Advertisement

ವಿಧಾನ-ಕದನ 2023: ಕಣದಲ್ಲಿ ಜಿಗಿತ ವೀರರದೇ ಜಿಂದಗಿ..!

12:06 AM Apr 26, 2023 | Team Udayavani |

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ 33 ಜಿಗಿತ ವೀರರು ಅಖಾಡದಲ್ಲಿದ್ದಾರೆ. ಟಿಕೆಟ್‌ ಸಿಗದಿರುವುದು ಸಹಿತ ಹಲವು ಕಾರಣಗಳಿಂದ ಪಕ್ಷಾಂತರ ಮಾಡಿರುವ ರಾಜಕಾರಣಿಗಳು ಈಗ ಹೊಸದಾಗಿ ಸೇರ್ಪಡೆಯಾದ ಪಕ್ಷಗಳಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ಧಾರೆ.

Advertisement

ಮಾಜಿ ಸಿಎಂ, ಡಿಸಿಎಂ ಸಹಿತ 7 ಮಾಜಿ ಸಚಿವರು, ಓರ್ವ ಮಾಜಿ ಸಂಸದರು ಇದರಲ್ಲಿ ಸೇರಿದ್ಧಾರೆ. ಆಡಳಿತಾರೂಢ ಬಿಜೆಪಿಯಿಂದ ಹತ್ತು ಮಂದಿ ಕಾಂಗ್ರೆಸ್‌ಗೆ ಪಕ್ಷಾಂತರಗೊಂಡಿ ದ್ದರೆ, ಕಾಂಗ್ರೆಸ್‌ನಿಂದ ಬಿಜೆಪಿಗೆ 6 ಮಂದಿ ಜಿಗಿದಿದ್ದಾರೆ. ಅದೇ ರೀತಿ ಕಾಂಗ್ರೆಸ್‌ನಿಂದ 6 ಮಂದಿ ಜೆಡಿಎಸ್‌ಗೆ, ಬಿಜೆಪಿಯಿಂದ 7 ಮಂದಿಗೆ ಜೆಡಿಎಸ್‌ಗೆ ಪಕ್ಷಾಂತರಗೊಂಡಿದ್ದಾರೆ.
ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಮೂವರು ಹೋಗಿ ಸ್ಪರ್ಧಾಕಣ ದಲ್ಲಿದ್ದಾರೆ. ಕಾಂಗ್ರೆಸ್‌ನಿಂದ ಬಿಎಸ್‌ಪಿಗೆ ಒಬ್ಬರು, ಬಿಜೆಪಿಯಿಂದ ಎನ್‌ಸಿಪಿಗೆ ಒಬ್ಬರು ಸೇರ್ಪಡೆಯಾಗಿ
ಕಣದಲ್ಲಿದ್ದಾರೆ.

ಬಿಜೆಪಿಯಲ್ಲಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಬಿಜೆಪಿಗೆ ಸಡ್ಡು ಹೊಡೆದು ಸ್ವಂತ ಪಕ್ಷ ಕೆಆರ್‌ಪಿಪಿ ಸ್ಥಾಪಿಸಿ ಪತ್ನಿ ಸಹಿತ ಕಣಕ್ಕಿಳಿದಿದ್ದಾರೆ. ಅಷ್ಟೇ ಅಲ್ಲದೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ.

