Advertisement

Karnataka Election 2023: ಎಂ 3 ಮತಯಂತ್ರ ಈ ಬಾರಿಯ ವಿಶೇಷ

12:12 PM Apr 05, 2023 | Team Udayavani |

ಮಂಗಳೂರು: ಈ ಬಾರಿ ಮತದಾರರು ಹೊಸದಾದ ಎಂ-3 (ಮಾರ್ಕ್‌-3) ಮತಯಂತ್ರಗಳಲ್ಲಿ ಮತಹಾಕಬಹುದು. ಹಿಂದಿನ ಬಿಇಎಲ್‌ ಉತ್ಪಾದಿತ ಮತಯಂತ್ರಗಳ ಬದಲಿಗೆ ಹೈದರಾಬಾದ್‌ನ ಎಲೆಕ್ಟ್ರಾನಿಕ್ಸ್‌ ಕಾರ್ಪೊ ರೇಷನ್‌ ಆಫ್‌ ಇಂಡಿಯಾ ಲಿ. ಸಂಸ್ಥೆಯವರು ಉತ್ಪಾದಿ ಸಿರುವ ನೂತನ ಮಾರ್ಕ್‌ 3 ಮತಯಂತ್ರಗಳನ್ನು ತರಿಸಲಾಗಿದೆ.

Advertisement

ದಕ್ಷಿಣ ಕನ್ನಡ ಜಿಲ್ಲೆಗೆ ಒಟ್ಟು 3,687 ಮತದಾನ ಘಟಕ, 2,587 ನಿಯಂತ್ರಣ ಘಟಕ ಹಾಗೂ 2,790 ವಿವಿಪಾಟ್‌ಗಳು ಆಗಮಿಸಿದ್ದು, ಅವುಗಳನ್ನು ಭದ್ರತಾ ಕೊಠಡಿಯಲ್ಲಿ ಈಗಾಗಲೇ ಇರಿಸಲಾಗಿದೆ. ಅಲ್ಲದೇ ಅವುಗಳ ಪ್ರಥಮ ಹಂತದ ತಪಾಸಣೆಯನ್ನೂ ಕೈಗೊಳ್ಳಲಾಗಿದೆ.

ಮೊದಲ ರ್‍ಯಾಂಡಮೈಸೇಶನ್‌ ಆದ ಕೂಡಲೇ ಈ ಮತಯಂತ್ರಗಳನ್ನು ಚುನಾವಣಾಧಿಕಾರಿಗಳಿಗೆ ಹಸ್ತಾಂತರಿಸಿ ಮುಂದಿನ ಮತದಾನ ಪ್ರಕ್ರಿಯೆ ನಡೆಯುತ್ತದೆ. ಒಟ್ಟು 1,680 ಮತಗಟ್ಟೆಗಳು ಜಿಲ್ಲೆಯಲ್ಲಿವೆ. ಒಂದು ಮತಯಂತ್ರದಲ್ಲಿ ನೋಟಾ ಸೇರಿ 16 ಅಭ್ಯರ್ಥಿಗಳ ಹೆಸರು ಹಾಕಬಹುದು, ಹೆಚ್ಚು ಅಭ್ಯರ್ಥಿಗಳಿದ್ದರೆ ಹೆಚ್ಚುವರಿ ಮತದಾನ ಘಟಕಗಳನ್ನು ಅಳವಡಿಸಬೇಕಾಗುತ್ತದೆ.

ಪ್ರಯೋಜನಗಳೇನು?
ಹೊಸ ಮತಯಂತ್ರಗಳ ಪ್ರಯೋಜನವೆಂದರೆ ಇವು ಹಗುರ ಹಾಗೂ ತೆಳುವಾಗಿವೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ತಯಾರಿಸಲಾಗಿವೆ.
ಹಿಂದಿನ ಮತಯಂತ್ರಗಳಲ್ಲಿ ಒಂದು ಕಂಟ್ರೋಲ್‌ ಯುನಿಟ್‌ಗೆ 4 ಬ್ಯಾಲಟ್‌ ಯುನಿಟ್‌ಗಳನ್ನಷ್ಟೇ ಜೋಡಿಸಲು ಸಾಧ್ಯವಿತ್ತು. ಈಗಿನ ಯಂತ್ರದಲ್ಲಿ 24 ಬ್ಯಾಲಟ್‌ ಯುನಿಟ್‌ ಜೋಡಿಸಬಹುದು. ಹೀಗಾಗಿ 384 ಅಭ್ಯರ್ಥಿಗಳಿದ್ದರೂ ಇದರಲ್ಲಿ ಸಂಭಾಳಿಸಬಹುದು.

ಎಂ-3 ಕಂಟ್ರೋಲ್‌ ಯುನಿಟ್‌ನಲ್ಲಿ ಬ್ಯಾಟರಿ ಬಾಕಿ ಪ್ರಮಾಣ ನಿರಂತರವಾಗಿ ತೋರಿಸುತ್ತದೆ. ಇದರಿಂದಾಗಿ ಬ್ಯಾಟರಿ ಮುಗಿಯುವ ಮುನ್ನ ಮತಗಟ್ಟೆ ಅಧಿ ಕಾರಿಯು ಬೇರೆ ಬ್ಯಾಟರಿ ನೀಡುವಂತೆ ಕೇಳಿಕೊಂಡು ಮತದಾನ ಪ್ರಕ್ರಿಯೆ ಅಡ್ಡಿಯಾಗದಂತೆ ನಿರ್ವಹಿಸಬಹುದು.

Advertisement

ಸ್ವಯಂ ಪರಿಶೀಲನೆ
ಈ ಇವಿಎಂಗಳು ಪ್ರತಿಬಾರಿ ಸ್ವಿಚ್‌ ಆನ್‌ ಮಾಡಿದಾಗಲೂ ತನ್ನ ಘಟಕಗಳ ಸ್ಥಿತಿಯನ್ನು ಸ್ವಯಂ ಪರಿಶೀಲನೆ ಮಾಡುತ್ತವೆ. ಇದರಿಂದಾಗಿ ಇವಿಎಂ, ವಿವಿಪಾಟ್‌ಗಳು ಮತದಾನ ಶುರುವಾಗುವ ಮೊದಲೇ ಸರಿಯಿದೆಯೇ ಎನ್ನುವುದನ್ನು ತಿಳಿಯಲು ಸಾಧ್ಯ.

Advertisement

Udayavani is now on Telegram. Click here to join our channel and stay updated with the latest news.

Next