Advertisement

ಮೆಟ್ರೋಲೈಟ್‌- ಮೆಟ್ರೋನಿಯೋ ಸೇವೆ

06:11 PM Feb 02, 2021 | Team Udayavani |

ಬೆಂಗಳೂರು: ದೇಶದ ಮೆಟ್ರೋ ನಗರ ಪ್ರದೇಶ ಮಮಾತ್ರವಲ್ಲದೆ ಪ್ರಥಮ ದರ್ಜೆ ನಗರಗಳ ಹೊರವಲಯ ಹಾಗೂ ದ್ವಿತೀಯ ಹಂತದ ನಗರಗಳಲ್ಲಿ ಹೊಸ ತಂತ್ರಜ್ಞಾನದ “ಮೆಟ್ರೋಲೈಟ್‌’, “ಮೆಟ್ರೋ ನಿಯೋ’ ಸೇವೆ ಆರಂಭಿಸುವ ಮಹತ್ತರ ಘೋಷಣೆಯನ್ನು ಕೇಂದ್ರ ಸರ್ಕಾರ ಮಾಡಿದೆ.

Advertisement

ಜತೆಗೆ ಬಸ್‌ ಸಮೂಹ ಸಾರಿಗೆ ಉತ್ತೇಜಿಸಲು 18,000 ಕೋಟಿ ರೂ. ವೆಚ್ಚದ ವಿಶೇಷ ಯೋಜನೆಯನ್ನೂ ಪ್ರಕಟಿಸಿದೆ. ಈವರೆಗೆ ದೇಶದ ಮೆಟ್ರೋ ನಗರಗಳಲ್ಲಷ್ಟೇ ಮೆಟ್ರೋ ರೈಲ್ವೆ ಸೇವೆ ಒಗದಿಸಲು ಆದ್ಯತೆ ನೀಡಲಾಗುತ್ತಿತ್ತು. ಇದೀಗ ಪ್ರಥಮ ಶ್ರೇಣಿ ನಗರಗಳ ಹೊರವಲಯ (ಪೆರಿಫೆರಲ್‌) ಹಾಗೂ ಅಭಿವೃದ್ಧಿಶೀಲ ಎರಡನೇ ಶ್ರೇಣಿ ನಗರಗಳಿಗೆ ಮೆಟ್ರೋ ಸೇವೆ ಕಲ್ಪಿಸುವ ಮಹತ್ವದ ಹೆಜ್ಜೆ ಇಡಲುಮುಂದಾಗಿದೆ.

“ಮೆಟ್ರೋಲೈಟ್‌’ ಹಾಗೂ  “ಮೆಟ್ರೋ ನಿಯೋ’ ಸೇವೆಯನ್ನು ಕಡಿಮೆ ವೆಚ್ಚದಲ್ಲಿ ಮೆಟ್ರೋ ಮಾದರಿಯ ಸುಖಕರ, ತ್ವರಿತ, ಸುರಕ್ಷಿತ ಪ್ರಯಾಣ ಕಲ್ಪಿಸುವುದು ಕೇಂದ್ರದ ಚಿಂತನೆ. ಹಾಗೆಯೇ ವಾಯು ಮಾಲಿನ್ಯ ತಗ್ಗಿಸಿ ಸಮೂಹ ಸಾರಿಗೆ ಉತ್ತೇಜಿಸಲು ಬಸ್‌ ಸಾರಿಗೆ ಸೇವೆಗೆ ಸಂಬಂಧಪಟ್ಟಂತೆ 18,000 ಕೋಟಿ ರೂ. ವೆಚ್ಚದ ವಿಶೇಷ ಯೋಜನೆಯನ್ನು ಪ್ರಕಟಿಸಿದೆ.

ಇದನ್ನೂ ಓದಿ:ರಾಮನ ನಾಡಲ್ಲಿ ಪೆಟ್ರೋಲ್ 93 ರೂ. ರಾವಣನ ಲಂಕಾದಲ್ಲಿ 51 ರೂ.: ಸುಬ್ರಮಣಿಯನ್ ಸ್ವಾಮಿ

ಸುಮಾರು 20,000 ಬಸ್‌ಗಳಿಗೆ ಆರ್ಥಿಕ ನೆರವು, ಹಂಚಿಕೆ, ನಿರ್ವಹಣೆಯನ್ನು ಪಿಪಿಪಿ ಮಾದರಿಯಲ್ಲಿ ಕೈಗೊಳ್ಳು ವುದು ಯೋಜನೆಯ ಉದ್ದೇಶ. ಆ ಮೂಲಕ ಆಟೋಮೊಬೈಲ್‌ ಕ್ಷೇತ್ರಕ್ಕೆ ಉತ್ತೇಜನ ನೀಡುವ ಜತೆಗೆ ಉದ್ಯೋಗ ಸೃಷ್ಟಿ, ಆರ್ಥಿಕತೆ ಬೆಳವಣಿಗೆಗೆ ಪ್ರೋತ್ಸಾಹ ನೀಡುವುದು ಕೇಂದ್ರ ಸರ್ಕಾರ ಉದ್ದೇಶ. ದೇಶದ 27 ನಗರಗಳಲ್ಲಿ ಮೆಟ್ರೋ ಹಾಗೂ ಪ್ರಾದೇಶಿಕ ಸಮೂಹ ಸಾರಿಗೆ ವ್ಯವಸ್ಥೆ (ಆರ್‌ಆರ್‌ಟಿಎಸ್‌)ಯಡಿ ಈಗಾಗಲೇ 702. ಕಿ.ಮೀ. ಮಾರ್ಗದ ಸೇವೆ ಬಳಕೆಯಲ್ಲಿದ್ದು, ಇನ್ನೂ 1,016 ಕಿ.ಮೀ. ಮಾರ್ಗ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಜತೆಗೆ ಪ್ರಮುಖ ಮೆಟ್ರೋ ರೈಲು ಯೋಜನೆಗಳಿಗೆ ಕೇಂದ್ರದ ಪಾಲಿನ ಅನುದಾನವನ್ನು ಘೋಷಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next