ಅಚ್ಚರಿ ಪಕ್ಷಾಂತರ: ಈ ಬಾರಿಯ ಚುನಾವಣೆಯಲ್ಲಿ ಕೆಲವೊಂದು ಅಚ್ಚರಿ ಪಕ್ಷಾಂತರ ನಡೆದು ರಾಜಕೀಯ ವಾಗಿಯೂ ಕುತೂಹಲ ಮೂಡಿಸಿದೆ. ಜಗದೀಶ್‌ ಶೆಟ್ಟರ್‌ ಹಾಗೂ ಲಕ್ಷ್ಮಣ ಸವದಿ ಬಿಜೆಪಿಯಿಂದ ಕಾಂಗ್ರೆಸ್‌ ಸೇರಿದ್ದು, ಜೆಡಿಎಸ್‌ ಶಾಸಕರಾಗಿದ್ದ ಶಿವಲಿಂಗೇಗೌಡ, ಗುಬ್ಬಿ ಶ್ರೀನಿವಾಸ್‌, ಕೆ. ಶ್ರೀನಿವಾಸಗೌಡ ಕಾಂಗ್ರೆಸ್‌, ಎ.ಟಿ.ರಾಮಸ್ವಾಮಿ ಬಿಜೆಪಿ ಸೇರಿದ್ದು, ಬಿಜೆಪಿಯಲ್ಲಿದ್ದ ಲಕ್ಷ್ಮಣ ಸವದಿ, ಪುಟ್ಟಣ್ಣ, ಚಿಂಚನಸೂರ್‌, ಆಯನೂರ್‌ ಮಂಜುನಾಥ್‌ ವಿಧಾನ ಪರಿಷತ್‌ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿ ಅಸೆಂಬ್ಲಿ ಕಣಕ್ಕೆ ಧುಮುಕಿದ್ದು ಈ ಬಾರಿಯ ಹೈಲೆಟ್ಸ್‌ ಎಂದೇ ಹೇಳಬಹುದು.

Advertisement

ವಿಧಾನಪರಿಷತ್‌ ಅವಧಿ ಇನ್ನೂ ಇದ್ದರೂ ರಾಜೀನಾಮೆ ನೀಡಿ ವಿಧಾನಸಭೆ ಚುನಾವಣೆ ಕಣಕ್ಕೆ ಇಳಿದಿರುವವರು ಈ ಚುನಾವಣೆಯಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ. ಇಲ್ಲವಾದರೆ ಇದ್ದ ಅಧಿಕಾರ ಕಳೆದುಕೊಂಡು ಮಾಜಿಗಳಾಗಬೇಕಾಗುತ್ತದೆ.

l ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌: ಜಗದೀಶ್‌ ಶೆಟ್ಟರ್‌- ಬಿಜೆಪಿಯಿಂದ ಕಾಂಗ್ರೆಸ್‌. ಪ್ರತಿಸ್ಪರ್ಧಿ ಮಹೇಶ್‌ ಟೆಂಗಿನಕಾಯಿ(ಬಿಜೆಪಿ), ಸಿದ್ದಲಿಂಗೇಗೌಡ(ಜೆಡಿಎಸ್‌)
l ಅಥಣಿ: ಲಕ್ಷ್ಮಣ ಸವದಿ- ಬಿಜೆಪಿಯಿಂದ ಕಾಂಗ್ರೆಸ್‌. ಪ್ರತಿಸ್ಪರ್ಧಿಗಳು ಬಿಜೆಪಿಯ ಮಹೇಶ್‌ ಕುಮಟಳ್ಳಿ ಹಾಗೂ ಜೆಡಿಎಸ್‌ನ ಶಶಿಕಾಂತ್‌. ಉಪ ಚುನಾವಣೆಯಲ್ಲಿ ಮಹೇಶ್‌ ಕುಮಟಳ್ಳಿ ಪರ ಕೆಲಸ ಮಾಡಿದ್ದ ಸವದಿ ನೇರ ಪ್ರತಿಸ್ಪರ್ಧಿ.
l ರಾಮದುರ್ಗ: ಚಿಕ್ಕರೇವಣ್ಣ- ಕಾಂಗ್ರೆಸ್‌ನಿಂದ ಬಿಜೆಪಿ. ಪ್ರತಿಸ್ಪರ್ಧಿಗಳು ಕಾಂಗ್ರೆಸ್‌ನ ಅಶೋಕ್‌ ಪಟ್ಟಣ್‌, ಜೆಡಿಎಸ್‌ನ ಪ್ರಕಾಶ್‌ ಮುಧೋಳ್‌.
l ಬಾಗಲಕೋಟೆ: ದೇವರಾಜ ಪಾಟೀಲ್‌- ಕಾಂಗ್ರೆಸ್‌ನಿಂದ ಜೆಡಿಎಸ್‌. ಪ್ರತಿಸ್ಪರ್ಧಿಗಳು ಕಾಂಗ್ರೆಸ್‌ನ ಎಚ್‌.ವೈ ಮೇಟಿ, ಬಿಜೆಪಿಯ ವೀರಣ್ಣ ಚರಂತಿಮs…
l ಯಾದಗಿರಿ: ಎ.ಬಿ.ಮಾಲಕರೆಡ್ಡಿ- ಬಿಜೆಪಿಯಿಂದ ಜೆಡಿಎಸ್‌. ಪ್ರತಿಸ್ಪರ್ಧಿಗಳು ಕಾಂಗ್ರೆಸ್‌ನ ಚೆನ್ನಾರೆಡ್ಡಿ ಪಾಟೀಲ್‌, ಬಿಜೆಪಿಯ ವೆಂಕಟರೆಡ್ಡಿ ಮುದ್ನಾಳ್‌.
l ಗುರುಮಿಟ್ಕಲ್‌: ಬಾಬೂರಾವ್‌ ಚಿಂಚನಸೂರ್‌- ಬಿಜೆಪಿಯಿಂದ ಕಾಂಗ್ರೆಸ್‌. ಪ್ರತಿಸ್ಪರ್ಧಿಗಳು ಜೆಡಿಎಸ್‌ನ ಶರಣಗೌಡ ಕಂದಕೂರ್‌, ಬಿಜೆಪಿಯ ಲಲಿತಾ ಅನಪುರ.
l ಬೀದರ್‌: ಸೂರ್ಯಕಾಂತ ನಾಗಮಾರಪಲ್ಲಿ- ಬಿಜೆಪಿಯಿಂದ ಜೆಡಿಎಸ್‌. ಪ್ರತಿಸ್ಪರ್ಧಿಗಳು ಕಾಂಗ್ರೆಸ್‌ನ ರಹೀಂಖಾನ್‌, ಬಿಜೆಪಿಯ ಈಶ್ವರ್‌ ಸಿಂಗ್‌ ಠಾಕೂರ್‌.
l ಮಾನ್ವಿ: ಬಿ.ವಿ.ನಾಯಕ್‌- ಕಾಂಗ್ರೆಸ್‌ನಿಂದ ಬಿಜೆಪಿ. ಪ್ರತಿಸ್ಪರ್ಧಿಗಳು ಕಾಂಗ್ರೆಸ್‌ನ ಹಂಪಯ್ಯನಾಯ್ಕ, ಜೆಡಿಎಸ್‌ನ ರಾಜಾ ವೆಂಕಟಪ್ಪ ನಾಯಕ್‌.
l ಕೊಪ್ಪಳ: ಸಿ.ವಿ.ಚಂದ್ರಶೇಖರ್‌- ಬಿಜೆಪಿಯಿಂದ ಜೆಡಿಎಸ್‌. ಪ್ರತಿಸ್ಪರ್ಧಿಗಳು ಕಾಂಗ್ರೆಸ್‌ನ ರಾಘವೇಂದ್ರ ಹಿಟ್ನಾಳ್‌, ಬಿಜೆಪಿಯ ಮಂಜುಳಾ ಕರಡಿ.
l ಕಲಘಟಗಿ: ನಾಗರಾಜ್‌ ಛಬ್ಬಿ- ಕಾಂಗ್ರೆಸ್‌ನಿಂದ ಬಿಜೆಪಿ. ಪ್ರತಿಸ್ಪರ್ಧಿಗಳು ಕಾಂಗ್ರೆಸ್‌ನ ಸಂತೋಷ್‌ ಲಾಡ್‌, ಜೆಡಿಎಸ್‌ನ ವೀರಪ್ಪ ಬಸಪ್ಪ.
l ಹಳಿಯಾಳ: ಘೋಕ್ಲೃಕರ್‌- ಕಾಂಗ್ರೆಸ್‌ನಿಂದ ಜೆಡಿಎಸ್‌. ಪ್ರತಿಸ್ಪರ್ಧಿಗಳು ಕಾಂಗ್ರೆಸ್‌ನ ಆರ್‌. ವಿ.ದೇಶಪಾಂಡೆ, ಬಿಜೆಪಿಯ ಸುನಿಲ್‌ ಹೆಗಡೆ.

