Advertisement

Met Gala 2024: ಇವೆಂಟ್‌ನಲ್ಲಿ ಭಾಗಿಯಾಗದ ಖ್ಯಾತ ಸೆಲೆಬ್ರಿಟಿಗಳ ಡೀಪ್‌ ಫೇಕ್‌ ಫೋಟೋ ವೈರಲ್

03:47 PM May 07, 2024 | Team Udayavani |

ನವದೆಹಲಿ: ನ್ಯೂಯಾರ್ಕ್ ನಲ್ಲಿ ನಡೆಯುವ ಜಗತ್ತಿನ ಶ್ರೇಷ್ಠ ಫ್ಯಾಷನ್‌ ಇವೆಂಟ್‌  ಮೆಟ್​ ಗಾಲಾ ಈ ಬಾರಿ ಅದ್ಧೂರಿಯಾಗಿ ಆಯೋಜನೆಗೊಂಡಿದೆ.

Advertisement

ಪ್ರತಿ ವರ್ಷದ ವಿಶಿಷ್ಠ ಥೀಮ್‌ ನಲ್ಲಿ ಮೆಟ್‌ ಗಾಲಾ ನಡೆಯುತ್ತದೆ. ಈ ಫ್ಯಾಷನ್‌ ಹಬ್ಬದಲ್ಲಿ ಜಗತ್ತಿನ ಖ್ಯಾತ ಸೆಲೆಬ್ರಿಟಿಗಳು ಭಾಗವಹಿಸುತ್ತಾರೆ. ಈ ಬಾರಿ ಭಾರತದ ಆಲಿಯಾ ಭಟ್‌ ಟ್ರೆಡಿಷನಲ್ ಲುಕ್​ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಅವರ ಬ್ಯೂಟಿ ಲುಕ್‌ ವೈರಲ್‌ ಆಗಿದೆ.

ಈ ನಡುವೆ ಮೆಟ್‌ ಗಾಲಾದಲ್ಲಿ ಭಾಗಿಯಾಗಿದ್ದಾರೆ ಎಂದು ಖ್ಯಾತ ಸೆಲೆಬ್ರಿಟಿಗಳ ಫೋಟೋವನ್ನು ಡೀಪ್‌ ಫೇಕ್‌ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಹರಿದುಬಿಡಲಾಗಿದೆ.

ಬಾರ್ಬಡಿಯನ್ ಗಾಯಕಿ, ಪಾಪ್‌ ವರ್ಲ್ಡ್‌ ನಲ್ಲಿ ಖ್ಯಾತ ಹೆಸರಾಗಿರುವ  ರಿಹಾನ್ನಾ, ಅಮೆರಿಕಾದ ಗಾಯಕಿ ಕೇಟಿ ಪೆರ್ರಿ, ಹಾಲಿವುಡ್‌ ನಟಿ ಲೇಡಿ ಗಾಗಾ ಅವರ ಎಐ ರಚಿತ ಡೀಪ್‌ ಫೇಕ್‌ ಫೋಟೋಗಳು ವೈರಲ್‌ ಆಗಿದೆ.

ರಿಹಾನ್ನಾ ಮೆಟ್‌ ಗಾಲದಲ್ಲಿ ಭಾಗಿಯಾಗಬೇಕಿದ್ದ ಪ್ರಮುಖ ಸೆಲೆಬ್ರಿಟಿ ಆಗಿದ್ದರು. ಅವರು ಭಾಗಿಯಾಗುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಅವರು ಇವೆಂಟ್‌ ಗೆ ಬಂದಿಲ್ಲ. ಆದರೆ ಹಸಿರು ಬಣ್ಣದ ಗೌನ್‌ ತೊಟ್ಟು, ಕಮಾನಿನಂತಿರುವ  ವಿಸ್ತಾರವಾದ ಬಟ್ಟೆಯನ್ನು ಹಾಕಿರುವ ರಿಹಾನ್ನಾ ಅವರ ಫೋಟೋ ವೈರಲ್‌ ಆಗಿದೆ.

Advertisement

ಗ್ರ್ಯಾಮಿ ಪ್ರಶಸ್ತಿ ವಿಜೇತ ಗಾಯಕಿ ರಿಹಾನ್ನಾ ಜ್ವರದಿಂದ ಬಳಲುತ್ತಿರುವ ಕಾರಣ ವಾರ್ಷಿಕ ಮೆಟ್‌ ಗಾಲಾ ಕಾರ್ಯಕ್ರಮಕ್ಕೆ ಹಾಜರಾಗುವುದಿಲ್ಲ ಎಂದು ಪೀಪಲ್ಸ್ ಮ್ಯಾಗ್‌ ಜಿನ್‌ ವರದಿ ತಿಳಿಸಿದೆ.

ಇದಲ್ಲದೆ ಗಾಯಕಿ ಕೇಟಿ ಪೆರ್ರಿ, ಅವರು ರೆಡ್‌ ಕಾರ್ಪೆಟ್‌ ಗೆ ಬಂದಿರುವ ಎಐ ರಚಿತ ಡೀಪ್‌ ಫೇಕ್‌ ಫೋಟೋ ವೈರಲ್‌ ಆಗಿದೆ. ಇದನ್ನು ನೋಡಿ ಸ್ವತಃ ಕೇಟಿ ಅವರೇ ಶಾಕ್‌ ಆಗಿದ್ದಾರೆ. ಅವರ ಎಐ ಫೋಟೋವನ್ನು ಕೇಟಿ ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಅವರ ತಾಯಿ ಮೆಟ್‌ ಗಾಲಾದಲ್ಲಿ ಮಗಳು ಭಾಗಿಯಾಗಿದ್ದಾಳೆ ಅಂದುಕೊಂಡಿದ್ದಾರೆ. ಆದರೆ ಇದು ಎಐ ಫೋಟೋವೆಂದು ಕೇಟಿ ಅವರೇ ತಾಯಿಗೆ ಸ್ಪಷ್ಟನೆ ನೀಡಿದ್ದಾರೆ.

ಇನ್ನು ನಟಿ ಲೇಡಿ ಗಾಗಾ ಅವರ ಸ್ಟೈಲಿಸ್ಟ್‌ ಉಡುಗೆಯ ಫೋಟೋ ಕೂಡ ಎಐನಿಂದ ರಚಿಸಿ ಮೆಟ್‌ ಗಾಲಾ ಇವೆಂಟ್‌ ನಲ್ಲಿ ಭಾಗಿಯಾದ ಫೋಟೋವೆಂದು ವೈರಲ್‌ ಮಾಡಲಾಗಿದೆ.

ವರ್ಷದ ಮೆಟ್ ಗಾಲಾದ ಥೀಮ್ ‘ಸ್ಲೀಪಿಂಗ್ ಬ್ಯೂಟೀಸ್: ರೀವೇಕನಿಂಗ್ ಫ್ಯಾಶನ್’ ಮತ್ತು ಡ್ರೆಸ್ ಕೋಡ್ ‘ದಿ ಗಾರ್ಡನ್ ಆಫ್ ಟೈಮ್ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next