ್ಥಿ ಹೆಸರನ್ನು ಘೋಷಿಸದೇ ಇ.ಶ್ರೀಧರನ್ ಅವರನ್ನು ಚುನಾವಣಾ ಅಖಾಡಕ್ಕಿಳಿಸುವ ಮೂಲಕ ಹೆಚ್ಚಿನ ಲಾಭವಾಗಬಹುದು ಎಂದು ಬಿಜೆಪಿ ಲೆಕ್ಕಾಚಾರ ಹಾಕಿತ್ತು. ಬಿಜೆಪಿ ಪಕ್ಷ ತನ್ನನ್ನು ಮುಖ್ಯಮಂತ್ರಿ ಎಂದು ಘೋಷಿಸಿದರೂ ಆ ಸ್ಥಾನ ಸ್ವೀಕರಿಸುವುದಾಗಿ ಇ.ಶ್ರೀಧರನ್ ಈ ಮೊದಲು ತಿಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next