l ಯಲ್ಲಾಪುರ: ವಿ.ಎಸ್‌.ಪಾಟೀಲ್‌- ಬಿಜೆಪಿಯಿಂದ ಕಾಂಗ್ರೆಸ್‌. ಪ್ರತಿಸ್ಪರ್ಧಿಗಳು ಬಿಜೆಪಿಯ ಶಿವರಾಂ ಹೆಬ್ಟಾರ್‌, ಜೆಡಿಎಸ್‌ನ ನಾಗೇಂದ್ರ ನಾಯ್ಕ. ಇಲ್ಲಿಯೂ ಉಪ ಚುನಾವಣೆಯಲ್ಲಿ ವಿ.ಎಸ್‌.ಪಾಟೀಲ್‌ ಶಿವರಾಂ ಹೆಬ್ಟಾರ್‌ ಪರ ಕೆಲಸ ಮಾಡಿದ್ದರು . ಇಂದು ಪ್ರತಿಸ್ಪರ್ಧಿ.
l ಹಾನಗಲ್‌: ಮನೋಹರ ತಹಸೀಲ್ದಾರ್‌- ಕಾಂಗ್ರೆಸ್‌ನಿಂದ ಜೆಡಿಎಸ್‌. ಪ್ರತಿ ಸ್ಪರ್ಧಿಗಳು ಕಾಂಗ್ರೆಸ್‌ನ ಶ್ರೀನಿವಾಸ ಮಾನೆ, ಬಿಜೆಪಿಯ ಶಿವರಾಜ್‌ ಸಜ್ಜನ್‌.
l ಹಿರೇಕೆರೂರು: ಯು.ಬಿ.ಬಣಕಾರ್‌- ಬಿಜೆಪಿಯಿಂದ ಕಾಂಗ್ರೆಸ್‌. ಪ್ರತಿಸ್ಪರ್ಧಿಗಳು ಬಿಜೆಪಿಯ ಬಿ.ಸಿ.ಪಾಟೀಲ್‌, ಜೆಡಿಎಸ್‌ನ ಜಯಾನಂದ ಜಾವಣ್ಣನವರ್‌.
l ಹಗರಿಬೊಮ್ಮನಹಳ್ಳಿ: ನೇಮಿರಾಜ್‌ ನಾಯ್ಕ- ಬಿಜೆಪಿಯಿಂದ ಜೆಡಿಎಸ್‌. ಪ್ರತಿಸ್ಪರ್ಧಿಗಳು ಕಾಂಗ್ರೆಸ್‌ನ ಭೀಮಾ ನಾಯ್ಕ, ಬಿಜೆಪಿಯ ರಾಮಣ್ಣ.
l ಬಳ್ಳಾರಿ ನಗರ: ಅನಿಲ್‌ ಲಾಡ್‌- ಕಾಂಗ್ರೆಸ್‌ನಿಂದ ಜೆಡಿಎಸ್‌. ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಭರತ್‌ ರೆಡ್ಡಿ, ಬಿಜೆಪಿ ಸೋಮಶೇಖರರೆಡ್ಡಿ, ಕೆಆರ್‌ಪಿಪಿಯಿಂದ ಅರುಣಾದೇವಿ.
