Advertisement

ಜೂನ್‌ನಲ್ಲಿ ಕೆಂಗೇರಿ ಮಾರ್ಗದಲ್ಲಿ ಮೆಟ್ರೋ

05:15 PM May 21, 2021 | Team Udayavani |

ಬೆಂಗಳೂರು:ಕೊನೆಗೂ “ನಮ್ಮ ಮೆಟ್ರೋ’2ನೇ ಹಂತದ ಎರಡನೇ ವಿಸ್ತರಿತ ಮಾರ್ಗ ಲೋಕಾರ್ಪಣೆಗೆ ಮುಹೂರ್ತ ಕೂಡಿಬಂದಿದೆ.ಬರುವ ಜೂನ್‌ನಲ್ಲಿ ಉದ್ದೇಶಿತ ಈ ಮಾರ್ಗದಲ್ಲಿ ಮೆಟ್ರೋ ವಾಣಿಜ್ಯ ಸೇವೆ ಆರಂಭಿಸಲಿದೆ.- ಇದನ್ನು ಸ್ವತಃ ಬೆಂಗಳೂರು ಮೆಟ್ರೋ ರೈಲು ನಿಗಮ(ಬಿಎಂಆರ್‌ಸಿಎಲ್‌) ವ್ಯವಸ್ಥಾಪಕ ನಿರ್ದೇಶಕ ರಾಕೇಶ್‌ ಸಿಂಗ್‌ ತಿಳಿಸಿದ್ದಾರೆ.

Advertisement

ಗುರುವಾರ ಮೈಸೂರು ರಸ್ತೆ-ಕೆಂಗೇರಿ ನಡುವೆಮೆಟ್ರೋ ನಿಲ್ದಾಣಗಳು ಮತ್ತು ವಾಹನ ನಿಲುಗಡೆ ಸ್ಥಳಗಳನ್ನುಖುದ್ದು ಮೆಟ್ರೋ ರೈಲಿನಲ್ಲಿ ತೆರಳಿ ಪರಿಶೀಲನೆ ನಡೆಸಿದ ಅವರು, ಈವಿಸ್ತರಿತ ಮಾರ್ಗದಲ್ಲಿ ಬರುವ ಜೂನ್‌ನಲ್ಲಿ ಮೆಟ್ರೋಕಾರ್ಯಾಚರಣೆ ಆರಂಭಿಸಲಿದೆ ಎಂದರು.

7.53 ಕಿ.ಮೀ. ಉದ್ದದ ಈ ಮಾರ್ಗದಲ್ಲಿ ಒಟ್ಟು ಆರುನಿಲ್ದಾಣಗಳುಹಾಗೂ ವಾಹನ ನಿಲುಗಡೆ ಸ §ಳಗಳುಬರಲಿವೆ.ಈಚೆಗೆ ಪರೀಕ್ಷಾರ್ಥ ಸಂಚಾರ ನಡೆಸಿದ್ದು, ಈ ಸಂಬಂಧದ ಪ್ರಕ್ರಿಯೆಬಹುತೇಕ ಪೂರ್ಣಗೊಂಡಿದೆ ಎನ್ನಲಾಗಿದೆ. 2020ರ ಡಿಸೆಂಬರ್‌ನಲ್ಲಿ ಸ್ವತಃ ಬಿಎಂಆರ್‌ಸಿಎಲ್‌, “ಹೊಸ ವರ್ಷದ ಆರಂಭದಲ್ಲಿ 2ನೇವಿಸ್ತರಿತ ಮಾರ್ಗ ಲೋಕಾರ್ಪಣೆಗೊಳ್ಳಲಿದೆ’ ಎಂದು ಹೇಳಿತ್ತು

.ಆದರೆ, ಹಲವು ತಾಂತ್ರಿಕ ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ.ಇದಕ್ಕೂ ಮುನ್ನ ಕಳೆದ ವರ್ಷ ಸೆಪ್ಟೆಂಬರ್ … ಅಥವಾ ಅಕ್ಟೋಬರ್‌ ಎಂದೂ ಹೇಳಲಾಗಿತ್ತು. ಈ ಮಧ್ಯೆ ಹಲವು ಗಡುವುಗಳನ್ನುಮೈಸೂರು ರಸ್ತೆ-ಕಂಗೇರಿ ಮಾರ್ಗ ಮೀರಿದ್ದು, ಮೂಲ ಡೆಡ್‌ಲೈನ್‌2017 ಆಗಿತು. ಪ್ರಸ್ತುತ ನೇರಳೆ ಮಾರ್ಗವು (ಬೈಯಪ್ಪನಹಳ್ಳಿ-ಮೈಸೂರು ರಸ್ತೆ)18.10ಕಿ.ಮೀ. ಇದ್ದು, 17 ನಿಲ್ದಾಣಗಳು ಬರುತ್ತವೆ. ಕೆಂಗೇರಿವರೆಗೆವಿಸ್ತರಣೆಯಿಂದ ಮಾರ್ಗದ ಉದ್ದ ಸುಮಾರು 26 ಕಿ.ಮೀ.ಆಗುñದೆ. ‌¤ ಈ ಮಾರ್ಗ ಪೂರ್ಣಗೊಂಡರೆ ನಿತ್ಯ ಸುಮಾರು 75ಸಾವಿರ ಜನರಿಗೆ ಇದರ ಉಪಯೋಗ ಆಗಲಿದೆ.

ಅತ್ತ 15.25ಕಿ.ಮೀ.ಉದ್ದದಬೈಯಪ್ಪನಹಳ್ಳಿಯಿಂದವೈಟ್‌ಫೀಲ್ಡ್‌ವರೆಗೆವಿÓ¤ರಿತ ‌ಮಾರ್ಗದ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಇನ್ನು ಹಸಿರುಮಾರ್ಗವು(ನಾಗಸಂದ್ರ-ಸಿಲ್ಕ್ ಇನ್‌ಸ್ಟಿಟ್ಯೂಟ್‌)30ಕಿ.ಮೀ. ಇದೆ. ಕೆಂಗೇರಿವರೆಗೆ ಮೆಟ್ರೋ ವಿಸ್ತರಣೆಯಿಂದ ಆ ಮಾರ್ಗದುದ್ದಕ್ಕೂಬರುವ ಪ್ರದೇಶಗಳಲ್ಲಿರುವ ಭೂಮಿಗೆ ಬೇಡಿಕೆ ಬರಲಿದೆ. ಅಲ್ಲದೆ,ಈಗಾಗಲೇ ತಲೆಯೆತ್ತಿದ ವಸತಿ ಸಮುತ್ಛಯಗಳು ಮತ್ತು ವಾಣಿಜ್ಯಸಮುತ್ಛಯಗಳಿಗೂ ಬೇಡಿಕೆ ಬರಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.