Advertisement

ಹೊಸ ವಿಶ್ವದಾಖಲೆ ಬರೆದ ಲಿಯೋನೆಲ್ ಮೆಸ್ಸಿಯ ಇನ್ಸ್ಟಾಗ್ರಾಮ್ ಪೋಸ್ಟ್

04:54 PM Dec 20, 2022 | Team Udayavani |

ಬ್ಯೂನಸ್ ಐರಿಸ್: ಇದೀಗ ಎಲ್ಲೆಡೆ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಅವರದ್ದೇ ಮಾತು. ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್ ಆಟಗಾರ ಮೆಸ್ಸಿ ಅವರು ಕೊನೆಗೂ ತನ್ನ ವಿಶ್ವಕಪ್ ಕನಸನ್ನು ನನಸು ಮಾಡಿಕೊಂಡರು. ರವಿವಾರ ರಾತ್ರಿ ನಡೆದ ಫುಟ್ಬಾಲ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ತಂಡವು ಫ್ರಾನ್ಸ್ ವಿರುದ್ಧ ಗೆದ್ದು ವಿಶ್ವ ಚಾಂಪಿಯನ್ನರಾಗಿ ಮೂಡಿಬಮತು.

Advertisement

ಕಪ್ ಗೆದ್ದ ಬಳಿಕ ಮೆಸ್ಸಿ ಅವರು ಪೋಸ್ಟ್ ಮಾಡಿದ ಫೋಟೊ ಇದೀಗ ಸಖತ್ ಸದ್ದು ಮಾಡುತ್ತಿದೆ. ವಿಶ್ವಕಪ್ ಗೆದ್ದ ಖುಷಿಯಲ್ಲಿ ಲಿಯೋನೆಲ್ ಮೆಸ್ಸಿ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ “ಚಾಂಪಿಯನ್ಸ್ ಆಫ್ ದಿ ವರ್ಲ್ಡ್” ಎಂಬ ಕ್ಯಾಪ್ಶನ್ ನಲ್ಲಿ ಫೋಟೊ ಹಂಚಿದ್ದರು. ಈ ಪೋಸ್ಟ್ ಇದೀಗ ಇದೀಗ 57 ಮಿಲಿಯನ್ ಲೈಕ್‌ಗಳನ್ನು ಪಡೆದುಕೊಂಡಿದೆ. ಇದು ಇನ್ಸ್ಟಾಗ್ರಾಮ್ ನಲ್ಲಿ ಹೆಚ್ಚು ಇಷ್ಟಪಟ್ಟ ಪೋಸ್ಟ್ ಆಗಿದೆ.

ಇದನ್ನೂ ಓದಿ:ಇಂಗ್ಲೆಂಡ್ ಗೆ ಸರಣಿ: ಮೊದಲ ಬಾರಿಗೆ ತವರಿನಲ್ಲಿ ವೈಟ್ ವಾಶ್ ಅವಮಾನಕ್ಕೆ ಸಿಲುಕಿದ ಪಾಕ್

ಮೆಸ್ಸಿಯ ಪೋಸ್ಟ್ “ವರ್ಲ್ಡ್ ರೆಕಾರ್ಡ್ ಎಗ್” ನ ಪೋಸ್ಟ್ ದಾಖಲೆಯನ್ನು ಮುರಿಯಿತು, ಈ 56 ಮಿಲಿಯನ್‌ ಲೈಕ್ಸ್ ಪಡೆದು ಅತೀ ಹೆಚ್ಚು ಲೈಕ್ಸ್ ಪಡೆದ ಪೊಸ್ಟ್ ಆಗಿತ್ತು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next