l ಕೂಡ್ಲಿಗಿ: ಲೋಕೇಶ್‌ನಾಯಕ್‌- ಕಾಂಗ್ರೆಸ್‌ನಿಂದ ಬಿಜೆಪಿ. ಪ್ರತಿಸ್ಪರ್ಧಿ ಕಾಂಗ್ರೆಸ್‌ನಿಂದ ಡಾ| ಶ್ರೀನಿವಾಸ್‌, ಜೆಡಿಎಸ್‌ನಿಂದ ಕೋಡಹಳ್ಳಿ ಭೀಮಪ್ಪ.
l ಮೊಳಕಾಳ್ಮೂರು: ವೈ.ಎನ್‌.ಗೋಪಾಲಕೃಷ್ಣ- ಬಿಜೆಪಿಯಿಂದ ಕಾಂಗ್ರೆಸ್‌. ತಿಪ್ಪೇಸ್ವಾಮಿ- ಕಾಂಗ್ರೆಸ್‌ನಿಂದ ಬಿಜೆಪಿ. ಪ್ರತಿಸ್ಪರ್ಧಿ ಜೆಡಿಎಸ್‌ನಿಂದ ವೀರಭದ್ರಪ್ಪ.
l ಚಿತ್ರದುರ್ಗ: ರಘು ಆಚಾರ್‌- ಕಾಂಗ್ರೆಸ್‌ನಿಂದ ಜೆಡಿಎಸ್‌. ಪ್ರತಿಸ್ಪರ್ಧಿ ಕಾಂಗ್ರೆಸ್‌ನಿಂದ ವೀರೇಂದ್ರ ಪಪ್ಪಿ, ಬಿಜೆಪಿಯಿಂದ ತಿಪ್ಪಾರೆಡ್ಡಿ, ಪಕ್ಷೇತರ ಸೌಭಾಗ್ಯ ಬಸವರಾಜ್‌.
l ಶಿವಮೊಗ್ಗ: ಆಯನೂರು ಮಂಜುನಾಥ್‌- ಬಿಜೆಪಿಯಿಂದ ಜೆಡಿಎಸ್‌. ಪ್ರತಿಸ್ಪರ್ಧಿಗಳು ಕಾಂಗ್ರೆಸ್‌ನ ಎಚ್‌.ಸಿ.ಯೋಗೇಶ್‌, ಬಿಜೆಪಿಯ ಚನ್ನಬಸಪ್ಪ.
l ಚಿಕ್ಕಮಗಳೂರು: ಎಚ್‌.ಡಿ.ತಮ್ಮಯ್ಯ- ಬಿಜೆಪಿಯಿಂದ ಕಾಂಗ್ರೆಸ್‌. ಪ್ರತಿಸ್ಪರ್ಧಿಗಳು ಬಿಜೆಪಿಯ ಸಿ.ಟಿ.ರವಿ, ಜೆಡಿಎಸ್‌ನ ತಿಮ್ಮಶೆಟ್ಟಿ.
l ಮೂಡಿಗೆರೆ: ಎಂ.ಪಿ.ಕುಮಾರಸ್ವಾಮಿ- ಬಿಜೆಪಿಯಿಂದ ಜೆಡಿಎಸ್‌. ಪ್ರತಿಸ್ಪರ್ಧಿ ಕಾಂಗ್ರೆಸ್‌ನ ನಯನಾ ಮೋಟಮ್ಮ, ಬಿಜೆಪಿಯ ದೀಪಕ್‌ ದೊಡ್ಡಯ್ಯ.

l ಕಡೂರು: ವೈಎಸ್‌ವಿ ದತ್ತಾ- ಜೆಡಿಎಸ್‌ನಿಂದ ಕಾಂಗ್ರೆಸ್‌ ಮತ್ತೆ ಕಾಂಗ್ರೆಸ್‌ನಿಂದ ಜೆಡಿಎಸ್‌. ಪ್ರತಿಸ್ಪರ್ಧಿಗಳು ಬಿಜೆಪಿಯ ಬೆಳ್ಳಿ ಪ್ರಕಾಶ್‌, ಕಾಂಗ್ರೆಸ್‌ನ ಆನಂದ್‌.
l ಚಿಕ್ಕನಾಯಕಹಳ್ಳಿ: ಕಿರಣ್‌ಕುಮಾರ್‌- ಬಿಜೆಪಿಯಿಂದ ಕಾಂಗ್ರೆಸ್‌. ಪ್ರತಿಸ್ಪರ್ಧಿಗಳು ಬಿಜೆಪಿಯ ಮಾಧುಸ್ವಾಮಿ, ಜೆಡಿಎಸ್‌ನ ಸುರೇಶ್‌ಬಾಬು.
l ಗುಬ್ಬಿ: ಎಸ್‌.ಆರ್‌.ಶ್ರೀನಿವಾಸ್‌- ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ. ಪ್ರತಿ ಸ್ಪರ್ಧಿಗಳು ಬಿಜೆಪಿಯ ದಿಲೀಪ್‌ಕುಮಾರ್‌, ಜೆಡಿಎಸ್‌ನ ನಾಗರಾಜ್‌.
l ನೆಲಮಂಗಲ: ಸಪ್ತಗಿರಿ ನಾಯಕ್‌- ಕಾಂಗ್ರೆಸ್‌ನಿಂದ ಬಿಜೆಪಿ. ಪ್ರತಿಸ್ಪರ್ಧಿಗಳು ಕಾಂಗ್ರೆಸ್‌ನ ಎನ್‌.ಶ್ರೀನಿವಾಸ್‌, ಜೆಡಿಎಸ್‌ನ ಶ್ರೀನಿವಾಸಮೂರ್ತಿ.
l ಕೆ.ಆರ್‌.ಪೇಟೆ: ಬಿ.ಎಲ್‌.ದೇವರಾಜ್‌- ಜೆಡಿಎಸ್‌ನಿಂದ ಕಾಂಗ್ರೆಸ್‌. ಪ್ರತಿಸ್ಪರ್ಧಿಗಳು ಬಿಜೆಪಿಯ ನಾರಾಯಣ ಗೌಡ‌, ಜೆಡಿಎಸ್‌ನ ಎಚ್‌.ಟಿ.ಮಂಜುನಾಥ್‌.
l ಅರಸೀಕರೆ: ಶಿವಲಿಂಗೇಗೌಡ- ಜೆಡಿಎಸ್‌ನಿಂದ ಕಾಂಗ್ರೆಸ್‌. ಎನ್‌.ಆರ್‌.ಸಂತೋಷ್‌- ಬಿಜೆಪಿಯಿಂದ ಜೆಡಿಎಸ್‌. ಪ್ರತಿಸ್ಪರ್ಧಿ ಬಿಜೆಪಿಯ ಜಿ.ವಿ.ಬಸವರಾಜ್‌.
l ವರುಣಾ: ಭಾರತಿ ಶಂಕರ್‌- ಬಿಜೆಪಿಯಿಂದ ಜೆಡಿಎಸ್‌. ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಸಿದ್ದರಾಮಯ್ಯ, ಬಿಜೆಪಿಯ ವಿ.ಸೋಮಣ್ಣ.
l ಪುಲಕೇಶಿನಗರ: ಅಖಂಡ ಶ್ರೀನಿವಾಸಮೂರ್ತಿ- ಕಾಂಗ್ರೆಸ್‌ನಿಂದ ಬಿಎಸ್‌ಪಿ. ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಎ.ಸಿ.ಶ್ರೀನಿವಾಸ್‌, ಬಿಜೆಪಿಯ ಮುರುಳಿ, ಜೆಡಿಎಸ್‌ನ ಅನುರಾಧ.
l ರಾಜಾಜಿನಗರ: ಪುಟ್ಟಣ್ಣ- ಬಿಜೆಪಿಯಿಂದ ಕಾಂಗ್ರೆಸ್‌. ಪ್ರತಿಸ್ಪರ್ಧಿಗಳು ಬಿಜೆಪಿಯ ಸುರೇಶ್‌ಕುಮಾರ್‌, ಜೆಡಿಎಸ್‌ನ ಡಾ| ಆಂಜನಪ್ಪ.
l ರಾಣಿಬೆನ್ನೂರು: ಆರ್‌.ಶಂಕರ್‌- ಬಿಜೆಪಿಯಿಂದ ಎನ್‌ಸಿಪಿ. ಪ್ರತಿಸ್ಪರ್ಧಿಗಳು ಬಿಜೆಪಿಯ ಅರುಣ್‌ಕುಮಾರ್‌, ಕಾಂಗ್ರೆಸ್‌ನ ಪ್ರಕಾಶ್‌ ಕೋಳಿವಾಡ.
l ಗಂಗಾವತಿ: ಜನಾರ್ದನ ರೆಡ್ಡಿ – ಬಿಜೆಪಿಯಿಂದ ಸ್ವಂತ ಪಕ್ಷ ಕೆಆರ್‌ಪಿಪಿಗೆ. ಪ್ರತಿಸ್ಪರ್ಧಿ ಬಿಜೆಪಿಯ ಪರಣ್ಣ ಮುನವಳ್ಳಿ, ಕಾಂಗ್ರೆಸ್‌ನ ಇಕ್ಬಾಲ್‌ ಅನ್ಸಾರಿ, ಜೆಡಿಎಸ್‌ನ ಎಚ್‌.ಆರ್‌.ಚನ್ನಕೇಶವ.

Advertisement

Udayavani is now on Telegram. Click here to join our channel and stay updated with the latest news.

Next